ಬೇಕಾಗುವ ಪದಾರ್ಥಗಳು :
100 ಗ್ರಾಂ ಗೋಧಿಹಿಟ್ಟು, 2 ಚಮಚ ಕಸ್ಟರ್ ಶುಗರ್, 2 ಚಿಟಕಿ ಉಪ್ಪು, 1 ಮೊಟ್ಟೆ, ಅರ್ಧ ಕಪ್ ತೆಂಗಿನ ಹಾಲು, 2 ಚಮಚ ಎಣ್ಣೆ, 1-2 ಹನಿ ವೆನಿಲಾ ಎಸೆನ್ಸ್, 1-2 ಚಮಚ ನಿಂಬೆ ರಸ, ಅಗತ್ಯವಿದ್ದಷ್ಟು ಎಣ್ಣೆ.
ಹೂರಣಕ್ಕಾಗಿ :
1 ಗಿಟಕು ತೆಂಗಿನ ತುರಿ, 75 ಗ್ರಾಂ ಬೆಲ್ಲದ ಪುಡಿ, 2-2 ಚಿಟಕಿ ಜಾಯಿಕಾಯಿ ಪುಡಿ – ಏಲಕ್ಕಿ ಪುಡಿ.
ತಯಾರಿಸುವ ವಿಧಾನ :
ಒಂದು ಬಟ್ಟಲಿಗೆ ಗೋಧಿಹಿಟ್ಟು, ಕಸ್ಟರ್ ಶುಗರ್, ಉಪ್ಪು ಹಾಕಿಡಿ. ಇದರ ಮಧ್ಯೆ ಹಳ್ಳ ಮಾಡಿಕೊಂಡು ಮೊಟ್ಟೆ, ತೆಂಗಿನ ಹಾಲು, ಬೆಣ್ಣೆ ಬೆರೆಸಿ ನಿಧಾನವಾಗಿ ಕಲೆಸಬೇಕು. ನಂತರ ವೆನಿಲಾ ಎಸೆನ್ಸ್, ನಿಂಬೆರಸ ಬೆರೆಸಿ ಚೆನ್ನಾಗಿ ಕಲೆಸಿ. ಇದು ದೋಸೆ ಹಿಟ್ಟಿನ ಹದಕ್ಕೆ ಇರಬೇಕು.
1 ತಾಸು ನೆನೆಯಲು ಬಿಡಿ. ಹೂರಣದ ಎಲ್ಲಾ ಸಾಮಗ್ರಿ ಬೆರೆಸಿಕೊಳ್ಳಿ. ಒಂದು ನಾನ್ ಸ್ಟಿಕ್ ಫ್ರೈಯಿಂಗ್ ಪ್ಯಾನ್ ಗೆ 1 ಚಮಚ ಎಣ್ಣೆ ಹಾಕಿ ಹರಡಿಕೊಳ್ಳಿ. ಒಂದು ಸೌಟು ಹಿಟ್ಟು ಹರಡಿ ದೋಸೆ ತರಹ ಎರಡೂ ಬದಿ ಬೇಯಿಸಿ. ಇದಕ್ಕೆ 2-2 ಚಮಚ ಹೂರಣ ಹರಡಿ, ಒಂದು ಬದಿ ಮಡಿಚಿ ಕೆಳಗಿಳಿಸಿ. ಇದರ ಮೇಲೆ ಬೆಣ್ಣೆ ಹಾಕಿ ಬಿಸಿಯಾಗಿ ಸವಿಯಲು ಕೊಡಿ.