
ಬೆಂಗಳೂರು: ಖಾಸಗಿ ಆಸ್ಪತ್ರೆಯಲ್ಲಿ ವೃದ್ಧೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಕೇಳಿ ಬಂದಿದ್ದು ಕೊಡಿಗೇಹಳ್ಳಿ ಪೊಲೀಸರು ಆಸ್ಪತ್ರೆಯ ಸಿಬ್ಬಂದಿ ಅಶೋಕ್ ಎಂಬುವನನ್ನು ಬಂಧಿಸಿದ್ದಾರೆ.
ಆಗಸ್ಟ್ 3ರಂದು ಅನಾರೋಗ್ಯದ ಕಾರಣ ಸಂತ್ರಸ್ತೆ ಆಸ್ಪತ್ರೆಗೆ ದಾಖಲಾಗಿದ್ದರು. ಬೆಂಗಳೂರಿನ ಹೆಬ್ಬಾಳದ ಅಸ್ಟರ್ ಸಿಎಂಐ ಆಸ್ಪತ್ರೆಗೆ ದಾಖಲಾಗಿದ್ದು, ಆಗಸ್ಟ್ 4ರಂದು ರಾತ್ರಿ 1.30ಕ್ಕೆ ಸಿಟಿ ಸ್ಕ್ಯಾನ್ ಇದೆ ಕರೆದುಕೊಂಡು ಹೋಗಲಾಗಿದೆ.
ಸಿಟಿ ಸ್ಕ್ಯಾನ್ ಮೇಲೆ ಮಲಗಿಸಿ ವಿವಸ್ತ್ರಗೊಳಿಸಿದ ವೇಳೆ ಅಶೋಕ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದಾನೆ. ಸೆಕ್ಸ್ ಮಾಡುವಂತೆ ಒತ್ತಾಯಿಸಿದ್ದಾನೆ ಎಂದು ಆರೋಪಿಸಲಾಗಿದೆ. ಸಂತ್ರಸ್ತೆ ದೂರು ನೀಡಿದ್ದು, ದೂರಿನ ಮೇರೆಗೆ ಆರೋಪಿ ಅಶೋಕ್ ವಿರುದ್ಧ ಕೊಡಿಗೇಹಳ್ಳಿ ಎಫ್ಐಆರ್ ದಾಖಲಿಸಲಾಗಿತ್ತು.