HomeEntertainmentರಿಲೀಸ್ ಆಯ್ತು ಧರ್ಮ ಕೀರ್ತಿರಾಜ್ ಅಭಿನಯದ 'ತಲ್ವಾರ್' ಟ್ರೈಲರ್

ರಿಲೀಸ್ ಆಯ್ತು ಧರ್ಮ ಕೀರ್ತಿರಾಜ್ ಅಭಿನಯದ ‘ತಲ್ವಾರ್’ ಟ್ರೈಲರ್

ಬಿಗ್ ಬಾಸ್ ಖ್ಯಾತಿಯ ಧರ್ಮ ಕೀರ್ತಿರಾಜ್ ಅಭಿನಯದ ಬಹು ನಿರೀಕ್ಷಿತ ತಲ್ವಾರ್ ಚಿತ್ರದ ಟ್ರೈಲರ್ ನಿನ್ನ ಯೂಟ್ಯೂಬ್ ನಲ್ಲಿ ಸರಿಗಮ ಕನ್ನಡ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದ್ದು ಭರ್ಜರಿ ವೀಕ್ಷಣೆ ಕಂಡಿದೆ ಲವರ್ ಬಾಯ್ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಧರ್ಮ ಕೀರ್ತಿರಾಜ್ ಈ ಟ್ರೈಲರ್ ಗೆ ನೋಡುಗರಿಂದ ಸಾಕಷ್ಟು ಪ್ರತಿಕ್ರಿಯೆಗಳು ಹರಿದು ಬಂದಿದ್ದು ಅವರ ಈ ರಗಡ್ ಲುಕ್ಕಿಗೆ ಫಿದಾ ಆಗಿದ್ದಾರೆ.

ಮುಮ್ತಾಜ್ ಮುರಳಿ   ನಿರ್ದೇಶನದ ಈ ಚಿತ್ರದಲ್ಲಿ ಧರ್ಮ ಕೀರ್ತಿರಾಜ್, ಅದಿತಿ, ಜೆಕೆ, ಅವಿನಾಶ್ ಮತ್ತು ಶರತ್ ಲೋಹಿತಾಶ್ವ ತೆರೆ ಹಂಚಿಕೊಂಡಿದ್ದು, ಟಚ್ ಪಿಚ್ಚರ್ ಬ್ಯಾನರ್ ನಲ್ಲಿ ಬಿ ಎಂ ಸುರೇಶ್ ನಿರ್ಮಾಣ ಮಾಡಿದ್ದಾರೆ. ಪ್ರವೀಣ್ ಕೆಬಿ ಅವರ ಸಂಗೀತ ನಿರ್ದೇಶನವಿದ್ದು, ಕೆ ಎಂ ಕಾರ್ತಿಕ್  ಸಂಕಲನ, ಸುರೇಶ್ ಬೈರಸಂದ್ರ ಛಾಯಾಗ್ರಹಣವಿದೆ. ಈ ಸಿನಿಮಾ ಮುಂದಿನ ತಿಂಗಳು ಫೆಬ್ರವರಿ ಏಳರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

For Latest News Updates, Join Our Whatsapp Community🚩
RELATED ARTICLES

Most Popular