HomeKarnatakaBIG NEWS: ಲಂಚಕ್ಕೆ ಕೈಯೊಡ್ಡಿದಾಗಲೇ ಲೋಕಾಯುಕ್ತ ಬಲೆಗೆ ಬಿದ್ದ ಮುಖ್ಯ ಶಿಕ್ಷಕ

BIG NEWS: ಲಂಚಕ್ಕೆ ಕೈಯೊಡ್ಡಿದಾಗಲೇ ಲೋಕಾಯುಕ್ತ ಬಲೆಗೆ ಬಿದ್ದ ಮುಖ್ಯ ಶಿಕ್ಷಕ

ಬೀದರ್: ಲಂಚ ಪಡೆಯುತ್ತಿದ್ದಾಗಲೇ ಮುಖ್ಯ ಶಿಕ್ಷಕರೊಬ್ಬರು ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಬೀದರ್ ನಲ್ಲಿ ನಡೆದಿದೆ.

ವಿವೇಕಾನಂದ ಶಾಲೆಯ ಮುಖ್ಯ ಶಿಕ್ಷಕ ತುಕಾರಾಂ ಕಾಂಬಳೆ ಲೋಕಾಯುಕ್ತ ಬಲೆಗೆ ಬಿದ್ದವರು. ವಿಜ್ಞಾನ ಶಿಕ್ಷಕಿಯಾಗಿದ್ದ ಶಶಿಕಲಾ ಎಂಬುವವರಿಂದ 50 ಸಾವಿರ ಲಂಚ ಪಡೆಯುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಮುಖ್ಯ ಶಿಕ್ಷಕ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಶಿಕ್ಷಕಿ ಶಶಿಕಲಾ ಪೆನ್ಶನ್ ಮಂಜೂರಿ ಪ್ರಕ್ರಿಯೆಗಾಗಿ ಮುಖ್ಯ ಶಿಕ್ಷಕ ತುಕಾರಾಂ ಬಳಿ ಮನವಿ ಮಾಡಿದ್ದರು. ಫೈಲ್ ಮೂವ್ ಮಾಡಲು ತುಕಾರಾಂ 3 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾರೆ. 1 ಲಕ್ಷ ಹಣದ ಚೆಕ್ ಪಡೆದು 50 ಸಾವಿರ ರೂಪಾಯಿ ನಗದು ಹಣ ಪಡೆಯುತ್ತಿದ್ದಾಗ ಲೋಕಾಯುಕ್ತ ಡಿವೈ ಎಸ್ ಪಿ ಎನ್.ಎಂ.ಓಲೇಕಾರ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ಮುಖ್ಯ ಶಿಕ್ಷಕನನ್ನು ವಶಕ್ಕೆ ಪಡೆದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular