SHOCKING: ಎಕ್ಸಿಬಿಷನ್ ನಲ್ಲಿ ಸ್ಮೋಕ್ ಬಿಸ್ಕೆಟ್ ತಿಂದು ಬಾಲಕ ಅಸ್ವಸ್ಥ

ದಾವಣಗೆರೆಯಲ್ಲಿ ಸ್ಮೋಕ್ ಬಿಸ್ಕೆಟ್ ತಿಂದು ಬಾಲಕ ಅಸ್ವಸ್ಥನಾಗಿದ್ದಾನೆ. ಅರುಣ ಸರ್ಕಲ್ ಸಮೀಪದ ಎಕ್ಸಿಬಿಷನ್ ವೊಂದರಲ್ಲಿ ಘಟನೆ ನಡೆದಿದೆ.

ಅಂಗಡಿಯವ ಕಪ್ ನಲ್ಲಿ ಐದು ಚಿಕ್ಕ ಬಿಸ್ಕೆಟ್ ಹಾಕಿಕೊಟ್ಟಿದ್ದ. ಅದರಿಂದ ಹೊಗೆ ಬರುವಾಗ ತಿನ್ನಲಾಗುತ್ತದೆ. ಅದನ್ನು ಬಾಲಕ ತಿಂದಿದ್ದಾನೆ. ಐದು ಬಿಸ್ಕೆಟ್ ಗಳನ್ನು ಒಂದೇ ಸಲಕ್ಕೆ ಬಾಲಕ ಬಾಯಿಗೆ ಹಾಕಿಕೊಂಡಿದ್ದು, ಅವು ಗಂಟಲಲ್ಲಿ ಸಿಲುಕಿವೆ. ನುಂಗಲು ಆಗದೇ, ಉಗುಳಲು ಆಗದೆ ಉಸಿರಾಟದ ಸಮಸ್ಯೆಯಿಂದ ಒದ್ದಾಡಿದ್ದಾನೆ.

ಕೂಡಲೇ ಪೋಷಕರು ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಬಳಿಕ ಚೇತರಿಸಿಕೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ದಾವಣಗೆರೆಯ ಬಡಾವಣೆ ಠಾಣೆಗೆ ಪೋಷಕರು ದೂರು ನೀಡಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read