ಇತ್ತೀಚಿನ ದಿನಗಳಲ್ಲಿ ನಮ್ಮ ಜೀವನಶೈಲಿ ಹಾಗೂ ಹೊರಗಿನ ಫುಡ್ ಗಳನ್ನು ಹೆಚ್ಚಾಗಿ ಸೇವಿಸುವುದರಿಂದ ಕೆಲವರ ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಾಗಿ ಹೈಶುಗರ್ ನಿಂದ ಬಳಲಿದರೆ, ಇನ್ನೂ ಕೆಲವರು ರಕ್ತದಲ್ಲಿ ಸಕ್ಕರೆ ಮಟ್ಟ ಕಡಿಮೆಯಾಗಿ ಲೋ ಶುಗರ್ ಸಮಸ್ಯೆಗೆ ಒಳಗಾಗುತ್ತಾರೆ. ಇವೆರಡು ಕೂಡ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆದಕಾರಣ ಈ ಎರಡು ಸಮಸ್ಯೆಗಳ ಲಕ್ಷಣಗಳನ್ನು ತಿಳಿದು ಅದನ್ನು ಹೇಗೆ ನಿವಾರಿಸಿಕೊಳ್ಳುವುದು ಎಂಬುದನ್ನು ತಿಳಿದುಕೊಳ್ಳಿ.
ರಕ್ತದಲ್ಲಿ ಸಕ್ಕರೆ ಮಟ್ಟ ಕಡಿಮೆಯಾದಾಗ ಎದೆಯುರಿ, ದಣಿವು, ತಲೆನೋವು, ಹಸಿವು, ಕಿರಿಕಿರಿ, ಎಲ್ಲದಕ್ಕೂ ಕೈಕಾಲು ಅಲುಗಾಡಿಸುವುದು, ಅತಿಯಾಗಿ ಬೆವರುವುದು ಮತ್ತು ದೃಷ್ಠಿಯಲ್ಲಿ ಸಮಸ್ಯೆ, ಮಸುಕಾದ ಚರ್ಮ ಸಮಸ್ಯೆ ಕಂಡುಬರುತ್ತದೆ. ನೀವು ಖಾಲಿ ಹೊಟ್ಟೆಯಲ್ಲಿ ವ್ಯಾಯಾಮ ಮಾಡುವುದರಿಂದ, ನೀವು ತಡವಾಗಿ ಅಥವಾ ಕಡಿಮೆ ಪ್ರಮಾಣದಲ್ಲಿ ಆಹಾರವನ್ನು ಸೇವಿಸಿದಾಗ ಈ ಸಮಸ್ಯೆ ಕಾಡುತ್ತದೆ. ನೀವು ಹಣ್ಣುಗಳನ್ನು, ಹಾಲು, ಸಕ್ಕರೆ, ಬೆಳ್ಳುಳ್ಳಿ, ಮೊಸರು ಅಥವಾ ಒಣ ಹಣ್ಣುಗಳನ್ನು ಸೇವಿಸಿದರೆ ಉತ್ತಮ.
ರಕ್ತದಲ್ಲಿ ಸಕ್ಕರೆ ಮಟ್ಟ ಅಧಿಕವಾದಾಗ ಬಾಯಾರಿಕೆ, ಹಸಿವು, ಅತಿಯಾದ ಮೂತ್ರ ವಿಸರ್ಜನೆ, ದಣಿವು, ತೂಕ ಇಳಿಕೆ, ಚರ್ಮದ ಸೋಂಕು, ಮಲಬದ್ಧತೆ ಅಥವಾ ಅತಿಸಾರ, ಕಿಡ್ನಿ ಸಮಸ್ಯೆ ಕಾಡುತ್ತದೆ. ಅತಿಯಾಗಿ ಆಹಾರ ಸೇವಿಸಿದ ಬಳಿಕ ವ್ಯಾಯಾಮ ಮಾಡುವುದು ಅಥವಾ ವಾಕಿಂಗ್ ಮಾಡದಿರುವುದರಿಂದ ಈ ಸಮಸ್ಯೆ ಕಾಡುತ್ತದೆ. ಇದಕ್ಕೆ ಸಾಕಷ್ಟು ಪ್ರಮಾಣದ ನೀರನ್ನು ಸೇವಿಸಿ. ವೈದ್ಯರನ್ನು ಸಂಪರ್ಕಿಸಿ.