HomeLatest Newsಪರಮೇಶ್ವರ್‌ಗಿಲ್ಲ ಉಪ ಮುಖ್ಯಮಂತ್ರಿ ಸ್ಥಾನ, ಸಿದ್ದು ಪುತ್ರ ಯತೀಂದ್ರಗೆ ಮಂತ್ರಿ ಪಟ್ಟ: ಡಿಕೆ ಜತೆ ಪ್ರಮಾಣ...

ಪರಮೇಶ್ವರ್‌ಗಿಲ್ಲ ಉಪ ಮುಖ್ಯಮಂತ್ರಿ ಸ್ಥಾನ, ಸಿದ್ದು ಪುತ್ರ ಯತೀಂದ್ರಗೆ ಮಂತ್ರಿ ಪಟ್ಟ: ಡಿಕೆ ಜತೆ ಪ್ರಮಾಣ ವಚನ ಸ್ವೀಕರಿಸಲಿರುವ 13 ಮಂದಿ ಪಟ್ಟಿ ಇಲ್ಲಿದೆ

ಬೆಂಗಳೂರು: ನೂತನ ನಿಯೋಜಿತ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಜೊತೆಗೆ 13 ಮಂದಿ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಸಂಜೆ ಲೋಕಾಭವನದಲ್ಲಿ ನಡೆಯುವ ಸರಳ ಸಮಾರಂಭದಲ್ಲಿ ಡಿ.ಕೆ.ಶಿವಕುಮಾರ್ ಅವರ ಜೊತೆ 13 ಮಂದಿ ಶಾಸಕರನ್ನು ಸಂಪುಟಕ್ಕೆ ತೆಗೆದುಕೊಳ್ಳಲು ಎಐಸಿಸಿ ಹಸಿರು ನಿಶಾನೆ ತೋರಿದೆ.

ಜಾತಿ, ಪ್ರದೇಶವಾರು, ಹಿರಿತನ, ಪಕ್ಷಕ್ಕೆ ಸಲ್ಲಿಸಿದ ಸೇವೆ ಎಲ್ಲವನ್ನೂ ಪರಿಗಣಿಸಿ ಹಿರಿಯರನ್ನು ಸಂಪುಟಕ್ಕೆ ತೆಗೆದುಕೊಳ್ಳುವಂತೆ ಹೈಕಮಾಂಡ್ ಸೂಚಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದೆಹಲಿಯಿಂದ ಸಚಿವರ ಪಟ್ಟಿಯನ್ನು ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆಯು ಲೋಕಾಭವನಕ್ಕೆ ರವಾನೆ ಮಾಡಿದೆ.

ಇದಕ್ಕೂ ಮುನ್ನ ನಿಯೋಜಿತ ಸಿಎಂ ಡಿ.ಕೆ. ಶಿವಕುಮಾರ್ ಖುದ್ದು ದೂರವಾಣಿ ಕರೆ ಮಾಡಿ ಅಧಿಕಾರ ಸ್ವೀಕಾರ ಸಮಾರಂಭಕ್ಕೆ ಆಗಮಿಸುವಂತೆ ಆಹ್ವಾನಿಸಿದ್ದಾರೆ.

ಮೊದಲ ಪಟ್ಟಿಯಲ್ಲಿ ಸಂಪುಟಕ್ಕೆ ಹತ್ತು ಮಂದಿಯನ್ನು ಮಾತ್ರ ತೆಗೆದುಕೊಳ್ಳಬೇಕೆಂದು ಹೈಕಮಾಂಡ್ ಸೂಚಿಸಿತ್ತು. ಆದರೆ ಕೊನೆ ಕ್ಷಣದಲ್ಲಿ ಹೆಚ್ಚುವರಿಯಾಗಿ ಮೂವರನ್ನು ತೆಗೆದುಕೊಳ್ಳಲು ತೀರ್ಮಾನಿಸಲಾಯಿತು.

ಇನ್ನು ಪರಮೇಶ್ವರ್‌ಗೆ ಉಪ ಮುಖ್ಯಮಂತ್ರಿ ಸ್ಥಾನ ಎನ್ನಲಾಗುತ್ತಿತ್ತು. ಆದರೆ ಇತ್ತೀಚೆಗಿನ ಮಾಹಿತಿ ಪ್ರಕಾರ ಅವರಿಗೂ ಮಂತ್ರಿ ಸ್ಥಾನ ಸಿಗಲಿದೆ ಎನ್ನಲಾಗಿದೆ.

ಸಚಿವರ ಪಟ್ಟಿ

ಡಾ.ಜಿ.ಪರಮೇಶ್ವರ್- ಕೊರಟಗೆರೆ

ಎಂ.ಬಿ.ಪಾಟೀಲ್- ಬಬಲೇಶ್ವರ

ಈಶ್ವರ್ ಖಂಡ್ರೆ- ಭಾಲ್ಕಿ

ಕೆ.ಜೆ.ಜಾರ್ಜ್- ಸರ್ವಜ್ಞನಗರ

ರಾಮಲಿಂಗಾರೆಡ್ಡಿ- ಬಿಟಿಎಂ ಲೇಔಟ್

ಸತೀಶ್ ಜಾರಕಿಹೊಳಿ-ಯಮಕನಮರಡಿ

ಪ್ರಿಯಾಂಕ ಖರ್ಗೆ-ಚಿತ್ತಾಪುರ

ಕೆ.ಎಚ್.ಮುನಿಯಪ್ಪ-ದೇವನಹಳ್ಳಿ

ಡಾ.ಶರಣಪ್ರಕಾಶ್ ಪಾಟೀಲ್-ಸೇಡಂ

ಯು.ಟಿ.ಖಾದರ್-ಮಂಗಳೂರು

ಕೃಷ್ಣಭೈರೇಗೌಡ-ಬ್ಯಾಟರಾಯನಪುರ

ಭೈರತಿ ಸುರೇಶ್- ಹೆಬ್ಬಾಳ

ಯತೀಂದ್ರ ಸಿದ್ದರಾಮಯ್ಯ- ವಿಧಾನಪರಿಷತ್

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular