HomeLatest Newsಮದ್ಯ ಮಾರಾಟ: ಅಬಕಾರಿ ಸನ್ನದು ನೀಡಲು ಅರ್ಹ ಬಿಡ್ಡರ್‌ ಗಳಿಂದ ಬಿಡ್ ಆಹ್ವಾನ

ಮದ್ಯ ಮಾರಾಟ: ಅಬಕಾರಿ ಸನ್ನದು ನೀಡಲು ಅರ್ಹ ಬಿಡ್ಡರ್‌ ಗಳಿಂದ ಬಿಡ್ ಆಹ್ವಾನ

ಅಬಕಾರಿ ಇಲಾಖೆಯು ಭಾರತೀಯ ಮದ್ಯ ಅಥವಾ ವಿದೇಶಿ ಮದ್ಯ ಅಥವಾ ಎರಡನ್ನೂ ಮಾರಾಟ ಮಾಡಲು ಯಶಸ್ವಿ ಹೆಚ್-1 ಬಿಡ್ಡರ್‌ ಗಳಿಗೆ ಫಾರ್ಮ್ CL-2A ಮತ್ತು CL-9A ನಮೂನೆಗಳಲ್ಲಿ ಖಾಲಿ ಅಥವಾ ಲಭ್ಯವಿರುವ ಅಬಕಾರಿ ಸನ್ನದು ನೀಡಲು ಅರ್ಹ ಬಿಡ್ಡರ್‌ ಗಳಿಂದ ಬಿಡ್‌ಗಳನ್ನು ಆಹ್ವಾನಿಸಿದೆ.

ಈ ಪ್ರಕ್ರಿಯೆಯು ಇ-ಹರಾಜು ವೆಬ್‌ಸೈಟ್ https://www.mstcecommerce.com ಮೂಲಕ ನಡೆಯಲಿದ್ದು, ಹರಾಜು ನಡೆಯುವ ಮತ್ತು ಅಂಗೀಕಾರ ಪತ್ರ(LOA) ನೀಡುವ ವರ್ಷವನ್ನೂ ಒಳಗೊಂಡಂತೆ ಐದು ಅಬಕಾರಿ ವರ್ಷಗಳ ಅವಧಿಗೆ ಅನ್ವಯಿಸುತ್ತದೆ.

ಸರ್ಕಾರದ ಅಧಿಸೂಚನೆ ಸಂಖ್ಯೆ:ಆಇ/52/ಇಎಫ್‌ಎಲ್/2025 ದಿನಾಂಕ:19-12-2025 ರಲ್ಲಿನ ಇ-ಹರಾಜಿಗೆ ಸಂಬAಧಿಸಿದ ವಿವರವಾದ ಮಾರ್ಗಸೂಚಿಗಳು, ನಿಯಮಗಳು ಮತ್ತು ಷರತ್ತುಗಳು, ಜಿಲ್ಲಾವಾರು ಸನ್ನದು ವಿವರಗಳು, ಮೀಸಲಾತಿ ವಿವರಗಳು, ಅರ್ಜಿ ಶುಲ್ಕ, ಮುಂಗಡ ಠೇವಣಿ ಹಣ ((EMD), ಮೂಲ ಬೆಲೆ ಮತ್ತು ಹರಾಜಿನ ನಂತರದ ವಿವರಗಳು ಇಲಾಖೆಯ ವೆಬ್‌ಸೈಟ್ https://stateexcise.karnataka.gov.in ಮತ್ತು ಎಂ.ಎಸ್.ಟಿ.ಸಿ. (M.S.T.C)  ಲಿಮಿಟೆಡ್ ನ ಇ-ಹರಾಜು ಪೋರ್ಟಲ್ https://www.mstcecommerce.com ನಲ್ಲಿ ಲಭ್ಯವಿರುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇ-ಹರಾಜಿನ ವೇಳಾಪಟ್ಟಿ :- ಬಿಡ್‌ದಾರರ ನೋಂದಣಿ ಪ್ರಾರಂಭ 22-12-2025, ಸಂಭಾವ್ಯ ಬಿಡ್ ದಾರರಿಗೆ ಹಾಗೂ ಜಿಲ್ಲಾ ಇ-ಹರಾಜು ನೋಡಲ್ ಅಧಿಕಾರಿಗಳಿಗೆ ತರಬೇತಿ 23-12-2025 ರಿಂದ 07-01-2026. ನೇರ ಹರಾಜು (Live Bidding) 13-01-2026 ರಿಂದ 20-01-2026.

ನೋಂದಣಿ ಪ್ರಕ್ರಿಯೆ ಪೂರ್ಣಗೊಂಡ ನಂತರ ಮತ್ತು ಆನ್‌ಲೈನ್ ಮೂಲಕ ವ್ಯಾಲೇಟ್ ಗೆ ಹಣ ಪಾವತಿಯು ಖಚಿತವಾದ ನಂತರವೇ ಬಿಡ್ಡರ್‌ಗಳು ಆನ್‌ಲೈನ್ ಹರಾಜಿನಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ. ಆದ್ದರಿಂದ ಬಿಡ್ಡರ್‌ಗಳು ತಾವು ಭಾಗವಹಿಸಲು ಇಚ್ಛಿಸುವ ನಿರ್ಧಿಷ್ಟ ಸ್ಲಾಟ್ನ ಹರಾಜು ಪ್ರಾರಂಭವಾಗುವ 48 ಗಂಟೆಗಳ ಮುಂಚಿತವಾಗಿ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು. ನೆಟ್ ವರ್ಕ್ ವೈಫಲ್ಯ ಮತ್ತು ಇತರ ತಾಂತ್ರಿಕ ಸಮಸ್ಯೆಗಳ ಸಂದರ್ಭದಲ್ಲಿ ಯಾವುದೇ ವಿಳಂಬವನ್ನು ತಪ್ಪಿಸಲು ಮುನ್ನೆಚ್ಚರಿಕೆ ಕ್ರಮವಾಗಿ ಬಿಡ್ಡರ್ ಗಳು ಈ ಸಲಹೆಗಳನ್ನು ಪಾಲಿಸಲು ತಿಳಿಯಪಡಿಸಿದೆ.

ಆದಾಗ್ಯೂ ನಿಗದಿತ ಇ-ಹರಾಜು ಅವಧಿಯ ಎರಡು ಕೆಲಸದ ದಿನಗಳ ಮುಂಚಿತವಾಗಿ (ಕೇಂದ್ರ/ ರಾಜ್ಯ ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ) ಬಿಡ್ಡರ್‌ದಾರರು ನೋಂದಾಯಿಸಿಕೊಳ್ಳಬಹುದು.

ಅಬಕಾರಿ ಆಯುಕ್ತರು ಹೊರಡಿಸುವ ತರಬೇತಿ ವೇಳಾಪಟ್ಟಿಯನ್ನು ಅಬಕಾರಿ ಇಲಾಖೆಯ ವೆಬ್ ಸೈಟ್ https://stateexcisekarnataka.gov.in  ಮತ್ತು ಎಂ.ಎಸ್.ಟಿ.ಸಿ. ಇ-ಹರಾಜು ಪೋರ್ಟಲ್ https://www.mstcecommerce.com ನಲ್ಲಿ ಪ್ರಕಟಿಸಲಾಗುವುದು ಎಂದು ಜಿಲ್ಲಾ ಅಬಕಾರಿ ಉಪ ಆಯುಕ್ತರು ತಿಳಿಸಿದ್ದಾರೆ.

E-Auction Details : District Name Complete Address of Training Venue – Ms||Pavanputra Sports & Cultural Club, KIADB Industrial Area, Kowshika Grama Panchayat, Holenarasipura road, Hassan Taluk, Name of The Excise DC – Sumitha K K, Mobile No : 9449597195

Date 02-01-2026, Timings – 11 AM to 01 PM, LUNCH 2 PM to 4PM, MSTC Team 2 -HASSAN.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular