HomeInternationalಲೈವ್ ಪ್ರದರ್ಶನದ ವೇಳೆ ರಿಂಗ್ ನಿಂದ ತಪ್ಪಿಸಿಕೊಂಡು ಜನರತ್ತ ಬಂದ ಸರ್ಕಸ್ ಸಿಂಹ; ಹೃದಯ ಬಡಿತ...

ಲೈವ್ ಪ್ರದರ್ಶನದ ವೇಳೆ ರಿಂಗ್ ನಿಂದ ತಪ್ಪಿಸಿಕೊಂಡು ಜನರತ್ತ ಬಂದ ಸರ್ಕಸ್ ಸಿಂಹ; ಹೃದಯ ಬಡಿತ ಹೆಚ್ಚಿಸುತ್ತೆ ವಿಡಿಯೋ

ಲೈವ್ ಪ್ರದರ್ಶನದ ವೇಳೆಯೇ ಎರಡು ಸರ್ಕಸ್ ಸಿಂಹಗಳು ಪ್ರದರ್ಶನದ ರಿಂಗ್ ನಿಂದ ತಪ್ಪಿಸಿಕೊಂಡು ಜನರತ್ತ ನುಗ್ಗಿದ ಶಾಕಿಂಗ್ ವಿಡಿಯೋ ಚೀನಾದಿಂದ ಹೊರಹೊಮ್ಮಿದೆ. ವಿಡಿಯೋ ಒಮ್ಮೆ ಹೃದಯ ಬಡಿತವನ್ನ ಸ್ಥಗಿತಗೊಳಿಸುವಂತಿದೆ. ಸಿಂಹ ಪ್ರದರ್ಶನದ ನಿರ್ದಿಷ್ಟ ರಿಂಗ್ ನಿಂದ ಹೊರಬರ್ತಿದ್ದಂತೆ ಪ್ರೇಕ್ಷಕರು ಭಯಭೀತಗೊಂಡರು.

ತರಬೇತುದಾರರು ಕಡಿಮೆ ಸಮಯದಲ್ಲಿ ಸಿಂಹಗಳು ಹಿಡಿಯಲು ಸಮರ್ಥರಾಗಿದ್ದರು. ಈ ವೇಳೆ ಸರ್ಕಸ್ ಸ್ಥಗಿತಗೊಳಿಸಲು ಆದೇಶಿಸಲಾಗಿದೆ ಎಂದು ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ. ಘಟನೆಯಲ್ಲಿ ಯಾವುದೇ ಗಾಯಗಳು ವರದಿಯಾಗಿಲ್ಲ.

ಹೆನಾನ್ ಪ್ರಾಂತ್ಯದ ಲುವೊಯಾಂಗ್‌ನಲ್ಲಿ ಈ ಘಟನೆ ಸಂಭವಿಸಿದಾಗ ಪ್ರೇಕ್ಷಕರು ತಮ್ಮ ಮಕ್ಕಳನ್ನು ಕರೆದುಕೊಂಡು ಹೊರಗೆ ಕಿರುಚಾಡುತ್ತಾ ಓಡಿದ್ದಾರೆ. ರಿಂಗ್ ‌ನ ಬಾಗಿಲು ಸರಿಯಾಗಿ ಲಾಕ್ ಆಗಿರಲಿಲ್ಲ. ಹಾಗಾಗಿ ಸಿಂಹಗಳು ತಪ್ಪಿಸಿಕೊಳ್ಳಲು ಸಾಧ್ಯವಾಗಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಗ್ಲೋಬಲ್ ಟೈಮ್ಸ್‌ಗೆ ತಿಳಿಸಿದ್ದಾರೆ. ಸಿಂಹಗಳನ್ನು ಸೆರೆಹಿಡಿದ ನಂತರ ಮತ್ತೆ ಪಂಜರದಲ್ಲಿ ಹಾಕಲಾಯಿತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಿಂಹಗಳು ಹೇಗೆ ತಪ್ಪಿಸಿಕೊಂಡವು ಎಂಬುದರ ಕುರಿತು ಸರ್ಕಸ್ ಅಧಿಕೃತವಾಗಿ ಪ್ರತಿಕ್ರಿಯಿಸಿಲ್ಲ ಆದರೆ ಪೊಲೀಸ್ ತನಿಖೆಯನ್ನು ಪ್ರಾರಂಭಿಸಲಾಗಿದೆ. ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ ಮತ್ತು ವಿಶೇಷವಾಗಿ ಪ್ರಾಣಿ ಹಕ್ಕುಗಳ ಕಾರ್ಯಕರ್ತರ ಕೋಪಕ್ಕೆ ಗುರಿಯಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular