HomeKarnatakaಲಿಫ್ಟ್ ಕೇಬಲ್ ತುಂಡಾಗಿ ದುರಂತ: ಯುವಕ ದುರ್ಮರಣ

ಲಿಫ್ಟ್ ಕೇಬಲ್ ತುಂಡಾಗಿ ದುರಂತ: ಯುವಕ ದುರ್ಮರಣ

ಕಾರವಾರ: ಕಟ್ಟಡವೊಂದರಲ್ಲಿ ಲಿಫ್ಟ್ ಕೇಬಲ್ ತುಂಡಾಗಿ ಬಿದ್ದು ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನಲ್ಲಿ ನಡೆದಿದೆ.

ಸುಭಾಷ್ ರಸ್ತೆಯ ಜಗದಂಬಾ ಎಲೆಕ್ಟ್ರಿಕಲ್ಸ್ ಕಟ್ಟಡದಲ್ಲಿ ಈ ದುರಂತ ಸಂಭವಿಸಿದೆ. ಗೋಪಾಲ್ ಸಿಂಗ್ (25) ಮೃತ ಯುವಕ. ಭಾರವಾದ ವಸ್ತುಗಳನ್ನು ತುಂಬಿಕೊಂಡು ಯುವಕ ಲಿಫ್ಟ್ ನಲ್ಲಿ ತೆರಳುತ್ತಿದ್ದ. ಈ ವೇಳೆ ಲಿಫ್ಟ್ ಕೇಬಲ್ ಏಕಾಏಕಿ ತುಂಡಾಗಿ ಬಿದ್ದಿದೆ. ಸ್ಥಳದಲ್ಲೇ ಯುವಕ ಸಾವನ್ನಪ್ಪಿದ್ದಾನೆ.

ಮೃತ ಯುವಕ ಜಗದಂಬಾ ಎಲೆಕ್ಟ್ರಿಕಲ್ಸ್ ಕಟ್ಟಡದ ಮಾಲೀಕನ ಸಂಬಂಧಿಯೂ ಆಗಿದ್ದಾನೆ. ಪ್ರಕರಣ ಸಂಬಂಧ ಮಾಲೀಕನನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular