HomeBusinessಮೆಚ್ಯೂರಿಟಿ ಅವಧಿ ಪೂರ್ಣಗೊಂಡರೂ ಎಲ್ಐಸಿಯಲ್ಲೇ ಉಳಿದ ಚಂದಾದಾರರ 881 ಕೋಟಿ ರೂ.: ಸರ್ಕಾರ ಮಾಹಿತಿ

ಮೆಚ್ಯೂರಿಟಿ ಅವಧಿ ಪೂರ್ಣಗೊಂಡರೂ ಎಲ್ಐಸಿಯಲ್ಲೇ ಉಳಿದ ಚಂದಾದಾರರ 881 ಕೋಟಿ ರೂ.: ಸರ್ಕಾರ ಮಾಹಿತಿ

ನವದೆಹಲಿ: ಎಲ್ಐಸಿ 2023- 24ನೇ ಸಾಲಿನಲ್ಲಿ ಪಾಲಿಸಿಯ ಮೆಚ್ಯೂರಿಟಿ ಅವಧಿ ಪೂರ್ಣಗೊಂಡ ಬಳಿಕವೂ ಚಂದಾದಾರರ 881 ಕೋಟಿ ರೂಪಾಯಿ ಉಳಿದುಕೊಂಡಿದೆ ಎಂದು ಕೇಂದ್ರ ಸರ್ಕಾರ ಸಂಸತ್ತಿಗೆ ಮಾಹಿತಿ ನೀಡಿದೆ.

ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಲೋಕಸಭೆಗೆ ಮಾಹಿತಿ ನೀಡಿ, 3.72 ಲಕ್ಷ ಪಾಲಿಸಿದ್ದಾರರು ವಿಮೆ ಮೊತ್ತವನ್ನು ಪಡೆದುಕೊಂಡಿಲ್ಲ ಎಂದು ಹೇಳಿದ್ದಾರೆ.

2022- 23ನೇ ಸಾಲಿನಡಿ 3.73 ಲಕ್ಷ ಪಾಲಿಸಿದಾರರಿಗೆ ಸೇರಿದ 815 ಕೋಟಿ ರೂಪಾಯಿ ಮೊತ್ತ ಭಾರತೀಯ ಜೀವ ವಿಮಾ ನಿಗಮದಲ್ಲಿಯೇ ಇದೆ. ಚಂದಾದಾರರಿಗೆ ಎಲ್ಐಸಿ ಖಾತೆಯಲ್ಲಿ ಉಳಿದ ಮೊತ್ತವನ್ನು ವಾಪಸ್ ನೀಡಲು ಅನೇಕ ಕ್ರಮ ಕೈಗೊಳ್ಳಲಾಗಿದೆ. ಮುದ್ರಣ ಮತ್ತು ಡಿಜಿಟಲ್ ಮಾಧ್ಯಮಗಳಲಿ ಜಾಹೀರಾತು ಪ್ರಕಟಿಸಿ ಅರಿವು ಮೂಡಿಸಲಾಗುತ್ತಿದೆ. ಪಾಲಿಸಿದಾರರ ವಿಳಾಸಗಳಿಗೆ ಅಂಚೆ, ಇ-ಮೇಲ್, ಮೊಬೈಲ್ ಸಂಖ್ಯೆಗಳಿಗೆ ಸಂದೇಶ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular