ದೇಶದ ಅತಿದೊಡ್ಡ ವಿಮಾ ಸಂಸ್ಥೆಯಾದ ಲೈಫ್ ಇನ್ಶೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎಲ್‌ಐಸಿ), ತನ್ನ 70 ನೇ ಸಂಸ್ಥಾಪನಾ ದಿನದ ಅಂಗವಾಗಿ ‘ಭೀಮಾ ಪ್ಲಾಟಿನಂ’ ಮತ್ತು ‘ಜೀವನ್ ರಕ್ಷಾ’ ಎಂಬ ಎರಡು ಹೊಸ ಆಕರ್ಷಕ ಪ್ಲಾನ್‌ಗಳನ್ನು ಪರಿಚಯಿಸಿದೆ. ಈ ಎರಡೂ ಯೋಜನೆಗಳು ನಾನ್-ಲಿಂಕ್ಡ್ ಮತ್ತು ನಾನ್-ಪಾರ್ಟಿಸಿಪೇಟಿಂಗ್ ಆಗಿದ್ದು, ಶೇರು ಮಾರುಕಟ್ಟೆಯ ಏರಿಳಿತಗಳಿಂದ ಸಂಪೂರ್ಣ ಮುಕ್ತವಾಗಿವೆ ಮತ್ತು ಖಚಿತ ಆದಾಯವನ್ನು ನೀಡಲಿವೆ.
ಈ ಯೋಜನೆಗಳು ಸೆಪ್ಟೆಂಬರ್ 7 ರಿಂದ ಗ್ರಾಹಕರಿಗೆ ಆನ್‌ಲೈನ್ ಮತ್ತು ಆಫ್‌ಲೈನ್ ಮೂಲಗಳ ಮೂಲಕ ಲಭ್ಯವಾಗಲಿವೆ. ಈ ಯೋಜನೆಗಳ ಮುಖ್ಯಾಂಶಗಳು ಹೀಗಿವೆ:
1. ಎಲ್‌ಐಸಿ ಭೀಮಾ ಪ್ಲಾಟಿನಂ (ಪ್ಲಾನ್ 770): ಇದು ಉಳಿತಾಯ ಮತ್ತು ಸುರಕ್ಷತೆಯನ್ನು ಒಟ್ಟಿಗೆ ನೀಡುವ ಲಿಮಿಟೆಡ್ ಪ್ರೀಮಿಯಂ ಪ್ಲಾನ್ ಆಗಿದೆ.
-
ಗ್ಯಾರಂಟಿ ಬೋನಸ್: ಪ್ರೀಮಿಯಂ ಪಾವತಿಸುವ ಅವಧಿಯಲ್ಲಿ ಪ್ರತಿ ₹1,000 ವಾರ್ಷಿಕ ಪ್ರೀಮಿಯಂಗೆ ₹70 ರಂತೆ ಗ್ಯಾರಂಟಿ ಆಡಿಷನ್ ಸೇರ್ಪಡೆಯಾಗುತ್ತದೆ.
-
ಬೂಸ್ಟರ್ ಇನ್ಕಮ್: ಪ್ರೀಮಿಯಂ ಅವಧಿ ಮುಗಿದ 5 ವರ್ಷಗಳ ನಂತರ ಮೂಲ ವಿಮಾ ಮೊತ್ತದ ಶೇ. 70 ರಷ್ಟು ಹಣ ‘ಬೂಸ್ಟರ್ ಇನ್ಕಮ್’ ಆಗಿ ಸಿಗಲಿದೆ.
-
ರೆಗ್ಯುಲರ್ ಇನ್ಕಮ್: ಬೂಸ್ಟರ್ ಆದಾಯದ ನಂತರ ಪ್ರತಿ ವರ್ಷ ಮೂಲ ವಿಮಾ ಮೊತ್ತದ ಶೇ. 10 ರಷ್ಟು ಮೊತ್ತವು ನಿಯಮಿತ ಆದಾಯವಾಗಿ ದೊರೆಯುತ್ತದೆ.
-
ಅವಧಿ ಮತ್ತು ವಯಸ್ಸು: 7 ರಿಂದ 18 ವರ್ಷಗಳವರೆಗೆ ಪ್ರೀಮಿಯಂ ಪಾವತಿಸುವ ಆಯ್ಕೆ ಇದೆ. ಕನಿಷ್ಠ 30 ದಿನದ ಮಗುವಿನಿಂದ ಹಿಡಿದು 55 ವರ್ಷದವರವರೆಗೆ ಈ ಪಾಲಿಸಿ ಪಡೆಯಬಹುದು. ಕನಿಷ್ಠ ವಿಮಾ ಮೊತ್ತ ₹3 ಲಕ್ಷ.
2. ಎಲ್‌ಐಸಿ ಜೀವನ್ ರಕ್ಷಾ (ಪ್ಲಾನ್ 894): ಕಡಿಮೆ ಪ್ರೀಮಿಯಂನಲ್ಲಿ ಕುಟುಂಬಕ್ಕೆ ಸುರಕ್ಷತೆ ನೀಡಬಲ್ಲ ಪ್ಯೂರ್-ರಿಸ್ಕ್ ಲೈಫ್ ಕವರ್ ಪ್ಲಾನ್ ಇದಾಗಿದೆ.
-
ಡೆತ್ ಬೆನಿಫಿಟ್: ಪಾಲಿಸಿದಾರರು ಮರಣ ಹೊಂದಿದರೆ ನಾಮಿನಿಗೆ ನಿಗದಿತ ಗ್ಯಾರಂಟಿ ಮೊತ್ತ ಸಿಗುತ್ತದೆ. ಇದರಲ್ಲಿ ಯಾವುದೇ ಮ್ಯಾಚುರಿಟಿ ಬೆನಿಫಿಟ್ ಇರುವುದಿಲ್ಲ.
-
ಪ್ರೀಮಿಯಂ ಆಯ್ಕೆಗಳು: ಸಿಂಗಲ್, ರೆಗ್ಯುಲರ್ ಅಥವಾ ಲಿಮಿಟೆಡ್ ಪ್ರೀಮಿಯಂ ಪಾವತಿಸುವ ಅವಕಾಶಗಳಿವೆ.
-
ವಿಮಾ ಮೊತ್ತ ಮತ್ತು ವಯಸ್ಸು: 18 ರಿಂದ 45 ವರ್ಷದೊಳಗಿನವರು ಈ ಯೋಜನೆ ಪಡೆಯಬಹುದು. ಕನಿಷ್ಠ ₹5 ಲಕ್ಷದಿಂದ ಗರಿಷ್ಠ ₹24 ಲಕ್ಷದವರೆಗೆ ಲೈಫ್ ಕವರ್ ಪಡೆಯಬಹುದು. ಮಹಿಳೆಯರಿಗೆ ಪ್ರೀಮಿಯಂನಲ್ಲಿ ವಿಶೇಷ ರಿಯಾಯಿತಿ ಇದೆ.
ಖಚಿತ ಆದಾಯ ಮತ್ತು ಬಡ್ಡಿ ಬಯಸುವವರಿಗೆ ‘ಭೀಮಾ ಪ್ಲಾಟಿನಂ’ ಸೂಕ್ತವಾದರೆ, ಕಡಿಮೆ ವೆಚ್ಚದಲ್ಲಿ ಕುಟುಂಬದ ಭವಿಷ್ಯಕ್ಕೆ ರಕ್ಷಣೆ ಬಯಸುವವರಿಗೆ ‘ಜೀವನ್ ರಕ್ಷಾ’ ಉತ್ತಮ ಆಯ್ಕೆಯಾಗಿದೆ.

