
ಲಿಲ್ಲಿ ಗಿಡ (lily plant): ಲಿಲ್ಲಿ ಗಿಡವನ್ನು ನಿಮ್ಮ ಮನೆಯೊಳಗೆ ಇಡಬಹುದು. ಯಾಕೆಂದರೆ ಇದಕ್ಕೆ ಸೂರ್ಯ ಬೆಳಕಿನ ಅವಶ್ಯಕತೆ ಇಲ್ಲ. ಇದು ಮನೆಯ ಅಂದವನ್ನು ಹೆಚ್ಚಿಸುತ್ತದೆ. ಅಲ್ಲದೇ ಇದು ಮನೆಯೊಳಗಿನ ಕೆಟ್ಟ ಗಾಳಿಯನ್ನು ನಿವಾರಿಸಿ ಶುದ್ಧ ಗಾಳಿ ನೀಡುತ್ತದೆ.
ಸ್ನೇಕ್ ಪ್ಲ್ಯಾಂಟ್ (snake plant) : ಇದನ್ನು ಸೂರ್ಯ ಬೆಳಕು ಇಲ್ಲದೆ ಬೆಳೆಸಬಹುದು. ಇವುಗಳನ್ನು ಮನೆಯೊಳಗೆ ನೆಡುವುದರಿಂದ ತುಂಬಾ ಒಳ್ಳೆಯದು.
ಪೋಟೋಸ್ ಸಸ್ಯ (pothos plant) : ಇದಕ್ಕೂ ಕೂಡ ಸೂರ್ಯನ ಬೆಳಕಿನ ಅವಶ್ಯಕತೆ ಇಲ್ಲ. ಇದನ್ನು ಮನೆಯಲ್ಲಿ ಎಲ್ಲಿ ಬೇಕದರೂ ನೆಡಬಹುದು. ಇದು ಮನೆಯ ಸೌಂದರ್ಯವನ್ನು ಹೆಚ್ಚಿಸುತ್ತದೆ. ಶುದ್ಧ ಗಾಳಿಯನ್ನು ಒದಗಿಸುತ್ತದೆ.
ಜಿಜಿ ಸಸ್ಯ (Zizi Plant) : ಇದಕ್ಕೆ ಸೂರ್ಯನ ಬೆಳಕಿನ ಅವಶ್ಯಕತೆ ಇರದ ಕಾರಣ ಇದನ್ನು ಮನೆಯೊಳಗೆ ನೆಡಬಹುದು. ಇದನ್ನು ಮನೆಯಲ್ಲಿ ಎಲ್ಲಿಯಾದರೂ ಇಡಬಹುದು. ಆದರೆ ತೇವಾಂಶ ಇರಬೇಕು. ಇದರಿಂದ ಮನೆಯ ವಾತಾವರಣ ತಂಪಾಗಿರುತ್ತದೆ.

