
ಸಂದರ್ಶಕರಿಗೆ ಹೊಸ ವಾಹನಗಳ ಅನುಭವವನ್ನು ನೀಡುವ ಹೀರೋ ಪ್ರೀಮಿಯಾ, ಆಧುನಿಕ ವಾಸ್ತುಶಿಲ್ಪ, ಆಕರ್ಷಕ ವಿನ್ಯಾಸ ಮತ್ತು ಹೊಸ-ಯುಗದ ಡಿಜಿಟಲ್ ತಂತ್ರಜ್ಞಾನಗಳನ್ನು ಬಳಸಿಕೊಂಡಿದೆ. ಇಲ್ಲಿ ಅತ್ಯುತ್ತಮ ದರ್ಜೆಯ ಪ್ರೀಮಿಯಂ ವಾಹನವನ್ನು ಹೊಂದಿರುವ ಅನುಭವ ದೊರೆಯುತ್ತದೆ. ವೃತ್ತಿಪರವಾಗಿ ತರಬೇತಿ ಪಡೆದ ಮಾರಾಟ ಸಲಹೆಗಾರರ ತಂಡ ಗ್ರಾಹಕರಿಗೆ, ಅವರವರ ಓಡಾಟದ ಅಗತ್ಯತೆಗಳಿಗೆ ಅನುಗುಣವಾಗಿ, ವೈಯಕ್ತಿಕ ಸಲಹೆಗಳನ್ನು ನೀಡುತ್ತದೆ.
ಹೀರೋ ಪ್ರೀಮಿಯಾ, ಹೊಸದಾಗಿ ಬಿಡುಗಡೆಯಾದ ಪ್ರಮುಖ ಮೋಟಾರ್ಸೈಕಲ್ ಕರಿಜ್ಮಾ ಎಕ್ಸ್.ಎಂ.ಆರ್ ಸೇರಿದಂತೆ, ಹೀರೋ ಮೋಟೋಕಾರ್ಪ್ನ ಪ್ರೀಮಿಯಂ ಉತ್ಪನ್ನಗಳ ಶ್ರೇಣಿಯನ್ನು ಪ್ರದರ್ಶಿಸುತ್ತದೆ. ನಗರ ಪ್ರಯಾಣಿಕರಿಗೆ ಪರಿಣಾಮಕಾರಿಯಾಗಿ ಹಸಿರು ಪರ್ಯಾಯವನ್ನು ಒದಗಿಸುವ ಇಲೆಕ್ಟ್ರಿಕ್ ಹೀರೋ ಪ್ರೀಮಿಯಾ ವಿಡಾ ವಿ1 ಸ್ಕೂಟರ್ಗಳು ಇಲ್ಲಿವೆ. ಹೀರೋ ಮೋಟೋಕಾರ್ಪ್ ನ ಮೊದಲ ಸಹ-ಅಭಿವೃದ್ಧಿಪಡಿಸಿದ ಮೋಟಾರ್ಸೈಕಲ್, ಹಾರ್ಲೇ-ಡೇವಿಡ್ಸನ್ X440 ಮೊದಲ ಅನುಭವವನ್ನು ಕೂಡ ಗ್ರಾಹಕರು ಇಲ್ಲಿ ಹೊಂದಬಹುದು.

