HomeAstroತಿಜೋರಿಯನ್ನು ಹಣದಿಂದ ಭರ್ತಿಮಾಡುತ್ತೆ ಮನೆಯಲ್ಲಿರೋ ಲಾಫಿಂಗ್‌ ಬುದ್ಧನ ಪ್ರತಿಮೆ, ಆದರೆ ನಿಮಗೆ ತಿಳಿದಿರಲಿ ಈ ಬಹುಮುಖ್ಯ...

ತಿಜೋರಿಯನ್ನು ಹಣದಿಂದ ಭರ್ತಿಮಾಡುತ್ತೆ ಮನೆಯಲ್ಲಿರೋ ಲಾಫಿಂಗ್‌ ಬುದ್ಧನ ಪ್ರತಿಮೆ, ಆದರೆ ನಿಮಗೆ ತಿಳಿದಿರಲಿ ಈ ಬಹುಮುಖ್ಯ ಸಂಗತಿ….!

 

ನಮ್ಮ ಆತ್ಮವಿಶ್ವಾಸ ಹೆಚ್ಚಿಸುವಂತಹ ಅನೇಕ ಸಂಗತಿಗಳನ್ನು ವಾಸ್ತು ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ಸಾಮಾನ್ಯವಾಗಿ ಮನೆಗಳಲ್ಲಿ ಲಾಫಿಂಗ್‌ ಬುದ್ಧನ ಪ್ರತಿಮೆಗಳನ್ನು ಇಟ್ಟಿರುತ್ತಾರೆ. ಲಾಫಿಂಗ್ ಬುದ್ಧನ ಹಲವಾರು ಬಗೆಯ ಮೂರ್ತಿಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಅದನ್ನು ಮನೆಯಲ್ಲಿ ಅಥವಾ ಕೆಲಸದ ಸ್ಥಳದಲ್ಲಿ ಇರಿಸಿದಾಗ ನಮ್ಮ  ಆತ್ಮವಿಶ್ವಾಸದ ಮಟ್ಟ ಹೆಚ್ಚಾಗುತ್ತದೆ.

ಆದರೆ ಇಲ್ಲಿ ಒಂದು ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಲಾಫಿಂಗ್ ಬುದ್ಧನನ್ನು ಖರೀದಿಸಿ ತರುವುದಕ್ಕಿಂತ ಯಾರಾದರೂ ಉಡುಗೊರೆಯಾಗಿ ನೀಡಿದರೆ ಮಾತ್ರ ಅದರ ನಿಜವಾದ ಪ್ರಯೋಜನವನ್ನು ಪಡೆಯಬಹುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಲಾಫಿಂಗ್ ಬುದ್ಧನನ್ನು ನಮಗಾಗಿ ಖರೀದಿಸುವುದು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ. ಅಲ್ಲದೆ ಇದನ್ನು ಇಟ್ಟುಕೊಳ್ಳಲು ಹಲವು ನಿಯಮಗಳಿವೆ, ಅಶುಭ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.

ಆರ್ಥಿಕ ಸಮಸ್ಯೆ ಪರಿಹಾರ…

ವಾಸ್ತುಶಾಸ್ತ್ರದ ಪ್ರಕಾರ ಲಾಫಿಂಗ್ ಬುದ್ಧನನ್ನು ಸ್ವಂತಕ್ಕಾಗಿ ಖರೀದಿಸಬೇಡಿ. ಅದನ್ನು ಕೊಂಡುಕೊಂಡರೆ ಶುಭ ಫಲಿತಾಂಶಗಳು ಸಿಗುವುದಿಲ್ಲ. ಸ್ವಂತ ಹಣದಿಂದ ಲಾಫಿಂಗ್ ಬುದ್ಧನನ್ನು ಎಂದಿಗೂ ಖರೀದಿಸಬೇಡಿ. ಯಾರಾದರೂ ಅದನ್ನು ಉಡುಗೊರೆಯಾಗಿ ನೀಡಿದರೆ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದರಿಂದ ಆರ್ಥಿಕ ಸಮಸ್ಯೆಗಳು ದೂರವಾಗುವುದಲ್ಲದೆ ಜೀವನದಲ್ಲಿ ನೆಮ್ಮದಿಯೂ ಸಿಗುತ್ತದೆ.

ಲಾಫಿಂಗ್ ಬುದ್ಧನನ್ನು ಹೇಗೆ ಇಡಬೇಕು?

ವಾಸ್ತು ಶಾಸ್ತ್ರದ ಪ್ರಕಾರ ಲಾಫಿಂಗ್ ಬುದ್ಧನನ್ನು ಮುಖ್ಯ ದ್ವಾರದ ಮುಂದೆ ಇಡಬೇಕು. ಇದರ ಎತ್ತರ ಕನಿಷ್ಠ 30 ಇಂಚುಗಳಷ್ಟು ಇರಬೇಕು. ಅದೇ ಸಮಯದಲ್ಲಿ, ವಿಗ್ರಹದ ಮೂಗಿನ ಎತ್ತರ ಮತ್ತು ಆಕಾರವೂ ಮುಖ್ಯವಾಗಿದೆ. ಇದರ ಮೂಗು ಎಂಟು ಬೆರಳುಗಳಿಗೆ ಸಮನಾಗಿರಬೇಕು. ಆಗ ಮಾತ್ರ ವ್ಯಕ್ತಿಗೆ ಅದರ ಲಾಭ ಸಿಗುತ್ತದೆ.

ಮುಖ್ಯದ್ವಾರ ತೆರೆದ ತಕ್ಷಣ ವ್ಯಕ್ತಿಯ ಗಮನವು ಈ ಪ್ರತಿಮೆಯತ್ತ ಹೋಗಬೇಕು. ಲಾಫಿಂಗ್ ಬುದ್ಧನನ್ನು ಎಂದಿಗೂ ಅಡುಗೆಮನೆ, ಊಟದ ಕೋಣೆ ಅಥವಾ ಮಲಗುವ ಕೋಣೆಯಲ್ಲಿ ಇಡಬಾರದು. ಅಷ್ಟೇ ಅಲ್ಲ ಪೂಜೆ ಕೂಡ ಮಾಡಬಾರದು.

For Latest News Updates, Join Our Whatsapp Community🚩
RELATED ARTICLES

Most Popular