HomeAstroಮನೆಯಲ್ಲಿ ಲಾಫಿಂಗ್ ಬುದ್ಧ ಇಡುವ ಮುನ್ನ ಎಚ್ಚರ ತಪ್ಪು ಜಾಗದಲ್ಲಿಟ್ಟರೆ ಸುಖದ ಬದಲು ಸಂಕಷ್ಟವೇ ಬಂದೀತು:...

ಮನೆಯಲ್ಲಿ ಲಾಫಿಂಗ್ ಬುದ್ಧ ಇಡುವ ಮುನ್ನ ಎಚ್ಚರ ತಪ್ಪು ಜಾಗದಲ್ಲಿಟ್ಟರೆ ಸುಖದ ಬದಲು ಸಂಕಷ್ಟವೇ ಬಂದೀತು: ಇಲ್ಲಿದೆ ವಾಸ್ತು ಟಿಪ್ಸ್

ಬೆಂಗಳೂರು: ವಾಸ್ತು ಶಾಸ್ತ್ರ ಮತ್ತು ಫೆಂಗ್‌ಶೂಯಿ ಪ್ರಕಾರ, ಲಾಫಿಂಗ್ ಬುದ್ಧ ಕೇವಲ ಅಲಂಕಾರಿಕ ವಸ್ತುವಲ್ಲ, ಅದು ಸಮೃದ್ಧಿಯ ಮಹಾನ್ ಸಂಕೇತ. ಇಂದು ಮನೆಗಳಿಂದ ಹಿಡಿದು ದೊಡ್ಡ ದೊಡ್ಡ ರೆಸ್ಟೋರೆಂಟ್‌ಗಳು ಮತ್ತು ವಾಣಿಜ್ಯ ಮಳಿಗೆಗಳವರೆಗೆ ಈ ನಗುವ ಬುದ್ಧನ ಪ್ರತಿಮೆ ರಾರಾಜಿಸುತ್ತಿರುವುದನ್ನು ನಾವು ಕಾಣಬಹುದು.


ಭಾರತೀಯ ಸಂಪ್ರದಾಯದಲ್ಲಿ ವಾಸ್ತು ಶಾಸ್ತ್ರಕ್ಕೆ ಎಷ್ಟು ಮಹತ್ವವಿದೆಯೋ, ಅಷ್ಟೇ ಪ್ರಾಮುಖ್ಯತೆಯನ್ನು ಚೀನಿ ಕಲೆಯಾದ ಫೆಂಗ್‌ಶೂಯಿ ಕೂಡ ಪಡೆದುಕೊಂಡಿದೆ.ಲಾಫಿಂಗ್ ಬುದ್ಧನ ಪ್ರತಿಮೆಯನ್ನು ಮನೆಯಲ್ಲಿ ಹೇಗೆಂದರಲ್ಲಿ, ಎಲ್ಲೆಂದರಲ್ಲಿ ಇಟ್ಟರೆ ಮನೆಯಲ್ಲಿ ಶಾಂತಿ ಬದಲಿಗೆ ಅಶಾಂತಿ ಉಂಟಾಗುತ್ತದೆ. ನೆಮ್ಮದಿ ಇರಬೇಕಾದ ಸ್ಥಳದಲ್ಲಿ ಕಷ್ಟ ತುಂಬಿರುತ್ತದೆ. ಸೂಕ್ತ ರೀತಿ ಇಡದಿದ್ದರೆ ಜೀವನದಲ್ಲಿ ಸಮಸ್ಯೆಗಳಿಗೆ ಕಾರಣವಾಗಬಹುದು. ಮನೆಯಲ್ಲಿ ಲಾಫಿಂಗ್ ಬುದ್ದನ ವಿಗ್ರಹವನ್ನು ಯಾವ ರೀತಿ ಇಡುವುದು ಎಂದು ತಿಳಿದುಕೊಳ್ಳಿ

ಲಾಫಿಂಗ್ ಬುದ್ಧನ ಸ್ಥಾನ ಎಲ್ಲಿದ್ದರೆ ಶ್ರೇಷ್ಠ?

ಮುಖ್ಯ ದ್ವಾರ: ಅದೃಷ್ಟವನ್ನು ಆಕರ್ಷಿಸಲು ವಿಗ್ರಹವನ್ನು ಮುಖ್ಯ ಬಾಗಿಲಿಗೆ ಎದುರಾಗಿ ಇರಿಸಿ. ಬಾಗಿಲು ತೆರೆದ ತಕ್ಷಣ ಲಾಫಿಂಗ್ ಬುದ್ಧನ ಮುಖ ಕಾಣಿಸುವುದರಿಂದ ಧನಾತ್ಮಕ ಚಿಂತನೆ ಹೆಚ್ಚುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಎತ್ತರ ಎಷ್ಟು ಇರಲಿ?: ನೆಲದ ಮೇಲೆ ವಿಗ್ರಹವನ್ನು ಇಡಬೇಡಿ. ಇದು ಕನಿಷ್ಠ 30 ರಿಂದ 32.5 ಇಂಚುಗಳ ಎತ್ತರದಲ್ಲಿರಬೇಕು (ಅಂದರೆ ನಿಮ್ಮ ಕಣ್ಣಿನ ಮಟ್ಟಕ್ಕೆ ಇರುವುದು ಗೌರವದ ಸಂಕೇತ).

ಆಗ್ನೇಯ ದಿಕ್ಕು: ಈ ದಿಕ್ಕಿನಲ್ಲಿ ವಿಗ್ರಹವಿದ್ದರೆ ಸಂಪತ್ತಿನ ಹರಿವು ಹೆಚ್ಚುತ್ತದೆ ಎಂದು ನಂಬಲಾಗಿದೆ.

ಪೂರ್ವ ಭಾಗ: ಕುಟುಂಬದಲ್ಲಿ ಸಾಮರಸ್ಯ ಮತ್ತು ಹಿರಿಯರ ನಡುವಿನ ಕಲಹಗಳು ದೂರವಾಗಲು ಮನೆಯ ಪೂರ್ವ ಭಾಗದಲ್ಲಿ ವಿಗ್ರಹವನ್ನು ಇರಿಸಿ.

ವೃತ್ತಿ ಮತ್ತು ವ್ಯಾಪಾರದಲ್ಲಿ ಯಶಸ್ಸಿಗೆ:

ಕಚೇರಿಯಲ್ಲಿ: ನಿಮ್ಮ ಕಚೇರಿಯ ಮೇಜಿನ ಮೇಲೆ ಲಾಫಿಂಗ್ ಬುದ್ಧನನ್ನು ಇರಿಸುವುದರಿಂದ ಮೇಲಧಿಕಾರಿಗಳು ಮತ್ತು ಸಹೋದ್ಯೋಗಿಗಳೊಂದಿಗೆ ಉತ್ತಮ ಸಂಬಂಧ ಏರ್ಪಡುತ್ತದೆ ಹಾಗೂ ವೃತ್ತಿಜೀವನದಲ್ಲಿ ಪ್ರಗತಿ ಕಾಣಬಹುದು.

ವಿದ್ಯಾರ್ಥಿಗಳಿಗೆ: ಏಕಾಗ್ರತೆ ಹೆಚ್ಚಿಸಲು ಸ್ಟಡಿ ಟೇಬಲ್ ಮೇಲೆ ವಿಗ್ರಹವನ್ನು ಇರಿಸುವುದು ಉತ್ತಮ.

ಯಾವ ಸಮಸ್ಯೆಗಳಿಗೆ ಯಾವ ರೀತಿಯ ಬುದ್ಧ?

ಆರ್ಥಿಕ ನಷ್ಟ: ನೀವು ಉದ್ಯಮದಲ್ಲಿ ನಷ್ಟ ಅನುಭವಿಸುತ್ತಿದ್ದರೆ, ಎರಡೂ ಕೈಗಳನ್ನು ಮೇಲೆ ಮಾಡಿರುವ ಲಾಫಿಂಗ್ ಬುದ್ಧನನ್ನು ನಿಮ್ಮ ಟೇಬಲ್ ಮೇಲೆ ಇರಿಸಿ.

ಸಾಲದ ಸಮಸ್ಯೆ: ಸಾಲದ ಸುಳಿಯಲ್ಲಿದ್ದರೆ, ಮಲಗಿರುವ ಭಂಗಿಯ ಲಾಫಿಂಗ್ ಬುದ್ಧನನ್ನು ನೀವು ಹಣ ಇಡುವ ಜಾಗದಲ್ಲಿರಿಸಿ.

ಈ ತಪ್ಪುಗಳನ್ನು ಮಾಡಬೇಡಿ:

ಅಡುಗೆ ಮನೆ, ಊಟದ ಕೋಣೆ ಅಥವಾ ಮಲಗುವ ಕೋಣೆಯಲ್ಲಿ ವಿಗ್ರಹವನ್ನು ಇಡಬಾರದು.

ಇದನ್ನು ದೇವರಂತೆ ಪೂಜಿಸಬಾರದು, ಕೇವಲ ಶೋ-ಪೀಸ್ ಆಗಿ ಇರಿಸಬೇಕು.

ಎಲೆಕ್ಟ್ರಿಕ್ ಉಪಕರಣಗಳು ಅಥವಾ ವೈರ್‌ಗಳ ಹತ್ತಿರ ಇಡಬೇಡಿ, ಏಕೆಂದರೆ ಅವುಗಳ ತರಂಗಗಳು ಧನಾತ್ಮಕ ಶಕ್ತಿಯನ್ನು ಕುಂದಿಸಬಹುದು.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular