HomeLatest Newsಗಡಿಯಲ್ಲಿ ಗುಂಡಿನ ಸದ್ದಿನ ನಡುವೆ ಸೈನಿಕರಿಗೆ ಲಸ್ಸಿ ನೀಡಿದ ಬಾಲಕ: ಪಂಜಾಬ್‌ನ ಶ್ರವಣ್ ಸಿಂಗ್‌ಗೆ ರಾಷ್ಟ್ರಪತಿಗಳಿಂದ...

ಗಡಿಯಲ್ಲಿ ಗುಂಡಿನ ಸದ್ದಿನ ನಡುವೆ ಸೈನಿಕರಿಗೆ ಲಸ್ಸಿ ನೀಡಿದ ಬಾಲಕ: ಪಂಜಾಬ್‌ನ ಶ್ರವಣ್ ಸಿಂಗ್‌ಗೆ ರಾಷ್ಟ್ರಪತಿಗಳಿಂದ ಬಾಲ ಪುರಸ್ಕಾರ!

ದೇಶಪ್ರೇಮಕ್ಕೆ ವಯಸ್ಸಿನ ಹಂಗಿಲ್ಲ ಎಂಬುದನ್ನು ಪಂಜಾಬ್‌ನ 10 ವರ್ಷದ ಬಾಲಕ ಶ್ರವಣ್ ಸಿಂಗ್ ಸಾಬೀತುಪಡಿಸಿದ್ದಾನೆ. ಗಡಿಯಲ್ಲಿ ಪಾಕಿಸ್ತಾನದ ಡ್ರೋನ್‌ಗಳು ಹಾರಾಡುತ್ತಿದ್ದರೂ ಲೆಕ್ಕಿಸದೆ, ಜೀವದ ಹಂಗು ತೊರೆದು ಭಾರತೀಯ ಸೈನಿಕರಿಗೆ ನೆರವಾದ ಈ ಪುಟ್ಟ ಬಾಲಕನಿಗೆ ಇದೀಗ ದೇಶದ ಅತ್ಯುನ್ನತ ನಾಗರಿಕ ಗೌರವವಾದ ‘ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ’ ನೀಡಿ ಗೌರವಿಸಲಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶ್ರವಣ್ ಸಿಂಗ್‌ನ ಅಪ್ರತಿಮ ಮಾನವೀಯತೆ ಮತ್ತು ದೇಶಪ್ರೇಮವನ್ನು ಮೆಚ್ಚಿ ಈ ಪ್ರಶಸ್ತಿ ಪ್ರದಾನ ಮಾಡಿದ್ದಾರೆ.

ಯಾರು ಈ ಶ್ರವಣ್ ಸಿಂಗ್?

ಪಂಜಾಬ್‌ನ ಫಿರೋಜ್‌ಪುರ ಜಿಲ್ಲೆಯ ಚಕ್ ತಾರನ್ ವಾಲಿ ಎಂಬ ಗಡಿ ಗ್ರಾಮದ ನಿವಾಸಿಯಾದ ಶ್ರವಣ್ ಸಿಂಗ್ ಸದ್ಯ ನಾಲ್ಕನೇ ತರಗತಿ ಓದುತ್ತಿದ್ದಾನೆ. ತಾನೂ ಬೆಳೆದು ದೊಡ್ಡವನಾದ ಮೇಲೆ ಸೈನಿಕನಾಗಬೇಕು ಎಂಬ ಕನಸು ಹೊತ್ತಿರುವ ಈತ, ಕಳೆದ ಮೇ ತಿಂಗಳಲ್ಲಿ ನಡೆದ ‘ಆಪರೇಷನ್ ಸಿಂಧೂರ್’ ವೇಳೆ ನಿಜವಾದ ಹೀರೊ ಆಗಿ ಹೊರಹೊಮ್ಮಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪಾಕ್ ಡ್ರೋನ್‌ಗಳ ನಡುವೆ ಸಾಹಸಮಯ ಓಟ

ಪಹಲ್ಗಾಮ್ ಉಗ್ರರ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಭಾರತೀಯ ಸೈನಿಕರು ಶ್ರವಣ್ ಸಿಂಗ್ ಗ್ರಾಮದ ಗಡಿ ಭಾಗಗಳಲ್ಲಿ ಬೀಡುಬಿಟ್ಟಿದ್ದರು. ಸುಡುವ ಬಿಸಿಲಿನಲ್ಲಿ ದೇಶ ಕಾಯುತ್ತಿದ್ದ ಸೈನಿಕರ ಕಷ್ಟ ಕಂಡ ಈ ಬಾಲಕ ಸುಮ್ಮನೆ ಕುಳಿತುಕೊಳ್ಳಲಿಲ್ಲ. ತನ್ನ ಮನೆಯಿಂದ ಸೈನಿಕರು ಇರುವ ಜಮೀನಿನವರೆಗೆ ಪ್ರತಿದಿನ ನೀರು, ಹಾಲು, ಲಸ್ಸಿ ಮತ್ತು ಐಸ್ ಕ್ಯೂಬ್‌ಗಳನ್ನು ಹೊತ್ತೊಯ್ಯುತ್ತಿದ್ದನು. ಆ ಸಮಯದಲ್ಲಿ ಪಾಕಿಸ್ತಾನದ ಡ್ರೋನ್‌ಗಳು ಭಾರತದ ಗಡಿಯೊಳಗೆ ನುಸುಳುತ್ತಿದ್ದರೂ, ಆ ಅಪಾಯದ ನಡುವೆಯೇ ಸೈನಿಕರಿಗೆ ಬೇಕಾದ ಅಗತ್ಯ ವಸ್ತುಗಳನ್ನು ತಲುಪಿಸುವ ಕೆಲಸ ಮಾಡುತ್ತಿದ್ದನು.

ಸೈನಿಕರಿಗಾಗಿ ಮನೆ ಬಿಟ್ಟುಕೊಟ್ಟ ಕುಟುಂಬ

ಕೇವಲ ಆಹಾರ ತಲುಪಿಸುವುದು ಮಾತ್ರವಲ್ಲದೆ, ತನ್ನ ಕುಟುಂಬದವರನ್ನು ಒಪ್ಪಿಸಿ ಸೈನಿಕರು ವಿಶ್ರಾಂತಿ ಪಡೆಯಲು ತಮ್ಮ ಮನೆಯನ್ನೇ ಬಿಟ್ಟುಕೊಡುವಂತೆ ಶ್ರವಣ್ ಮಾಡಿದ್ದನು. ಬಾಲಕನ ಈ ನಿಸ್ವಾರ್ಥ ಸೇವೆಯನ್ನು ಗುರುತಿಸಿದ ಭಾರತೀಯ ಸೇನೆಯ ಪಶ್ಚಿಮ ಕಮಾಂಡ್‌ನ ಲೆಫ್ಟಿನೆಂಟ್ ಜನರಲ್ ಮನೋಜ್ ಕುಮಾರ್ ಕಟಿಯಾರ್ ಅವರು ಫಿರೋಜ್‌ಪುರ ಕಂಟೋನ್ಮೆಂಟ್‌ನಲ್ಲಿ ಶ್ರವಣ್‌ನನ್ನು ಸನ್ಮಾನಿಸಿದ್ದರು. ಅಷ್ಟೇ ಅಲ್ಲದೆ, ಈತನ ಮುಂದಿನ ಸಂಪೂರ್ಣ ಶಿಕ್ಷಣದ ಜವಾಬ್ದಾರಿಯನ್ನು ಭಾರತೀಯ ಸೇನೆಯೇ ವಹಿಸಿಕೊಂಡಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular