ನಾವು ಇಂಟರ್ನೆಟ್ ಅನ್ನು ವೈಫೈ ಮೂಲಕ ಬಳಸುವಂತೆಯೇ, ಇನ್ಮುಂದೆ ವಿದ್ಯುತ್ ಅನ್ನು ಕೂಡ ಯಾವುದೇ ವೈರ್ ಇಲ್ಲದೆಯೇ ಬಳಸುವ ಕಾಲ ಹತ್ತಿರ ಬಂದಿದೆ. ಇಂಧನ ಕ್ಷೇತ್ರದಲ್ಲಿ ಜಗತ್ತೇ ಬೆರಗಾಗುವಂತಹ ಸಾಧನೆಯನ್ನು ಫಿನ್ಲೆಂಡ್‌ನ ಸಂಶೋಧಕರು ಮಾಡಿದ್ದಾರೆ.ಫಿನ್ಲೆಂಡ್ ದೇಶವು ಇತ್ತೀಚೆಗೆ ತಂತಿ ರಹಿತವಾಗಿ (Wireless) ಗಾಳಿಯಲ್ಲಿ ವಿದ್ಯುತ್ ಪ್ರಸಾರ ಮಾಡುವ ತಂತ್ರಜ್ಞಾನವನ್ನು ಯಶಸ್ವಿಯಾಗಿ ಪ್ರದರ್ಶಿಸುವ ಮೂಲಕ ಇಂಧನ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಈ ಕುರಿತಾದ ಪ್ರಮುಖಾಂಶಗಳು ಇಲ್ಲಿವೆ:
ವೈರ್ ಇಲ್ಲದೆ ವಿದ್ಯುತ್ ಹರಿಸುವುದು ಹೇಗೆ ಎಂಬ ಕುತೂಹಲಕ್ಕೆ ವಿಜ್ಞಾನಿಗಳು ಉತ್ತರ ನೀಡಿದ್ದಾರೆ. ಇಲ್ಲಿ ಅಲ್ಟ್ರಾಸೌಂಡ್ ಮತ್ತು ಲೇಸರ್ ತಂತ್ರಜ್ಞಾನದ ಸಂಯೋಜನೆ ಇದೆ:
ಅದೃಶ್ಯ ಪಥ: ಮೊದಲು ಮನುಷ್ಯನ ಕಿವಿಗೆ ಕೇಳಿಸದ ಅಲ್ಟ್ರಾಸೌಂಡ್ ತರಂಗಗಳ ಮೂಲಕ ಗಾಳಿಯಲ್ಲಿ ಒಂದು ಅದೃಶ್ಯ ಮಾರ್ಗವನ್ನು ಸೃಷ್ಟಿಸಲಾಗುತ್ತದೆ.
ಲೇಸರ್ ಕಿರಣ: ನಂತರ ವಿದ್ಯುತ್ ಅನ್ನು ಲೇಸರ್ ಕಿರಣವನ್ನಾಗಿ ಪರಿವರ್ತಿಸಿ, ಈ ಅಲ್ಟ್ರಾಸೌಂಡ್ ಹಾದಿಯಲ್ಲಿ ಹರಿಸಲಾಗುತ್ತದೆ.
ಮರುಪರಿವರ್ತನೆ: ಇನ್ನೊಂದು ತುದಿಯಲ್ಲಿರುವ ಸಾಧನವು ಈ ಲೇಸರ್ ಅನ್ನು ಸ್ವೀಕರಿಸಿ, ಮತ್ತೆ ನಮಗೆ ಬೇಕಾದ ವಿದ್ಯುತ್ ಆಗಿ ಬದಲಾಯಿಸುತ್ತದೆ.
ಡಾಟಾ ಸೆಂಟರ್ ಶಾಖದಿಂದ ಕರೆಂಟ್
ಫಿನ್ಲೆಂಡ್ ಸಂಶೋಧಕರು ಕೇವಲ ವೈರ್‌ಲೆಸ್ ವಿದ್ಯುತ್ ಮಾತ್ರವಲ್ಲದೆ, ಡಾಟಾ ಸೆಂಟರ್‌ಗಳ ಬೃಹತ್ ಸಿಸ್ಟಂಗಳಿಂದ ಹೊರಬರುವ ವ್ಯರ್ಥ ಶಾಖವನ್ನು (Heat) ಬಳಸಿಕೊಂಡು ವಿದ್ಯುತ್ ಉತ್ಪಾದಿಸುವಲ್ಲಿಯೂ ಯಶಸ್ವಿಯಾಗಿದ್ದಾರೆ.
ಅಮೆರಿಕದ ದರ್ಪದಿಂದಲೂ ಬಲ ಪ್ರದರ್ಶನ
ಇತ್ತ ಅಮೆರಿಕದ ರಕ್ಷಣಾ ಸಂಶೋಧನಾ ಸಂಸ್ಥೆ ‘DARPA’ ಕೂಡ ಈ ರೇಸ್‌ನಲ್ಲಿದ್ದು, ಲೇಸರ್ ಮೂಲಕ ಸುಮಾರು 8.6 ಕಿಲೋಮೀಟರ್ ದೂರಕ್ಕೆ 800 ವ್ಯಾಟ್ ವಿದ್ಯುತ್ ಅನ್ನು ಯಶಸ್ವಿಯಾಗಿ ರವಾನಿಸಿದೆ. ಇದು ಈ ತಂತ್ರಜ್ಞಾನದ ಮುಂದಿನ ಹಂತದ ಮುನ್ಸೂಚನೆಯಾಗಿದೆ.
ಬದಲಾಗಲಿದೆ ಭವಿಷ್ಯದ ಚಿತ್ರಣ:
ವೈರ್ ಕಿರಿಕಿರಿ ಇಲ್ಲ: ಇನ್ಮುಂದೆ ಬೀದಿಗಳಲ್ಲಿ ತಂತಿಗಳ ಜಾಲ, ಬ್ಯಾಟರಿಗಳ ಅವಶ್ಯಕತೆ ಇಲ್ಲದಂತಾಗಬಹುದು.
ಹೆಚ್ಚಿನ ಸುರಕ್ಷತೆ: ಇದು ಲೋಹದ ತಂತಿಗಳ ಮೂಲಕ ಹರಿಯದ ಕಾರಣ, ಅಣುವಿದ್ಯುತ್ ಸ್ಥಾವರಗಳಂತಹ ಸೂಕ್ಷ್ಮ ಪ್ರದೇಶಗಳಲ್ಲಿಯೂ ಯಾವುದೇ ಅಪಾಯವಿಲ್ಲದೆ ಬಳಸಬಹುದು.
ವೈರ್‌ಲೆಸ್ ಪವರ್ ತಂತ್ರಜ್ಞಾನವು ಸದ್ಯಕ್ಕೆ ಸಂಪೂರ್ಣವಾಗಿ ಈಗಿನ ವಿದ್ಯುತ್ ಜಾಲಗಳನ್ನು (Grids) ಬದಲಾಯಿಸದಿದ್ದರೂ, ಮುಂದಿನ ದಿನಗಳಲ್ಲಿ ಸ್ಮಾರ್ಟ್ ಸಿಟಿಗಳು, ಸಾರಿಗೆ ವ್ಯವಸ್ಥೆ ಮತ್ತು ನವೀಕರಿಸಬಹುದಾದ ಇಂಧನ ಮೂಲಗಳಲ್ಲಿ ದೊಡ್ಡ ಬದಲಾವಣೆ ತರುವ ನಿರೀಕ್ಷೆಯಿದೆ. ಫಿನ್ಲೆಂಡ್‌ನ ಈ ಸಂಶೋಧನೆಯು ವಿಜ್ಞಾನ ಲೋಕದ ದಶಕಗಳ ಕನಸನ್ನು ನನಸಾಗಿಸುವತ್ತ ದೊಡ್ಡ ಹೆಜ್ಜೆಯಾಗಿದೆ.

