ದುನಿಯಾ ವಿಜಯ್ ಅಭಿಮಾನಿಗಳಿಗೆ ಯುಗಾದಿ ಹಬ್ಬಕ್ಕೆ ಬಂಪರ್ ಗಿಫ್ಟ್ ಸಿಕ್ಕಿದೆ. ಚಿತ್ರಮಂದಿರಗಳಲ್ಲಿಯೂ ಹಿಟ್ ಆಗಿದ್ದ ‘ಲ್ಯಾಂಡ್‌ಲಾರ್ಡ್ ಸಿನಿಮಾ ಮಾರ್ಚ್ 19ರಂದು ಒಟಿಟಿಗೆ ಬರುತ್ತಿದೆ.
ಮನೆಯಲ್ಲಿಯೇ ಕುಳಿತು ಒಟಿಟಿಯಲ್ಲಿ ಲ್ಯಾಂಡ್‌ಲಾರ್ಡ್ ಸಿನಿಮಾ ನೋಡಬಹುದು. ದುನಿಯಾ ವಿಜಯ್, ರಾಜ್ ಬಿ.ಶೆಟ್ಟಿ, ರಚಿತಾ ರಾಮ್, ರಾಕೇಶ್ ಅಡಿಗ ಅಭಿಯನಯದ ಚಿತ್ರವಿದು.
ಜಡೇಶ್ ಕೆ. ಹಂಪಿ ನಿರ್ದೇಶನದ ಈ ಸಿನಮಾಕ್ಕೆ ಕರ್ನಾಟಕ ಸರ್ಕಾರ ತೆರಿಗೆ ವಿನಾಯಿತಿಯನ್ನು ನೀಡಿತ್ತು. 1980ರಲ್ಲಿ ಗ್ರಾಮೀಣ ಕರ್ನಾಟಕದಲ್ಲಿ ನಡೆಯುವ ಕಥೆಯನ್ನು ಹೇಳುವ ಚಿತ್ರವನ್ನು ಸಾರಥಿ ಫಿಲ್ಮ್ಸ್ ಬ್ಯಾನರ್ ಮೂಲಕ ನಿರ್ಮಾಣ ಮಾಡಲಾಗಿದೆ.
ಜೀ 5 ಮೂಲಕ ಪ್ರಸಾರ: ಮಾರ್ಚ್ 19ರಿಂದ ಲ್ಯಾಂಡ್‌ಲಾರ್ಡ್ ಸಿನಿಮಾವನ್ನು ಜೀ-5 ಒಟಿಟಿ ಮೂಲಕ ವೀಕ್ಷಣೆ ಮಾಡಬಹುದು. ಚಿತ್ರಮಂದಿರದಲ್ಲಿಯೂ ಸದ್ದು ಮಾಡಿದ್ದ ಸಿನಿಮಾ ಈಗ ಒಟಿಸಿ ಮೂಲಕ ಹೆಚ್ಚಿನ ಪ್ರೇಕ್ಷಕರನ್ನು ತಲುಪಲಿದೆ.
ಸಿನಿಮಾ ಬಗ್ಗೆ ಮಾತನಾಡಿರುವ ದುನಿಯಾ ವಿಜಯ್, “ಕೊಡಲಿ ರಾಚಯ್ಯ ಎಂಬ ಪಾತ್ರವನ್ನು ನಾನು ಮಾಡಿದ್ದೇನೆ. ರಾಚಯ್ಯನು ಒಬ್ಬ ಅಂತರ್ಮುಖಿ. ಹೆಚ್ಚು ಮಾತನಾಡದೇ ಒಳಗಿನ ಭಾವನೆಗಳನ್ನು ವ್ಯಕ್ತಪಡಿಸುವ ಪಾತ್ರ ನನಗೆ ಒಂದು ಸವಾಲಾಗಿತ್ತು” ಎಂದು ಹೇಳಿದ್ದಾರೆ.
“ಇದೀಗ ಜೀ-5ನಲ್ಲಿ ಈ ಸಿನಿಮಾ ಬಿಡುಗಡೆ ಆಗುತ್ತಿರುವುದು ನನಗೆ ಸಂತಸ ತಂದಿದೆ. ಚಿತ್ರ ನೋಡಿದ ಬಳಿಕ ಪ್ರೇಕ್ಷಕರ ಅಭಿಪ್ರಾಯಕ್ಕಾಗಿ ಕಾಯುತ್ತಿದ್ದೇನೆ” ಎಂದು ತಿಳಿಸಿದ್ದಾರೆ.
ಚಿತ್ರದಲ್ಲಿ ಹಲವಾರು ಕಲಾವಿದರಿದ್ದಾರೆ. ವಿಲನ್ ಪಾತ್ರದಲ್ಲಿ ಅಬ್ಬರಿಸಿದ್ದ ರಾಜ್ ಬಿ. ಶೆಟ್ಟಿ ನಟನೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಒಟಿಟಿಯಲ್ಲಿ ಸಿನಿಮಾ ನೋಡಿದ ಜನರು ಏನು ಹೇಳುತ್ತಾರೆ? ಎಂದು ಕಾದು ನೋಡಬೇಕಿದೆ.

