HomeKarnatakaBIG NEWS: ಲಕ್ಷ್ಮಣ ಸವದಿ ಮಾತ್ರವಲ್ಲ, ದೇಶ ಮುಖ್ಯ ಎಂಬ ಮನೋಭಾವದವರೆಲ್ಲ ಬಿಜೆಪಿಗೆ ಬರಬೇಕು: ಸಿ.ಟಿ.ರವಿ...

BIG NEWS: ಲಕ್ಷ್ಮಣ ಸವದಿ ಮಾತ್ರವಲ್ಲ, ದೇಶ ಮುಖ್ಯ ಎಂಬ ಮನೋಭಾವದವರೆಲ್ಲ ಬಿಜೆಪಿಗೆ ಬರಬೇಕು: ಸಿ.ಟಿ.ರವಿ ಕರೆ

ಬಳ್ಳಾರಿ: ಅಥಣಿ ಕಾಂಗ್ರೆಸ್ ಶಾಸಕ, ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಬಿಜೆಪಿಗೆ ಮರು ಸೇರ್ಪಡೆ ವಿಚಾರವಾಗಿ ಮಾತನಾಡಿದ ಬಿಜೆಪಿ ನಾಯಕ ಸಿ.ಟಿ.ರವಿ, ಸವದಿ ಮಾತ್ರವಲ್ಲ, ದೇಶ ಮುಖ್ಯ ಎಂಬ ಮನೋಭಾವ ಇರುವವರೆಲ್ಲ ಬಿಜೆಪಿಗೆ ಸೇರಬೇಕು ಎಂದು ಹೇಳಿದರು.

ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ.ರವಿ, ಅಧಿಕಾರ ವ್ಯಾಮೋಹ, ಸ್ವಜನ ಪಕ್ಷಪಾತ, ಸ್ವಾರ್ಥ ಎಲ್ಲವನ್ನೂ ಮೀರಿ ದೇಶ ಮುಖ್ಯ ಅನ್ನುವವರು ಬೇರೆ ಪಕ್ಷಗಳಲ್ಲಿಯೂ ಇರಬಹುದು. ಅವರೆಲ್ಲ ಬಿಜೆಪಿಗೆ ಬರಬೇಕು ಎಂದು ಕರೆ ನೀಡಿದರು.

ದೇಶ ಈಗ ನಿರ್ಣಾಯಕ ಹಂತದಲ್ಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭವ್ಯ ಭಾರತ ನಿರ್ಮಾಣದ ಬೀಜಾಂಕುರವಾಗಿದೆ. ಅದನ್ನು ವಟ ವೃಕ್ಷವನ್ನಾಗಿ ಬೆಳೆಸಲು ಸಮಾನ ಮನಸ್ಕರರೆಲ್ಲರೂ ಪ್ರಧಾನಿಯವರೊಂದಿಗೆ ಕೈ ಜೋಡಿಸಬೇಕು ಎಂದು ಹೇಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular