HomeLatest NewsBIG NEWS: ನಿಧಿ ಸಿಕ್ಕ ಲಕ್ಕುಂಡಿ ಗ್ರಾಮದಲ್ಲಿ ಮತ್ತಷ್ಟು ಅಮೂಲ್ಯ ವಸ್ತುಗಳು ಪತ್ತೆ: ಮುತ್ತು, ಹವಳ,...

BIG NEWS: ನಿಧಿ ಸಿಕ್ಕ ಲಕ್ಕುಂಡಿ ಗ್ರಾಮದಲ್ಲಿ ಮತ್ತಷ್ಟು ಅಮೂಲ್ಯ ವಸ್ತುಗಳು ಪತ್ತೆ: ಮುತ್ತು, ಹವಳ, ನೀಲಮಣಿ, ಸ್ಪಟಿಕ, ನಾಣ್ಯಗಳು ಪತ್ತೆ

ಗದಗ: ನಿಧಿ ಸಿಕ್ಕಿರುವ ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ಮತ್ತೆ ವೈವಿದ್ಯಮಯವಾದ ಅಮೂಲ್ಯ ವಸ್ತುಗಳು ಪತ್ತೆಯಾಗಿವೆ. ಪುರಾತನ ಕಾಲದ ವಸ್ತುಗಳು, ನಾಣ್ಯ, ಮುತ್ತು, ಹವಳ, ಸ್ಪಟಿಕ, ನೀಲಮಣಿಯಂತಹ ಹಲವಾರು ವಸ್ತುಗಳು ಪತ್ತೆಯಾಗಿದ್ದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಲಕ್ಕುಂಡಿ ಗ್ರಾಮದ ಬಸಪ್ಪ ಬಡಿಗೇರ ಎಂಬುವವರು ಮಣ್ಣನ್ನು ಅಗೆದು ಪರಿಶೀಲಿಸಿದಗ ಅವರಿಗೆ ಮುತ್ತು, ಹವಳ, ನೀಲಮಣಿ, ಸ್ಪಟಿಕ, ಬಿಳಿ ಹವಳ, ಕರಿಪುಕ್ಕಾ ಸೇರಿದಂತೆ ಹಲವು ಅಮೂಲ್ಯ ವಸ್ತುಗಳು ಸಿಕ್ಕಿದ್ದು, ಇದರ ಜೊತೆಗೆ ನಾಣ್ಯ ಕೂಡ ಪತ್ತೆಯಾಗಿದೆ.

ಬಸಪ್ಪ ಬಡಿಗೇರ ಮಳೆ ಬಂದ ಸಂದರ್ಭಗಳಲ್ಲಿ ಸಾಮಾನ್ಯವಾಗಿ ಲಕ್ಕುಂಡಿ ಗ್ರಾಮದಲ್ಲಿ ಶೋಧ ಮಾಡುತ್ತಾರೆ. ಈ ಹಿಂದೆಯೂ ಅವರಿಗೆ ಸಾಕಷ್ಟು ಪುರಾತನ ವಸ್ತುಗಳು ಪತ್ತೆಯಾಗಿದ್ದವು. ಅವುಗಳನ್ನು ಸರ್ಕಾರಕ್ಕೆ ಹಸ್ತಾಂತರ ಅಮಡಿದ್ದರಂತೆ. ಇದೀಗ ಮತ್ತೆ ಶೋಧ ನಡೆಸಿದಾಗ ಲಕ್ಕುಂಡಿ ಗ್ರಾಮದಲ್ಲಿಯೇ ಅವರಿಗೆ ಮುತ್ತು, ಹವಳ, ನೀಲಮಣಿಯಂತಹ ಅಪರೂಪದ ಹಾಗೂ ವೈಶಿಷ್ಟ್ಯಪೂರ್ಣವಾದ ವಸ್ತುಗಳು ಸಿಕ್ಕಿರುವುದಾಗಿ ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಲಕ್ಕುಂಡಿ ಗ್ರಾಮದಲ್ಲಿ ಮನೆ ಪಾಯದ ಕೆಲಸದ ವೇಳೆ ಅರ್ಧಕೆಜಿ ಚಿನ್ನಾಭರಣಗಳು ಸಿಕ್ಕ ಬೆನ್ನಲ್ಲೇ ಇದೀಗ ಅದೇ ಗ್ರಾಮದಲ್ಲಿ ಮತ್ತಷ್ಟು ಪುರಾತನ ವಸ್ತಿಗಳು ಸಿಕ್ಕುತ್ತಿರುವುದು ಇನ್ನಷ್ಟು ಕುತೂಹಲ ಕೆರಳಿಸಿದೆ.

For Latest News Updates, Join Our Whatsapp Community🚩
RELATED ARTICLES

Most Popular