HomeLatest Newsಲಕ್ಕುಂಡಿಯಲ್ಲಿ ನಿಧಿ ಪತ್ತೆ ಪ್ರಕರಣ: ಸಿಕ್ಕಿರುವ ಚಿನ್ನಾಭರಣಗಳು ಯಾವವು? ಇಲ್ಲಿದೆ ಸಂಪೂರ್ಣ ಮಾಹಿತಿ

ಲಕ್ಕುಂಡಿಯಲ್ಲಿ ನಿಧಿ ಪತ್ತೆ ಪ್ರಕರಣ: ಸಿಕ್ಕಿರುವ ಚಿನ್ನಾಭರಣಗಳು ಯಾವವು? ಇಲ್ಲಿದೆ ಸಂಪೂರ್ಣ ಮಾಹಿತಿ

ಗದಗ: ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ಸಿಕ್ಕಿರುವ ನಿಧಿ ವಿಚಾರ ರಾಜ್ಯದಲ್ಲಿ ಭಾರಿ ಚರ್ಚೆಯಾಗುತ್ತಿದೆ. ಲಕ್ಕುಂಡಿ ಗ್ರಾಮದಲ್ಲಿ ಮನೆ ಕಟ್ಟಲು ಅಡಿಪಾಯ ತೆಗೆಯುವಾಗ ತಂಬಿಗೆಯೊಂದರಲ್ಲಿ ನಿಧಿ ಪತ್ತೆಯಾಗಿದೆ. ಚಿನ್ನಾಭರಣಗಳು, ಸೇರಿದಂತೆ ಹಲವು ವಸ್ತುಗಳು ಸಿಕ್ಕಿವೆ. ಸಿಕ್ಕ ನಿಧಿಯಲ್ಲಿ ಇರುವ ಚಿನ್ನದ ವಸ್ತುಗಳು ಯಾವವು? ಎಷ್ಟು ತೂಕದ ನಿಧಿ ಸಿಕ್ಕಿದೆ? ಎಂಬ ಬಗ್ಗೆ ಸ್ವತಃ ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.

ಗದಗ ಜಿಲ್ಲಾಧಿಕಾರಿ ಸಿ.ಎನ್ ಶ್ರೀಧರ್ ಲಕ್ಕುಂಡಿಯಲ್ಲಿ ಸಿಕ್ಕ ನಿಧಿಯ ಕುರುತು ವಿವರ ನೀಡಿದ್ದಾರೆ. ನಿಧಿಯಲ್ಲಿರುವ ಚಿನ್ನಾಭರಣ ಹಾಗೂ ಅದರ ತೂಕದ ವಿವರ ಇಲ್ಲಿದೆ.
ಕೈ ಕಡಗದ 1 ತುಂಡು – 33 ಗ್ರಾಂ
ಕೈ ಕಡಗದ 1 ತುಂಡು – 12 ಗ್ರಾಂ
ಕಂಠದ ಹಾರ 1 ತುಂಡು – 44 ಗ್ರಾಂ
ಕಂಠದ ಹಾರ 1 ತುಂಡು – 137 ಗ್ರಾಂ
ಕುತ್ತಿಗೆ ಚೈನ್ 1 ತುಂಡು – 49 ಗ್ರಾಂ
5 ದೊಡ್ಡ ಗುಂಡಿನ 1 ತೋಡೆ ತುಂಡು – 34 ಗ್ರಾಂ
2 ದೊಡ್ಡ ಗುಂಡಿನ 1 ತೋಡೆ ತುಂಡು – 17 ಗ್ರಾಂ
1 ದೊಡ್ಡ ಗುಂಡು + 1 ಸಣ್ಣ ಗುಂಡಿನ 1 ತುಂಡು – 11 ಗ್ರಾಂ
1 ದೊಡ್ಡ ಗುಂಡು + 1 ಸಣ್ಣ ಗುಂಡಿನ 1 ತುಂಡು – 11 ಗ್ರಾಂ
1 ವಂಕಿ ಉಂಗುರ – 23 ಗ್ರಾಂ
ಕಿವಿ ಹ್ಯಾಂಗಿಂಗ್ 1 ತುಂಡು – 03 ಗ್ರಾಂ
1 ನಾಗ ರೂಪದ ಕಿವಿಯೋಲೆ ಬಿಳಿ ಮಣಿ ಸಹಿತ – 07 ಗ್ರಾಂ
1 ನಾಗ ರೂಪದ ಕಿವಿಯೋಲೆ ಕೆಂಪು ಮಣಿ ಸಹಿತ – 07 ಗ್ರಾಂ
1 ಓಲೆ (ನೀಲಿ ಹರಳಿನೊಂದಿಗೆ) – 05 ಗ್ರಾಂ
1 ಓಲೆ (ನೀಲಿ ಹರಳಿನೊಂದಿಗೆ) – 05 ಗ್ರಾಂ
1 ಕೇಸರಿ ಹವಳದ ಓಲೆ – 05 ಗ್ರಾಂ
1 ಉಂಗುರ – 08 ಗ್ರಾಂ
1 ಬಿಳಿ ಹರಳು, 1 ಕೆಂಪು ಹರಳು , 1 ಹಸಿರು ಹರಳು ಅಂಗಿ ಗುಂಡಿ ಮತ್ತು 1 ತುಂಡು ಗೆಜ್ಜೆ ಎಲ್ಲ ಸೇರಿ:- 4 ಗ್ರಾಂ
2 ಕಡ್ಡಿಗಳು – 03 ಗ್ರಾಂ
22 ತೂತು ಬಿಲ್ಲೆಗಳು – 48 ಗ್ರಾಂ
ಒಟ್ಟು ಚಿನ್ನ : 466 ಗ್ರಾಂ
ಚಿನ್ನಾಭರಣ ಮಾತ್ರವಲ್ಲದೆ ತಾಮ್ರದ ಶಿಥಿಲಗೊಂಡ 1 ಮಡಿಕೆ, 1 ಮುಚ್ಚಳ ಹಾಗೂ 3 ಸಣ್ಣ ತುಂಡು ಸಹಿತ 634 ಗ್ರಾಂ ತಾಮ್ರದ ತೆಂಬಿಗೆ ದೊರೆತಿದೆ.

ಸಿಕ್ಕಿರುವ ನಿಧಿಯ ಬಗ್ಗೆ ಸಂಪೂರ್ಣ ತನಿಖೆಯಾಗಬೇಕಿದೆ. ಅಲ್ಲಿಯವರೆಗೂ ನಿಧಿ ಜಿಲ್ಲಾ ಖಜಾನೆಯಲ್ಲಿರುತ್ತದೆ. ತನಿಖೆ ಬಳಿಕ ನಿಧಿ ರಾಜ್ಯ ಖಜಾನೆಗೆ ಹೋಗುತ್ತದೆ ಎಂದು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಿಧಿಯನ್ನು ಬಳಿಕ ಪುರಾತತ್ವ ಇಲಾಖೆಯಿಂದ ವಸ್ತುಗಳ ಸಂಗ್ರಹಾಲಯದಲ್ಲಿ ಇಡಲಾಗುತ್ತದೆ. ಇಲ್ಲಿ ಕುಟುಂಬದವರ ಅಭಿಪ್ರಾಯದಂತೆ ನಡೆದುಕೊಳ್ಳಲಾಗುವುದಿಲ್ಲ. ನಿಧಿ ಸಿಕ್ಕ ಬಳಿಕ ಕಾನೂನು ಪ್ರಕಾರ ನಡೆದುಕೊಳ್ಳಲಾಗುವುದು. ಪರಿಹಾರದ ಬಗ್ಗೆಯೂ ಕಾನೂನು ಪ್ರಕಾರವೇ ಪ್ರಕ್ರಿಯೆ ನಡೆಯಲಿದೆ ಎಂದು ತಿಳಿಸಿದ್ದಾರೆ.

ಇತಿಹಾಸ ತಜ್ಞರು ಪರಿಶೀಲನೆ ಮಾಡಿದ ಬಳಿಕ, ಸ್ಥಳದಲ್ಲಿ ಯಾವುದೇ ವಸ್ತು ಸಿಗುವುದಿಲ್ಲ ಎಂಬುದು ಗೊತ್ತಾದ ನಂತರ ಅವರು ಮನೆ ಕಟ್ಟಲು ಅವಕಾಶ ನೀಡಲಾಗುತ್ತದೆ. ಎಂಟು ದಿನಗಳ ಒಳಗೆ ಅವಕಾಶ ಕೊಡುತ್ತೇವೆ. ಸರ್ಕಾರದ ಸುಪರ್ದಿಗೆ ತೆಗೆದುಕೊಳ್ಳುವ ಬಗ್ಗೆ ಅಭಿಪ್ರಾಯ ಬಂದ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular