HomeKarnatakaBIG NEWS: ಮಹಿಳಾ PSI ಕ್ಯಾನ್ಸರ್ ಗೆ ಬಲಿ

BIG NEWS: ಮಹಿಳಾ PSI ಕ್ಯಾನ್ಸರ್ ಗೆ ಬಲಿ

ಕೋಲಾರ: ಕ್ಯಾನ್ಸರ್ ನಿಂದ ಬಳಲುತ್ತಿದ್ದ ಮಹಿಳಾ ಪಿಎಸ್ಐ ಓರ್ವರು ಸಾವನ್ನಪ್ಪಿರುವ ಘಟನೆ ಕೋಲಾರ ಜಿಲ್ಲೆಯ ಕೆಜಿಎಫ್ ನಲ್ಲಿ ನಡೆದಿದೆ.

ಕೆಜಿಎಫ್ ನಗರದ ರಾಬರ್ಟ್ ಸನ್ ಪೇಟೆ ಪೊಲೀಸ್ ಠಾಣೆ ಪಿಎಸ್ಐ ಗಾಯತ್ರಿ (51) ಮೃತರು. ಕಳೆದ 30 ವರ್ಷಗಳಿಂದ ಗಾಯತ್ರಿ ಕೆಜಿಎಫ್ ವಿಭಾಗದ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

ಹಲವು ವರ್ಷಗಳಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಗಾಯತ್ರಿ ಕೊನೆಯುಸಿರೆಳೆದಿದ್ದಾರೆ. ಪಿಎಸ್ಐ ಗಾಯತ್ರಿ ಸಾವಿಗೆ ಕೆಜಿ ಎಫ್ ಎಸ್ ಪಿ ಶಾಂತರಾಜು, ಡಿವೈ ಎಸ್ ಪಿ ಪಾಂಡುರಂಗ ಸೇರಿದಂತೆ ಪೊಲೀಸ್ ಸಿಬ್ಬಂದಿ ಸಂತಾಪ ಸೂಚಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular