HomeIndiaಮಹಿಳಾ ವೈದ್ಯೆ ಮೇಲೆ ರೋಗಿಯಿಂದ ಹಲ್ಲೆ

ಮಹಿಳಾ ವೈದ್ಯೆ ಮೇಲೆ ರೋಗಿಯಿಂದ ಹಲ್ಲೆ

ಮುಂಬೈ: ಮಹಿಳಾ ವೈದ್ಯೆ ಮೇಲೆ ರೋಗಿ ಹಾಗೂ ಅತನ ಸಂಬಂಧಿಕರು ಹಲ್ಲೆ ನಡೆಸಿರುವ ಘಟನೆ ಮುಂಬೈನ ಸಿಯಾನ್ ಆಸ್ಪತ್ರೆಯಲ್ಲಿ ನಡೆದಿದೆ.

ಮುಂಜಾನೆ 3:30ರ ಸುಮಾರಿಗೆ ವೈದ್ಯರು ವಾರ್ಡ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಕುಡಿದ ಮತ್ತಿನಲ್ಲಿದ್ದ ರೋಗಿಯೊಬ್ಬ ವೈದ್ಯೆ ಮೇಲೆ ಹಲ್ಲೆ ನಡೆಸಿದ್ದಾನೆ. ಆತನ ಜೊತೆಗಿದ್ದ ಆತ ಕುಟುಂಬದವರು ಹಾಗೂ ಐದಾರು ಜನರ ಗುಂಪು ಕೂಡ ವೈದ್ಯೆ ಮೇಲೆ ದಾಳಿ ನಡೆಸಿದ್ದಾರೆ.

ಆಸ್ಪತ್ರೆಯಲ್ಲಿ ಇಂತಹ ಘಟನೆ ನಡೆದಿರುವುದು ಆತಂಕಕಾರಿ ಹಾಗೂ ಬೇಸರ ತಂದಿದೆ ಎಂದು ಡಾ.ಅಕ್ಷಯ್ ಮೋರ್ ತಿಳಿಸಿದ್ದಾರೆ. ಘಟನೆ ಬಳಿಕ ರೋಗಿ ಹಾಗೂ ಆತನ ಕುಟುಂಬದವರು ಆಸ್ಪತ್ರೆಯಿಂದ ಪರಾರಿಯಾಗಿದ್ದಾರೆ. ಸಿಯಾನ್ ಪೊಲೀಸ್ ಠಾಣೆಯಲ್ಲಿ ವೈದ್ಯರು ದೂರು ದಾಖಲಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular