HomeKarnatakaBIG NEWS: ಶಾಸಕರ ವಿರುದ್ಧ ಸ್ಟೇಟಸ್; ಮಹಿಳಾ ಕಾನ್ಸ್ ಟೇಬಲ್ ಸಸ್ಪೆಂಡ್

BIG NEWS: ಶಾಸಕರ ವಿರುದ್ಧ ಸ್ಟೇಟಸ್; ಮಹಿಳಾ ಕಾನ್ಸ್ ಟೇಬಲ್ ಸಸ್ಪೆಂಡ್

ಚಿಕ್ಕಮಗಳೂರು: ಮಹಿಳಾ ಪೊಲೀಸ್ ಪೇದೆಯೊಬ್ಬರು ಕಾಂಗ್ರೆಸ್ ಶಾಸಕರ ವಿರುದ್ಧ ದೌರ್ಜನ್ಯ ಆರೋಪ ಮಾಡಿ ವಾಟ್ಸಾಪ್ ನಲ್ಲಿ ಸ್ಟೇಟಸ್ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮಹಿಳಾ ಕಾನ್ಸ್ ಟೇಬಲ್ ಅವರನ್ನೇ ಸಸ್ಪೆಂಡ್ ಮಾಡಿರುವ ಘಟನೆ ನಡೆದಿದೆ.

ಲತಾ ಅಮಾನತುಗೊಂಡಿರುವ ಮಹಿಳಾ ಕಾನ್ಸ್ ಟೇಬಲ್. ಕಡೂರು ಕಾಂಗ್ರೆಸ್ ಶಾಸಕ ಕೆ.ಎಸ್.ಆನಂದ್ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ ಶಾಸಕರ ವಿರುದ್ಧ ಲತಾ, ವಾಟ್ಸಾಪ್ ನಲ್ಲಿ ಸ್ಟೇಟಸ್ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನನಗೆ ಏನಾದರೂ ತೊಂದರೆ ಆದರೆ ಕಡೂರು ಶಾಸಕರು ಕಾರಣ. ಕಡೂರು ಶಾಸಕರಿಗೆ ಧಿಕ್ಕಾರ ಎಂದು ಸ್ಟೇಟಸ್ ಹಾಕಿದ್ದರು. ಈ ನಡುವೆ ಶಾಸಕರ ವಿರುದ್ಧ ಸ್ಟೇಟಸ್ ಹಾಕಿದ್ದ ಮಹಿಳಾ ಕಾನ್ಸ್ ಟೇಬಲ್ ಲತಾರನ್ನು ಸಸ್ಪೆಂಡ್ ಮಾಡಿ ಚಿಕ್ಕಮಗಳೂರು ಎಸ್.ಪಿ ಉಮಾ ಪ್ರಶಾಂತ್ ಆದೇಶ ಹೊರಡಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular