HomeKarnatakaಅಪರೂಪಕ್ಕೆ ಲಾಟರಿ ಖರೀದಿಸಿದ್ದ ಕಾರ್ಮಿಕನಿಗೆ ಒಲಿಯಿತು ಅದೃಷ್ಟ !

ಅಪರೂಪಕ್ಕೆ ಲಾಟರಿ ಖರೀದಿಸಿದ್ದ ಕಾರ್ಮಿಕನಿಗೆ ಒಲಿಯಿತು ಅದೃಷ್ಟ !

ದೈವಸ್ಥಾನಕ್ಕೆ ಭೇಟಿ ನೀಡಿದ್ದ ಕಾರ್ಮಿಕರೊಬ್ಬರು ಲಾಟರಿ ಟಿಕೆಟ್ ಖರೀದಿಸಿದ್ದು, ಈ ಟಿಕೆಟ್ ಗೆ ಈಗ 50 ಲಕ್ಷ ರೂಪಾಯಿ ಬಹುಮಾನ ಬಂದಿದೆ. ದಕ್ಷಿಣ ಕನ್ನಡ ಜಿಲ್ಲೆ ಉಪ್ಪಿನಂಗಡಿ ಸಮೀಪದ ಇಳಂತಿಲ ಗ್ರಾಮದ ಎನ್ಮಾಡಿಯ ಚಂದ್ರಯ್ಯ ಕುಂಬಾರ ಈ ಅದೃಷ್ಟಶಾಲಿಯಾಗಿದ್ದಾರೆ.

ಈ ಮೊದಲು ಕಾರ್ಮಿಕನಾಗಿ ಈಗ ಮೇಸ್ತ್ರಿಯಾಗಿ ಕಾರ್ಯನಿರ್ವಹಿಸುತ್ತಿರುವ ಚಂದ್ರಯ್ಯ ಅವರು ಕಾನತ್ತೂರು ದೈವಸ್ಥಾನಕ್ಕೆ ಹೋದ ಸಂದರ್ಭದಲ್ಲಿ ಅಲ್ಲಿನ ಬೊಲ್ಬು ಲಾಟರಿ ಏಜೆನ್ಸಿಯಿಂದ ಕೇರಳ ರಾಜ್ಯದ ಓಣಂ ಬಂಪರ್ ಲಾಟರಿ ಟಿಕೆಟ್ ಅನ್ನು 500 ರೂಪಾಯಿ ಪಾವತಿಸಿ ಖರೀದಿಸಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದರ ಬಂಪರ್ ಬಹುಮಾನ 25 ಕೋಟಿ ರೂಪಾಯಿಗಳಾಗಿದ್ದು, ಚಂದ್ರಯ್ಯ ಅವರಿಗೆ ಮೂರನೇ ಬಹುಮಾನ 50 ಲಕ್ಷ ರೂಪಾಯಿ ಬಂದಿದೆ. ಚಂದ್ರಯ್ಯ ಅವರಿಗೆ ಲಾಟರಿ ಟಿಕೆಟ್ ಖರೀದಿಸುವ ಚಟವಿಲ್ಲದಿದ್ದರೂ ಸಹ ಅಪರೂಪಕ್ಕೆ ಖರೀದಿಸಿದ ಈ ಲಾಟರಿ ಟಿಕೆಟ್ ಗೆ ಅದೃಷ್ಟ ಒಲಿದು ಬಂದಿದೆ. ಈ ಹಣದಲ್ಲಿ ಸಾಲ ತೀರಿಸಿ, ಮಕ್ಕಳ ಮದುವೆ ಹಾಗೂ ಶಿಕ್ಷಣಕ್ಕೆ ವೆಚ್ಚ ಮಾಡುವುದಾಗಿ ಚಂದ್ರಯ್ಯ ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular