HomeKarnatakaಶಿವಮೊಗ್ಗ : ಕುವೆಂಪು ವಿಶ್ವವಿದ್ಯಾಲಯದಲ್ಲಿ ಪ್ರೊಜೆಕ್ಟ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ

ಶಿವಮೊಗ್ಗ : ಕುವೆಂಪು ವಿಶ್ವವಿದ್ಯಾಲಯದಲ್ಲಿ ಪ್ರೊಜೆಕ್ಟ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ

ಶಿವಮೊಗ್ಗ : ಕುವೆಂಪು ವಿಶ್ವವಿದ್ಯಾಲಯದ ಸ್ನಾತಕೋತ್ತರ ಸೂಕ್ಷ್ಮಾಣು ಜೀವಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದಲ್ಲಿನ ‘ಡೆವಲಪ್ಮೆಂಟ್ ಆಫ್ ಸ್ಟ್ರಿಪ್ ಬೇಸಡ್ ರ್ಯಾಪಿಡ್ ಅಂಡ್ ಸ್ಪೆಸಿಫಿಕ್ ಡೆಯಾಗ್ನೊಸ್ಟಿಕ್ ಕಿಟ್ ಫಾರ್ ಡಿಟೆಕ್ಷನ್ ಆಫ್ ಕ್ಯಾಸನೂರ್ ಫಾರೆಸ್ಟ್ ಡಿಸೀಸ್’ ಸಂಶೋಧನಾ ಯೋಜನೆಗಾಗಿ ‘ಪ್ರೊಜೆಕ್ಟ್ ಅಸಿಸ್ಟೆಂಟ್’ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಎಂ.ಎಸ್ಸಿ. ಸೂಕ್ಷ್ಮಾಣು ಜೀವಶಾಸ್ತ್ರ, ಜೈವಿಕ ತಂತ್ರಜ್ಞಾನ, ಜೀವ ರಸಾಯನಶಾಸ್ತ್ರ ಅಥವಾ ಜೀವವಿಜ್ಞಾನದ ಇತರ ವಿಷಯಗಳಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದವರು ಅರ್ಜಿ ಸಲ್ಲಿಸಲು ಅರ್ಹರಾಗಿದ್ದು, ಮಾಲಿಕ್ಯುಲರ್ ಬಯಾಲಜಿ ಟೆಕ್ನಿಕ್ಸ್ ನಲ್ಲಿ ಅನುಭವ ಹೊಂದಿದವರಿಗೆ ಆದ್ಯತೆ ನೀಡಲಾಗುವುದು. ಆಯ್ಕೆಯಾದ ಅಭ್ಯರ್ಥಿಗೆ ವಿಜಿಎಸ್ ಟಿ-ಜಿ ಆರ್ ಇ ಮಾರ್ಗದರ್ಶಿಯಂತೆ ಪ್ರತಿ ತಿಂಗಳು ರೂ. 25,000/- ಫೆಲೋಶಿಪ್ ನೀಡಲಾಗುತ್ತದೆ.

ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ, ಸ್ವ-ವಿವರಗಳು ಮತ್ತು ಅಗತ್ಯ ಶೈಕ್ಷಣಿಕ ದಾಖಲೆಗಳೊಂದಿಗೆ 15/09/2026 ರೊಳಗಾಗಿ ಪ್ರೊ. ಎನ್. ಬಿ. ತಿಪ್ಪೇಸ್ವಾಮಿ, ಪ್ರಧಾನ ಸಂಶೋಧಕರು, ಸ್ನಾತಕೋತ್ತರ ಸೂಕ್ಷ್ಮಾಣು ಜೀವಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗ, ಕುವೆಂಪು ವಿಶ್ವವಿದ್ಯಾಲಯ, ಶಂಕರಘಟ್ಟ ಇವರಿಗೆ ಅಥವಾ ಇ-ಮೇಲ್ [email protected] ಮೂಲಕ ತಲುಪಿಸಬೇಕಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೆಚ್ಚಿನ ವಿವರಗಳು ಮತ್ತು ಅರ್ಜಿ ನಮೂನೆಗಾಗಿ ವಿಶ್ವವಿದ್ಯಾಲಯದ ಅಧಿಕೃತ ವೆಬ್‌ಸೈಟ್ http://www.kuvempu.ac.in ಗೆ ಭೇಟಿ ನೀಡಬಹುದು ಎಂದು ಕುವೆಂಪು ವಿವಿಯ ಪ್ರಧಾನ ಸಂಶೋಧಕರಾದ ಪ್ರೊ. ಎನ್.ಬಿ.ತಿಪ್ಪೇಸ್ವಾಮಿ ಪ್ರಕಟಣೆಯಲ್ಲಿ ತಿಳಿದಿದ್ದಾರೆ.

ಭದ್ರಾ ಮೇಲ್ದಂಡೆ ಯೋಜನೆ – ನದಿ ಪಾತ್ರದ ಜನರಿಗೆ ಎಚ್ಚರಿಕೆ

ವಿಶ್ವೇಶ್ವರಯ್ಯ ಜಲ ನಿಗಮವು ಸರ್ಕಾರದ ಆದೇಶದನ್ವಯ ಸೆ.06ರಿಂದ ಭದ್ರಾ ಜಲಾಶಯದಿಂದ ಭದ್ರಾ ಮೇಲ್ದಂಡೆ ಯೋಜನೆ ಮುಖ್ಯ ಕಾಲುವೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಅಜ್ಜಂಪುರ ಮುಖಾಂತರ ಚಿತ್ರದುರ್ಗ ಶಾಖಾ ಕಾಲುವೆ ಚೈ0.00 ಕಿ.ಮೀ. ನಿಂದ ಚೈ.114.142 ಕಿಮೀ ವರೆಗೆ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ : ಕಡೂರು ತಾಲೂಕು : ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ : ಹೊಳಲ್ಕೆರೆ : ಹಿರಿಯೂರು : ಚಿತ್ರದುರ್ಗ : ಚಳ್ಳಕೆರೆ ತಾಲೂಕುಗಳ ಮೂಲಕ ಗೋನೂರು ಕೆರೆಯವರೆಗೆ ಭದ್ರಾ ಮೇಲ್ದಂಡೆ ಯೋಜನೆಯಡಿ ಚಿತ್ರದುರ್ಗ ಶಾಖಾ ಕಾಲುವೆಯಲ್ಲಿ ಪ್ರಾಯೋಗಿಕವಾಗಿ ನೀರನ್ನು ಹರಿಸಲು ಉದ್ದೇಶಿಸಲಾಗಿದೆ.

ಆದ್ದರಿಂದ ಸಾರ್ವಜನಿಕರ ಸುರಕ್ಷತೆ ಹಾಗೂ ಮುಂಜಾಗ್ರತಾ ಕ್ರಮವಾಗಿ ಕಾಲುವೆ ಹಾಗೂ ಹಳ್ಳದ ಪಾತ್ರಗಳಲ್ಲಿ ಸಾರ್ವಜನಿಕರು ತಿರುಗಾಡುವುದು. ಜನ ಜಾನುವಾರುಗಳನ್ನು ಕಾಲುವೆ ಒಳಗಡೆ ಬಿಡುವುದು ಕಾಲುವೆ / ಹಳ್ಳಗಳಲ್ಲಿ ಈಜಾಡುವುದು ಹಾಗೂ ಇನ್ನಿತರ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ. ಸದರಿ ಸೂಚನೆಗಳನ್ನು ಉಲ್ಲಂಘಿಸುವುದು. ನಿಗಮದ ಆಸ್ತಿಯಾದ ನೀರಾವರಿ ಕಾಲುವೆ. ಕಟ್ಟಡಗಳನ್ನು ಜಖಂಗೊಳಿಸುವುದು, ಅನಧಿಕೃತವಾಗಿ ಪಂಪ್ಸೆಟ್ ಗಳನ್ನು ಅಳವಡಿಸಿ ನೀರನ್ನು ಎತ್ತುವುದು : ನೀರಾವರಿ ಕಾಯ್ದೆಯ ಪ್ರಕಾರ ಕಾನೂನು ಬಾಹಿರವಾಗಿದ್ದು, ಇದನ್ನು ಉಲ್ಲಂಘಿಸಿದವರ ವಿರುದ್ಧ ನೀರಾವರಿ ಕಾಯ್ದೆ ಮತ್ತು ಕಾನೂನು ರೀತ್ಯಾ ಕ್ರಮ ಜರುಗಿಸಲಾಗುವುದು ಎಂದು ಬಿ.ಆರ್.ಪ್ರಾಜೆಕ್ಟ್ವಿಶ್ವೇಶ್ವರಯ್ಯ ಜಲನಿಗಮ, ಭದ್ರಾ ಮೇಲ್ದಂಡೆ ಯೋಜನಾ ವೃತ್ತದ ಸೂಪರಿಂಟೆಂಡಿಂಗ್ಇಂಜಿನಿಯರ್ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನೌಕಾಪಡೆ ಮಾಜಿ ಸೈನಿಕರ ಸಹಾಯತಾ ಶಿಬಿರ ಆಯೋಜನೆ

ಶಿವಮೊಗ್ಗ : “ಐ.ಎನ್.ಎಸ್ ಕದಂಬ”ದ ನೌಕಾಪಡೆಯ ಪ್ರತಿನಿಧಿಗಳಿಂದ ನೌಕಾಪಡೆಯ ಮಾಜಿ ಸೈನಿಕರು ಮತ್ತು ಅವಲಂಬಿತರು ಹಾಗೂ ವೀರನಾರಿಯರು ಇವರುಗಳಿಗಾಗಿ “ಸಹಾಯತಾ ಶಿಬಿರ” ವನ್ನು ಉಪ ನಿರ್ದೇಶಕರ ಕಛೇರಿ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಶಿವಮೊಗ್ಗ ಇಲ್ಲಿ ದಿನಾಂಕ 12 ಸೆಪ್ಟೆಂಬರ್ 2026ರ ಬೆಳಗ್ಗೆ 10.00 ಘಂಟೆಯಿಂದ ಆಯೋಜಿಸಲಾಗಿದೆ.

ನೌಕಾಪಡೆಯ ಮಾಜಿ ಸೈನಿಕರು ಮತ್ತು ಅವಲಂಬಿತರು ಹಾಗೂ ವೀರ ನಾರಿಯರು, ಸ್ಪರ್ಶ್, ಪಿಂಚಣಿ, ಸೇವಾ ದಾಖಲೆಗಳಲ್ಲಿ ನ್ಯೂನತೆ ಹಾಗೂ ಇನ್ನಿತರೆ ಯಾವುದೇ ಸಮಸ್ಯೆಗಳ ಸೂಕ್ತ ಸಲಹೆ ಮತ್ತು ಪರಿಹಾರಕ್ಕಾಗಿ ಸಂಬಂಧಿತ ಎಲ್ಲಾ ಪೂರಕ ದಾಖಲೆಗಳೊಂದಿಗೆ ದಿನಾಂಕ 05 ಸೆಪ್ಟೆಂಬರ್ 2026 ರೊಳಗಾಗಿ ದೂರವಾಣಿ ಸಂಖ್ಯೆ 08182-220925 ಗೆ ಕರೆಮಾಡಿ ನೋಂದಾಯಿಸಿಕೊಳ್ಳುವ ಮೂಲಕ ಭಾಗವಹಿಸಲು ಕೋರಿದೆ ಹಾಗೂ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08182-220925 ಯನ್ನು ಕಛೇರಿ ಸಮಯದಲ್ಲಿ ಸಂಪರ್ಕಿಸಬಹುದಾಗಿದೆಯೆಂದು ಎಂದು ಡಾ. ಸಿ.ಎ.ಹಿರೇಮಠ್, ಉಪ ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಶಿವಮೊಗ್ಗ ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular