HomeKarnatakaBREAKING NEWS: ಕುಂಭಮೇಳದಲ್ಲಿ ಕಾಲ್ತುಳಿತ ದುರಂತ: ತಾಯ್ನಾಡಿಗೆ ಆಗಮಿಸಿದ ಇಬ್ಬರ ಮೃತದೇಹ

BREAKING NEWS: ಕುಂಭಮೇಳದಲ್ಲಿ ಕಾಲ್ತುಳಿತ ದುರಂತ: ತಾಯ್ನಾಡಿಗೆ ಆಗಮಿಸಿದ ಇಬ್ಬರ ಮೃತದೇಹ

ಬೆಳಗಾವಿ: ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ ಬೆಳಗಾವಿ ಜಿಲ್ಲೆಯ ನಾಲ್ವರು ಸಾವನ್ನಪ್ಪಿದ್ದು, ಮೃತದೇಹ ತಾಯ್ನಾಡಿಗೆ ಆಗಮಿಸಿದೆ.

ಪ್ರಯಾಗ್ ರಾಜ್ ನಿಂದ ದೆಹಲಿಗೆ ರಸ್ತೆ ಮಾರ್ಗವಾಗಿ ನಾಲ್ವರ ಮೃತದೇಹವನ್ನು ತರಲಾಗಿತ್ತು. ಬಳಿಕ ದೆಹಲಿಯಿಂದ ಮಧ್ಯಾಹ್ನ 3:30ರ ವಿಮಾನದಲ್ಲಿ ಬೆಳಗಾವಿಗೆ ರವಾನಿಸಲಾಗಿದೆ. ಇಬ್ಬರ ಮೃತದೇಹ ಬೆಳಗಾವಿಗೆ ಆಗಮಿಸಿದೆ. ಬೆಳಗಾವಿಯ ಅರುಣ್ ಹಾಗೂ ಮಹಾದೇವಿ ಎಂಬುವವರ ಮೃತದೇಹ ಆಗಮಿಸಿದೆ. ಇನ್ನಿಬ್ಬರ ಮೃತದೇಹ ದೆಹಲಿಯಿಂದ ಬೆಳಗವಿಗೆ ರಾತ್ರಿ ಬರುವ ವಿಮಾನದಲ್ಲಿ ಬರಲಿದೆ ಎಂದು ತಿಳಿದುಬಂದಿದೆ.

ಮೌನಿ ಅಮವಾಸ್ಯೆಯ ದಿನ ಮಹಾಕುಂಭ ಮೇಳದಲ್ಲಿ ಭೀಕರ ಕಾಲ್ತುಳಿತ ಸಂಭವಿಸಿದ್ದು, ಕರ್ನಾಟಕದ ಬೆಳಗಾವಿಯ ನಾಲ್ವರು ಸಾವನ್ನಪ್ಪಿದ್ದರು. ತಾಯಿ ಹಾಗೂ ಮಗಳಾದ ಜ್ಯೋತಿ, ಮೇಘಾ ಹಾಗೂ ಶೆಟ್ಟಿಗಲ್ಲಿ ನಿವಾಸಿ ಅರುಣ್, ಶಿವಾಜಿನಗರ ನಿವಾಸಿ ಮಹಾದೇವಿ ಎಂಬ ನಾಲ್ವರು ಕಾಲ್ತುಳಿತದಲ್ಲಿ ಮೃತಪಟ್ಟಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular