HomeKarnatakaಸಿದ್ದರಾಮಯ್ಯ ವಿರುದ್ಧ ಡಿ.ಕೆ.ಶಿವಕುಮಾರ್ ಸ್ಟಿಂಗ್ ಆಪರೇಷನ್ ಮಾಡಿದ್ದರು; ಈಗ ಹಳೇ ಕಸುಬನ್ನೇ ಉಪಯೋಗ ಮಾಡಿಕೊಂಡಿದ್ದಾರೆ: ಸಿಎಂ...

ಸಿದ್ದರಾಮಯ್ಯ ವಿರುದ್ಧ ಡಿ.ಕೆ.ಶಿವಕುಮಾರ್ ಸ್ಟಿಂಗ್ ಆಪರೇಷನ್ ಮಾಡಿದ್ದರು; ಈಗ ಹಳೇ ಕಸುಬನ್ನೇ ಉಪಯೋಗ ಮಾಡಿಕೊಂಡಿದ್ದಾರೆ: ಸಿಎಂ ವಿರುದ್ಧ ಕುಮಾರಸ್ವಾಮಿ ಗಂಭೀರ ಆರೋಪ

ಬೆಂಗಳೂರು: ಸರ್ಕಾರದ ಸಚಿವರ ಮೇಲೆ ಬಿಜೆಪಿ-ಜೆಡಿಎಸ್ ನವರು ಖಾಸಗಿ ಏಜೆನ್ಸಿ ಮೂಲಕ ಸ್ಟಿಂಗ್ ಆಪರೇಷನ್ ಮಾಡಿಸುತ್ತಿದ್ದಾರೆ. ಎಲ್ಲಾ ಸಚಿವರು ಹುಷಾರಾಗಿರಿ ಎಂದು ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೀಡಿರುವ ಎಚ್ಚರಿಕೆಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಕುಮಾರಸ್ವಾಮಿ, ಮುಖ್ಯಮಂತ್ರಿಗಳು ಸ್ಟಿಂಗ್ ಆಪರೇಷನ್ ಬಗ್ಗೆ ಸಚಿವರಿಗೆ ಎಚ್ಚರಿಕೆ ಕೊಟ್ಟಿದ್ದಾರೆ. ಯಾಕೆ ಅವರ ಮಂತ್ರಿಗಳ ಮೇಲೆ ಅವರಿಗೆ ನಂಬಿಕೆ ಇಲ್ವಾ? ಈ ಮಟ್ಟಕ್ಕೆ ರಾಜ್ಯ ಆಳಬೇಕಾ? ಎಂದು ವಾಗ್ದಾಳಿ ನಡೆಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದನ್ನು ಕ್ಯಾಬಿನೇಟ್ ಮೀಟಿಂಗ್ ನಲ್ಲಿ ಹೇಳಿದ್ದಾರೆ ಎಂದರೆ ಏನರ್ಥ? ಬಿಜೆಪಿ ಹಾಗೂ ಜೆಡಿಎಸ್ ನ ಯಾರು ಸ್ಟಿಂಗ್ ಆಪರೇಷನ್ ಮಾಡ್ತಿದ್ದಾರೆ? ಹಾಗೊಂದು ವೇಳೆ ಅವರ ಬಳಿ ಮಾಹಿತಿ ಇದ್ದರೆ ಇನ್ನು ಯಾಕೆ ದೂರು ನೀಡಿ ಕ್ರಮ ಕೈಗೊಂಡಿಲ್ಲ? ಎಂಫ಼್ದು ಪ್ರಶ್ನಿಸಿದ್ದಾರೆ.

ಸುಮ್ಮನೇ ಡಿ.ಕೆ.ಶಿವಕುಮಾರ್ ಅವರು ಸ್ಟಿಂಗ್ ಆಪರೇಷನ್ ಎಂದು ಸಚಿವರನ್ನು ತಮ್ಮ ಕಂಟ್ರೋಲ್ ನಲ್ಲಿಡಲು ಹೇಳಿಕೆ ನೀಡುತ್ತಿದ್ದರೆ. ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸುವ ವಿಷಯ ಯಾವುದು? ನನ್ನ ಅವಧಿಯಲ್ಲಿ ಅಭಿವೃದ್ಧಿ ವಿಚಾರ ಬಿಟ್ಟು ಬೇರೆ ಯಾವ ವಿಚಾರ ಬರುತ್ತಿರಲಿಲ್ಲ. ಇವರು ಅಭಿವೃದ್ಧಿ ವಿಚಾರವನ್ನು ಬಿಟ್ಟು ಬೇರೆ ಎಲ್ಲವನ್ನೂ ಚರ್ಚಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಡಿ.ಕೆ.ಶಿವಕುಮಾರ್ ಅವರು ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಆಪರೇಷನ್ ನಡೆಸುವ ಮೂಲಕವೇ ಮುಖ್ಯಮಂತ್ರಿಯಾದರು ಎಂದು ಕೆಲ ಕಾಂಗ್ರೆಸ್​​ ನಾಯಕರೇ ಮಾತನಾಡುತ್ತಿದ್ದಾರೆ. ಈಗ ಸಚಿವರನ್ನು ನಿಯಂತ್ರಿಸಲು ಡಿಕೆಶಿ ಅದೇ ತಂತ್ರ ಬಳಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಸಿದ್ದರಾಮಯ್ಯ ಅವರು ಎರಡನೇ ಬಾರಿ ಸಿಎಂ ಆದ್ಮೇಲೆ ಅಧಿಕಾರ ಹಂಚಿಕೆ ಮಾಡಿಕೊಂಡದ್ದರು. ಅದೇನೋ ಎರಡೂವರೆ ವರ್ಷ ಅಂತ ಮಾಡಿಕೊಂಡಿದ್ದರು. ಅದನ್ನು ಕಾರ್ಯರೂಪಕ್ಕೆ ತರಲು ಹಳೇ ಚಾಳಿ ಬಳಸಿರಬೇಕು. ಸಿದ್ದರಾಮಯ್ಯ ಅವರ ವಿರುದ್ಧ ಸ್ಟಿಂಗ್ ಆಪರೇಷನ್ ಮಾಡಿ ಡಿ.ಕೆ.ಶಿವಕುಮಾರ್ ಸಿಎಂ ಪಟ್ಟಕ್ಕೇರಿದರು. ಇದನ್ನು ನಾನು ಹೇಳುತ್ತಿಲ್ಲ, ಕಾಂಗ್ರೆಸ್ ನ ಕೆಲ ನ್ಮಾಯಕರೇ ಮಾತನಾಡಿಕೊಳ್ಳುತ್ತಿದ್ದಾರೆ. ಈಗ ಅದೇ ಹಳೇ ಕಸುಬನ್ನೇ ಉಪಯೋಗಿಸುವ ತಂತ್ರ ಮಾಡಿರಬೇಕು ಎಂದು ವಾಗ್ದಾಳಿ ನಡೆಸಿದರು.

ಸ್ಟಿಂಗ್ ಆಪರಮೇಷ ಮೂಲಕ ಟ್ರ್ಯಾಪ್ ಮಾಡಲು ಯತ್ನ ನಡೆಯುತ್ತಿದೆ ಹುಷಾರಾಗಿರಿ! ಸಚಿವರಿಗೆ ಸಿಎಂ ಡಿ.ಕೆ.ಶಿವಕುಮಾರ್ ಎಚ್ಚರಿಕೆ

ಬೆಂಗಳೂರು: ರಾಜ್ಯ ಸರ್ಕಾರದಲ್ಲಿ ಮತ್ತೆ ರಹಸ್ಯ ಕಾರ್ಯಾಚಾರಣೆ (ಸ್ಟಿಂಗ್ ಆಪರೇಷನ್) ಸದ್ದು ಮಾಡುತ್ತಿದೆ. ಖಾಸಗಿ ಏಜೆನ್ಸಿಗಳ ಮೂಲಕ ರಾಜ್ಯ ಸರ್ಕಾರದ ಸಚಿವರ ಮೇಲೆ ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಸ್ಟಿಂಗ್ ಆಪರೇಷನ್ ನಡೆಸುತ್ತಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಸಿಎಂ ಡಿ.ಕೆ.ಶಿವಕುಮಾರ್ ಸಚಿವರ ಮೇಲೆ ಶ್ತಿಂಗ್ ಆಪರೇಷನ್ ನಡೆಯುತ್ತಿದೆ ಎಂಬ ಸ್ಫೋಟಕ ,ಮಾಹಿತಿ ನೀಡಿದ್ದಾರೆ. ಬಿಜೆಪಿ-ಜೆಡಿಎಸ್ ನಾಯಕರು ನಿಮ್ಮನ್ನೆಲ್ಲ ಟ್ರ್ಯಾಪ್ ಮಾಡಲು ಯತ್ನಿಸುತ್ತಿದ್ದಾರೆ. ಖಾಸಗಿ ಏಜೆನ್ಸಿ ಮೂಲಕ ಸ್ಟಿಂಗ್ ಆಪರೇಷನ್ ಮಾಡುತ್ತಿದ್ದಾರೆ. ಸಚಿವರೆಲ್ಲರೂ ಎಚ್ಚರದಿಂದ ಇರಿ ಎಂದು ವಾರ್ನಿಂಗ್ ನೀಡಿದ್ದಾರೆ.

ಗುಪ್ತಚರ ಇಲಾಖೆ ವರದಿ ಆಧರಿಸಿ, ಯಾರ್ಯಾರ ಮೇಲೆ ಕಣ್ಣಿಡಲಾಗಿದೆ ಎಂಬ ಪಟ್ಟಿ ನೀಡಿ ಸಚಿವರಿಗೆ ಹೈ ಅಲರ್ಟ್ ಆಗಿರುವಂತೆ ಸಿಎಂ ಸೂಚಿಸಿದರು. ಯಾರ್ಯಾರು ಏನು ಮಾಡುತ್ತಿದ್ದಾರೆ. ಏನು ಕೆಲಸದಲ್ಲಿದ್ದಾರೆ ಎಲ್ಲವನ್ನೂ ಏಜೆನ್ಸಿ ಮೂಲಕ ಗಮನಿಸುತ್ತಿದ್ದಾರೆ. ನಿಮ್ಮೆಲರ ಮೇಲೆ ನಿಗಾ ಇಡಲಾಗಿದೆ ಎಂದರು.

ನೀವು ಎಲ್ಲಿ ಹೋಗ್ತೀರಿ ಏನು ಮಾಡ್ತೀರಿ ಎಲ್ಲವನ್ನೂ ಫಾಲೋ ಮಾಡ್ತಿದ್ದಾರೆ. ಐವರು ಸಚಿವರ ಹೆಸರು ಹೇಳಿ ಈ ಬಗ್ಗೆ ಸಿಎಂ ಎಚ್ಚರಿಕೆ ನೀಡಿದ್ದಾರೆ. ಸಿಎಂ ಎಚ್ಚರಿಕೆ ಬೆನ್ನಲ್ಲೇ ಸಚಿವರುಗಳು ಥಂಡಾ ಹೊಡೆದಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular