HomeKarnatakaರಾಜ್ಯ ಕಾಂಗ್ರೆಸ್ ಸರ್ಕಾರ ದಿವಾಳಿಯಾಗಿದ್ದರೆ ನನ್ನ ಆಸ್ತಿ ಬೇಕಾದರೂ ಕೊಡುತ್ತೇನೆ; ಜನರು ಉಳಿಯಬೇಕು ಎಂದ ಹೆಚ್.ಡಿ.ರೇವಣ್ಣ

ರಾಜ್ಯ ಕಾಂಗ್ರೆಸ್ ಸರ್ಕಾರ ದಿವಾಳಿಯಾಗಿದ್ದರೆ ನನ್ನ ಆಸ್ತಿ ಬೇಕಾದರೂ ಕೊಡುತ್ತೇನೆ; ಜನರು ಉಳಿಯಬೇಕು ಎಂದ ಹೆಚ್.ಡಿ.ರೇವಣ್ಣ

ಹಾಸನ: ಸಾಲಮನ್ನಾಗೆ ಹೆಚ್.ಡಿ.ಕುಮಾರಸ್ವಾಮಿ ಕುಮಾರಸ್ವಾಮಿ, ಅವರ ಅಣ್ಣನ ಆಸ್ತಿ ಶೇರ್​ ಕೊಡಲಿ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ಜೆಡಿಎಸ್ ಶಾಸಕ ಹೆಚ್​​.ಡಿ.ರೇವಣ್ಣ ತಿರುಗೇಟು ನೀಡಿದ್ದಾರೆ.

ನೆಲಮಂಗಲ ಬಳಿ ನನ್ನದು, ಮಗನದ್ದು ಹತ್ತತ್ತು ಎಕರೆ ಆಸ್ತಿ ಇದೆ. ರಾಜ್ಯ ಕಾಂಗ್ರೆಸ್ ಸರ್ಕಾರ ಏನಾದ್ರೂ ದಿವಾಳಿ ಆಗಿದ್ದರೆ ರಾಜ್ಯದ ಹಿತ ದೃಷ್ಟಿಯಿಂದ ನನ್ನ ಆಸ್ತಿ ಬೇಕಾದ್ರೆ ಕೊಡುತ್ತೇನೆ ಜನರು ಉಳಿಯಬೇಕು ಎಂದು ಕೌಂಟರ್ ಕೊಟ್ಟಿದ್ದಾರೆ.

10 ಎಕರೆ ಇಟ್ಟುಕೊಂಡು ಏನ್ಮಾಡೋಣ. ರಾಜ್ಯ ಕಾಂಗ್ರೆಸ್ ಸರ್ಕಾರ ದಿವಾಳಿ ಆಗಿದೆ, ಬರ್ಬಾದ್ ಆಗಿದೆ. ಹೆಚ್.ಡಿ.ರೇವಣ್ಣ ಅವರೇ 10 ಎಕರೆ ಕೊಡಿ ಅಂದರೆ ಕೊಡೋಣ ಎಂದು ರೇವಣ್ಣ ಲೇವಡಿ ಮಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇನ್ನು ಇದೇ ವೇಳೆ ಹೇಮಾವತಿ ಜಲಾಶಯದಿಂದ ನೀರು ಹರಿಯದ ಹಿನ್ನೆಲೆಯಲ್ಲಿ ಸರ್ಕಾರದ ಅನುದಾನಕ್ಕೆ ಕಾಯದೆ ಶಾಸಕ ಹೆಚ್.ಡಿ. ರೇವಣ್ಣ ಅವರು ತಮ್ಮ ಸ್ವಂತ ಖರ್ಚಿನಲ್ಲಿ ಶ್ರೀರಾಮದೇವರ ಕಟ್ಟೆಯ ದಕ್ಷಿಣ ನಾಲೆ ದುರಸ್ತಿ ಕಾರ್ಯಕ್ಕೆ ಮುಂದಾಗಿದ್ದಾರೆ.

ಡ್ಯಾಂನಿಂದ ನೀರು ಬಿಟ್ಟರೂ ಶ್ರೀರಾಮದೇವರ ಕಟ್ಟೆಯ ದಕ್ಷಿಣ ನಾಲೆಗೆ ನೀರು ಹರಿದಿಲ್ಲ. ನೀರು ಬಿಟ್ಟು ವಾರ ಕಳೆದರೂ ನಾಲೆ ಬ್ಲಾಕ್​ ಆಗಿರುವ ಕಾರಣ ಮಲ್ಲಪ್ಪನಹಳ್ಳಿ, ತಿರಮಪುರ, ಹೊನ್ನಿಕೊಪ್ಪಲು, ಗೊಂದಿಮಲ್ಲೇನಹಳ್ಳಿ, ತಟ್ಟೆಕರೆ ಭಾಗದಲ್ಲಿ ಕಾಲುವೆ ದುರಸ್ತಿ ಕಾರ್ಯವನ್ನು ರೇವಣ್ಣ ಮಾಡಿಸುತ್ತಿದ್ದಾರೆ. ಆ ಮೂಲಕ ಸರ್ಕಾರದ ಅನುದಾನಕ್ಕೆ ಕಾಯದೆ ತಮ್ಮದೇ ಹಣದಲ್ಲಿ ಕಾಲುವೆ ದುರಸ್ತಿ ಮಾಡಿಸುವ ಮೂಲಕ ಸರ್ಕಾರದ ನಡೆಗೆ ಟಾಂಗ್ ನೀಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ರೇವಣ್ಣ, ಶ್ರೀರಾಮದೇವರ ಬಳಿಕ ಡ್ಯಾಂ ನಾಲೆಗೆ ನೀರು ಬಿಡದಂತೆ ಸೂಚನೆ ಕೊಟ್ಟಿದಾರಂತೆ. ಎರಡು ವರ್ಷದಿಂದ ಈ ಭಾಗದ ನಾಲೆಗೆ ನೀರು ಹರಿಸಿಲ್ಲ. ಎರಡೂ ನಾಲೆಗೆ ನೀರು ಹರಿಸಿದ್ರೆ ಅರ್ಧ ಟಿಎಂಸಿ ನೀರು ಆಗಬಹುದು. ದನಕರುಗಳ ಕುಡಿಯಲಾದರೂ ನೀರು ಹರಿಸಿ. ಹೇಮಾವತಿ ಜಲಾಶಯ ದಲ್ಲಿ ಗರಿಷ್ಠ 37 ಟಿಎಂಸಿ ನೀರು ಸಂಗ್ರಹ ಮಾಡಬಹುದು. ಕಳೆದ ಎರಡು ತಿಂಗಳಿಂದ ಹದಿನೇಳು ಟಿಎಂಸಿ ನೀರು ಖಾಲಿಯಾಗಿದೆ. ದಿನ ನಿತ್ಯ ನಾಲ್ಕೈದು ಸಾವಿರ ಕ್ಯೂಸೆಕ್ ನೀರು ತಮಿಳುನಾಡಿಗೆ ಹೋಗ್ತಿದೆ ಎಂದು ಕಿಡಿಕಾರಿದರು.

ಪ್ರತಾಪ್ ಸಿಂಹ ಒಬ್ಬ ಅಯೋಗ್ಯ, ಮುಠ್ಠಾಳ; ಬಾಯಿ ತೆವಲಿಗೆ ಮಾತನಾಡಿದ್ದಾನೆ: ಶಾಸಕ ಪ್ರದೀಪ್ ಈಶ್ವರ್ ವಾಗ್ದಾಳಿ

ಬೆಂಗಳೂರು: ಟಿ.ನರಸೀಪುರ ಗಣೇಶೋತ್ಸವ ಮುಗಿದರೂ ಅಲ್ಲಿನ ಇನ್ಸ್ ಪೆಕ್ಟರ್ ನೀಡಿದ್ದ ವಿವಾದಾತ್ಮಕ ಹೇಳಿಕೆ ಹಾಗೂ ಆನಂತರದ ರಾಜಕೀಯ ಗದ್ದಲ-ಗಲಾಟೆಗಳು ಸದ್ಯಕ್ಕೆ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ ನೀಡಿದ್ದ ಹೇಳಿಕೆಗಳಿಗೆ ಇದೀಗ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ವಾಗ್ದಾಳಿ ನಡೆಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರದೀಪ್ ಈಶ್ವರ್, ಮಾಜಿ ಸಂಸದ ಪ್ರತಾಪ್ ಸಿಂಹ ನಾಲಾಯಕ್, ಅಯೋಗ್ಯ, ಮುಠ್ಠಾಳ. ಅವನು ಒಬ್ಬ ಸರ್ಕಲ್ ಇನ್ಸ್‌ಪೆಕ್ಟರ್ ಬಗ್ಗೆ ಏಕವಚನದಲ್ಲಿ ಮಾತನಾಡುತ್ತಾನೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಪಾಪ, ಇಸ್ಲಾಂ ಧರ್ಮದ ಮಸೀದಿ ಮುಂದೆ ನೀನು ಮೆರವಣಿಗೆ ಹೋಗು ರಾಜಾ ಎಂದು ಹೇಳಿ, ಅಲ್ಲೇ ನಿಂತುಕೊಂಡು ಬಾಯಿ ತೆವಲಿಗೆ ಮಾತನಾಡಿದ್ದಾನೆ. ಕರ್ತವ್ಯನಿರತ ಪೊಲೀಸ್ ಅಧಿಕಾರಿಯ ವಿರುದ್ಧ ಈ ರೀತಿಯಾಗಿ ಅಸಭ್ಯವಾಗಿ ಮಾತನಾಡಿರುವುದು ಖಂಡನೀಯ. ಸಾರ್ವಜನಿಕವಾಗಿ ಪ್ರಚೋದನಕಾರಿ ಹಾಗೂ ಜವಾಬ್ದಾರಿರಹಿತ ಹೇಳಿಕೆಗಳನ್ನು ನೀಡುವುದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ ಎಂದು ಗುಡುಗಿದರು.

ದಲಿತ ಸಮುದಾಯ ಹಾಗೂ ನೀಲಿ ಶಾಲಿನ ಬಗ್ಗೆ ಪ್ರತಾಪ್ ಸಿಂಹ ನೀಡಿರುವ ಹೇಳಿಕೆ ಖಂಡನೀಯ. ಈ ದೇಶದ ನಿರ್ಮಾಣದಲ್ಲಿ ದಲಿತ ಸಮುದಾಯದ ಪಾತ್ರ ಮಹತ್ತರವಾದುದು. ದಲಿತ ಸಂಘರ್ಷ ಸಮಿತಿ ಅಥವಾ ಸಮುದಾಯದ ಸಂಕೇತಗಳ ಬಗ್ಗೆ ಮಾತನಾಡುವಾಗ ಸಂಯಮ ಇರಬೇಕು ಎಂದು ಎಚ್ಚರಿಸಿದರು.

ಧಾರ್ಮಿಕ ಮತ್ತು ಸಮುದಾಯ ಸಂಕೇತಗಳನ್ನು ಮುಂದಿಟ್ಟುಕೊಂಡು ವಿವಾದ ಸೃಷ್ಟಿಸುವುದನ್ನು ನಿಲ್ಲಿಸಬೇಕು. ದಲಿತರ ಭಾವನೆಗಳಿಗೆ ಧಕ್ಕೆ ತಂದಿರುವ ಮಾಜಿ ಸಂಸದ ಪ್ರತಾಪ್ ಸಿಂಹ ಸಮುದಾಯದ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular