ಕುಮಟಾ: ಕುಡ್ಲೆ ಬೀಚ್ ಗೆ ಪ್ರವಾಸಕ್ಕೆಂದು ಬಂದಿದ್ದ ವಿದೇಶಿ ಪ್ರಜೆ ಸಮುದ್ರದಲ್ಲಿ ಈಜಲು ಹೋಗಿ ಅಲೆಗಳ ಹೊಡೆತಕ್ಕೆ ಸಿಲುಕಿ ನೀರುಪಾಲಾಗುತ್ತಿದ್ದ ವೇಳೆ ಸ್ಥಳೀಯರು ರಕ್ಷಿಸಿರುವ ಘಟನೆ ನಡೆದಿದೆ.
ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕುಡ್ಲೆ ಬೀಚ್ ನಲ್ಲಿ ಈ ಘಟನೆ ನಡೆದಿದೆ. ಕಜಕಿಸ್ತಾನದ ಐದಾಲಿ (25) ಎಂಬ ವಿದೇಶಿ ಪ್ರಜೆ ಪ್ರವಾಸಕ್ಕೆಂದು ಬಂದಿದ್ದರು. ಈ ವೇಳೆ ಸಮುದ್ರದಲ್ಲಿ ಈಜಲು ಹೋಗಿ ಅಲೆಗಳ ಅಬ್ಬರಕ್ಕೆ ಸಿಲುಕಿ ನೀರುಪಾಲಾಗುತ್ತಿದ್ದರು. ತಕ್ಷಣ ಗಮನಿಸಿದ ಸ್ಥಳೀಯರಾದ ಮಂಜುನಾಥ್ ಹರಿಕಂತ್ರ, ಗಿರೀಶ್ ಗೌಡ, ನಾಗೇಂದ್ರ ಎಂಬುವವರು ರಕ್ಷಿಸಿದ್ದಾರೆ.
ಗೋಕರ್ಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
