HomeLatest NewsBREAKING: ಬೆಂಗಳೂರಿನಲ್ಲಿ ಮತ್ತೊಂದು ಬರ್ಬರ ಕೊಲೆ: ಸೋದರ ಮಾವನ ಜೊತೆ ಸೇರಿ ಪತಿಯನ್ನೇ ಹತ್ಯೆಗೈದ ಪತ್ನಿ

BREAKING: ಬೆಂಗಳೂರಿನಲ್ಲಿ ಮತ್ತೊಂದು ಬರ್ಬರ ಕೊಲೆ: ಸೋದರ ಮಾವನ ಜೊತೆ ಸೇರಿ ಪತಿಯನ್ನೇ ಹತ್ಯೆಗೈದ ಪತ್ನಿ

ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೊಂದು ಹತ್ಯೆ ನಡೆದಿದೆ. ಸೋದರ ಮಾವನ ಜೊತೆ ಸೇರಿ ಪತ್ನಿಯೇ ಪತಿಯನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ನಡೆದಿದೆ.

ಬೆಂಗಳೂರಿನ ಅಂಧ್ರಹಳ್ಳಿಯ ಮಂಜುನಾಥ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. 65 ವರ್ಷದ ವೆಂಕಟೇಶ್ ಕೊಲೆಯಾದ ದುರ್ದೌವಿ. ಪಾರ್ವತಿ ಪತಿಯನ್ನೇ ಕೊಂದ ಮಹಿಳೆ. ಸೋದರ ಮಾವ ರಂಗಸ್ವಾಮಿ ಜೊತೆ ಸೇರಿ ಪತಿಯನ್ನೇ ಹತ್ಯೆಗೈದಿದ್ದಾಳೆ.

ವೆಂಕಟೇಶ್ 10 ವರ್ಷಗಳ ಹಿಂದೆ ಮೊದಲ ಪತ್ನಿಯನ್ನು ಬಿಟ್ತಿದ್ದನಂತೆ. 6 ವರ್ಷಗಳ ಹಿಂದೆ ಪಾರ್ವತಿ ಎಂಬುವವರನ್ನು ಎರಡನೇ ವಿವಾಹವಾಗಿದ್ದ. ಪಾರ್ವತಿ ಮನೆಯನ್ನು ತನ್ನ ಹೆಸರಿಗೆ ಬರೆಯುವಂತೆ ಕೇಳಿದ್ದಳಂತೆ. ಮನೆ ತನ್ನ ಹೆಸರಿಗೆ ಬರಿ ಇಲ್ಲವಾದಲ್ಲಿ 6 ಲಕ್ಷ ರೂಪಾಯಿ ಕೊಡು ಎಂದು ಹೇಳಿದ್ದಳಂತೆ. ಎರಡೂವರೆ ಲಕ್ಷ ಕೊಡುತ್ತೇನೆ ಎಂದು ಪತಿ ವೆಂಕಟೇಶ್ ಹೇಳಿದ್ದನಂತೆ. ಇದಕ್ಕೆ ಪತ್ನಿ ಒಪ್ಪಿಲ್ಲ. ಪತಿಯ ಹುಚ್ಚಾಟಗಳಿಗೆ ಬೇಸತ್ತ ಪತ್ನಿ ಸಹೋದರ ಮಾವನ ಜೊತೆ ಸೇರಿ ಪತಿಯನ್ನು ಬರ್ಬರವಾಗಿ ಕೊಲೆಗೈದಿದ್ದಾಳೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular