HomeTourismKSTDC ಒಂದು ದಿನದ ಪ್ರವಾಸಿ ಪ್ಯಾಕೇಜ್: ಬೆಂಗಳೂರು-ಚಿತ್ರದುರ್ಗ ಮತ್ತು ವಿವರ

KSTDC ಒಂದು ದಿನದ ಪ್ರವಾಸಿ ಪ್ಯಾಕೇಜ್: ಬೆಂಗಳೂರು-ಚಿತ್ರದುರ್ಗ ಮತ್ತು ವಿವರ

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (KSTDC) ಚಿತ್ರದುರ್ಗ ಪ್ರವಾಸ ಹೋಗುವ ಜನರಿಗೆ ಗುಡ್ ನ್ಯೂಸ್ ನೀಡಿದೆ. ಬೆಂಗಳೂರು-ಚಿತ್ರದುರ್ಗ ನಡುವೆ ಪ್ರವಾಸಿ ಪ್ಯಾಕೇಜ್ ಆರಂಭ ಮಾಡಿದೆ. ಚಿತ್ರದುರ್ಗದ ಶಾಸಕ ಕೆ.ಸಿ.ವೀರೇಂದ್ರ ಈ ಪ್ರವಾಸಿ ಪ್ಯಾಕೇಜ್ ಆರಂಭಿಸಲು ಮನವಿ ಸಲ್ಲಿಕೆ ಮಾಡಿದ್ದರು.

ಏಳುಸುತ್ತಿನ ಕೋಟೆಯ ನಾಡು, ಐತಿಹಾಸಿಕ ಪರಂಪರೆ, ವೀರಗಾಥೆಗಳು ಮತ್ತು ಸಾಂಸ್ಕೃತಿಕ ವೈಭವದಿಂದ ಪ್ರಸಿದ್ಧಿ ಪಡೆದಿರುವ ಚಿತ್ರದುರ್ಗ ವೀಕ್ಷಣೆಗೆ ಪ್ರತಿದಿನ ನೂರಾರು ಜನರು ಬರುತ್ತಾರೆ. ವಾರಾಂತ್ಯದಲ್ಲಿ ಹಲವಾರು ಜನರು ಬೆಂಗಳೂರು ನಗರದಿಂದ ಸಂಚಾರವನ್ನು ನಡೆಸುತ್ತಾರೆ.

ಆದ್ದರಿಂದ ಬೆಂಗಳೂರು-ಚಿತ್ರದುರ್ಗ 1 ದಿನದ ಪ್ರವಾಸ ಪ್ಯಾಕೇಜ್ ಪ್ರಾರಂಭಿಸಲಾಗಿದೆ. ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಕೋಟೆಯ ನಾಡು ಚಿತ್ರದುರ್ಗದ ಐತಿಹಾಸಿಕ ಮಹತ್ವದ ಕುರಿತು ವಿಧಾನಸಭೆ ಅಧಿವೇಶನದಲ್ಲಿ ವಿಷಯ ಮಂಡಿಸಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಚಿತ್ರದುರ್ಗಕ್ಕೆ ಒಂದು ದಿನದ ವಿಶೇಷ ಪ್ರವಾಸ ಪ್ಯಾಕೇಜ್ ಜಾರಿಗೊಳಿಸುವಂತೆ ಮಾಡಿದ್ದರು. ಈಗಾಗಲೇ ಕೆಎಸ್‍ಟಿಡಿಸಿ ವತಿಯಿಂದ ಪ್ರತಿ ವಾರ ಗುರುವಾರದಿಂದ ಭಾನುವಾರದ ತನಕ ನಿತ್ಯವೂ ಬೆಂಗಳೂರು-ಚಿತ್ರದುರ್ಗ ನಡುವೆ ಒಂದು ದಿನದ ಪ್ರವಾಸ ಪ್ಯಾಕೇಜ್ ಜಾರಿಗೊಳಿಸಲಾಗಿದೆ.

ಬೆಂಗಳೂರು-ಚಿತ್ರದುರ್ಗ ನಡುವೆ ಸುಮಾರು 7 ಟ್ರಿಪ್ ಪ್ರವಾಸಗಳು ಪೂರ್ಣಗೊಂಡಿದ್ದು, ಪ್ರವಾಸಿಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಚಿತ್ರದುರ್ಗದ ಕೋಟೆ, ಐತಿಹಾಸಿಕ ಸ್ಥಳಗಳು ಮತ್ತು ಸ್ಥಳೀಯ ಸಂಸ್ಕೃತಿಯ ಬಗ್ಗೆ ಶ್ಲಾಘನೆ ದೊರೆಯುತ್ತಿದೆ.

ಕೋಟೆ ನಾಡಿನ ಖ್ಯಾತಿ ರಾಜ್ಯಾದ್ಯಂತ ಪ್ರತಿಧ್ವನಿಸುವ ಸಾಧನೆ, ಜನರ ಧ್ವನಿಯನ್ನು ಸದನಕ್ಕೆ ತಲುಪಿಸಿ, ಕ್ಷೇತ್ರದ ಹಿತಕ್ಕಾಗಿ ಪ್ರಯತ್ನಿಸಿದ ಫಲದಿಂದಾಗಿ ಚಿತ್ರದುರ್ಗ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಮತ್ತಷ್ಟು ಮುಂಚೂಣಿಗೆ ಬರಲು ಸಾಧ್ಯವಾಗಲಿದೆ.

ಪ್ಯಾಕೇಜ್‍ ವಿವರಗಳು: ಕೆಎಸ್‍ಟಿಡಿಸಿ ವಿಶೇಷ ಬಸ್ ಪ್ರತಿ ವಾರ ಗುರುವಾರದಿಂದ ಭಾನುವಾರದವರೆಗೂ ನಿತ್ಯವೂ ಬೆಂಗಳೂರು-ಚಿತ್ರದುರ್ಗ ಒಂದು ದಿನದ ವಿಶೇಷ ಪ್ರವಾಸಿ ಪ್ಯಾಕೇಜ್‌ ಅನ್ನು ಆರಂಭಿಸಿದೆ. ಅತ್ಯುತ್ತಮ ಹಾಗೂ ಆರಾಮದಾಯಕ ಬಸ್‍ನಲ್ಲಿ ಈ ಪ್ರವಾಸ ಮಾಡಬಹುದು.

ಪ್ರತಿ ಒಂದು ಸೀಟ್‍ಗೆ ರೂ.1073 ದರ ನಿಗದಿಪಡಿಸಲಾಗಿದೆ. ಇದರಲ್ಲಿ ಗೈಡ್ ಸೌಲಭ್ಯ ಇರುತ್ತದೆ. ಬೆಂಗಳೂರಿನಿಂದ ಬೆಳಗ್ಗೆ 6 ಗಂಟೆಗೆ ಹೊರಡುವ ಬಸ್ ಚಿತ್ರದುರ್ಗಕ್ಕೆ ಆಗಮಿಸಿ, ಐತಿಹಾಸಿಕ ಕೋಟೆ, ಚಂದ್ರವಳ್ಳಿ, ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಅವರ ಸ್ಮಾರಕಕ್ಕೆ ಭೇಟಿ ನೀಡಲಿದೆ. ಸಂಜೆ 5 ಗಂಟೆಯ ಬಳಿಕ ಚಿತ್ರದುರ್ಗದಿಂದ ಹೊರಟು, ರಾತ್ರಿ 10 ಗಂಟೆಯ ವೇಳೆಗೆ ಬೆಂಗಳೂರು ನಗರಕ್ಕೆ ವಾಪಸ್ ಆಗಲಿದೆ.

ಪ್ರಾಯೋಗಿಕವಾಗಿ ಗುರುವಾರದಿಂದ ಭಾನುವಾರದವರೆಗೆ ನಿತ್ಯವೂ ಟ್ರಿಪ್ ಹಾಕಿಕೊಳ್ಳುತ್ತಿದ್ದೇವೆ. ಸೀಟ್‍ಗಳ ಬುಕಿಂಗ್ ಆಧಾರದಲ್ಲಿ ಪ್ರವಾಸ ಏರ್ಪಡಿಸುತ್ತೇವೆ, ಈಗಾಗಲೇ 7 ಟ್ರಿಪ್‍ಗಳು ಯಶಸ್ವಿಯಾಗಿ ಪೂರ್ಣಗೊಂಡಿದೆ. ಕೆಎಸ್‍ಟಿಡಿಸಿ ವತಿಯಿಂದ ಹಾಕಿಕೊಂಡಿರುವ ಈ ನೂತನ ಪ್ರವಾಸ ಪ್ಯಾಕೇಜ್‍ಗೆ ಪ್ರವಾಸಿಗರಿಂದ ಉತ್ತಮ ಸ್ಪಂದನೆ ದೊರೆಯುತ್ತಿದ್ದು, ಹೆಚ್ಚು ಹೆಚ್ಚು ಪ್ರವಾಸಿಗರ ಬೇಡಿಕೆ ಬಂದಲ್ಲಿ ವಾರದ ಎಲ್ಲ ದಿನವೂ ಪ್ರವಾಸ ಏರ್ಪಡಿಸುತ್ತೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಪ್ರವಾಸಿ ಪ್ಯಾಕೇಜ್‌ ಅನ್ನು ಆನ್‍ಲೈನ್ ಮೂಲಕ ಬುಕ್ ಮಾಡಬೇಕಿದೆ. ಸದ್ಯ ಬೆಂಗಳೂರಿನಿಂದ ಮಾತ್ರ ಪ್ಯಾಕೇಜ್ ಬುಕ್ಕಿಂಗ್‍ಗೆ ಅವಕಾಶ ಕಲ್ಪಿಸಿದ್ದು, ಆಸಕ್ತರು https://kstdc.co ವೆಬ್‍ಸೈಟ್ ಮೂಲಕ ಆನ್‍ಲೈನ್‍ನಲ್ಲಿ ಬುಕ್ಕಿಂಗ್ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ 080-43344334 ದೂರವಾಣಿಯನ್ನು ಸಂಪರ್ಕಿಸಬಹುದು.

ಈ ಕುರಿತು ಕೆಎಸ್‌ಟಿಡಿಸಿ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ ಕುಮಾರ್ ಮಿಶ್ರಾ ಮಾತನಾಡಿ, “ಕರ್ನಾಟಕದಲ್ಲಿ ಐತಿಹಾಸಿಕ ಮತ್ತು ಪ್ರಾಚೀನ ಮಹತ್ವವುಳ್ಳ ಅನೇಕ ಪ್ರವಾಸಿ ತಾಣಗಳಿವೆ. ಇದರಲ್ಲಿ ಚಿತ್ರದುರ್ಗದ ಏಳು ಸುತ್ತಿನ ಕೋಟೆ, ಚಂದ್ರವಳ್ಳಿ ಕೂಡ ಐತಿಹಾಸಿಕವಾಗಿ ಅತ್ಯಂತ ಪ್ರಸಿದ್ಧಿ ಪಡೆದಿದೆ” ಎಂದರು.

“ನಾಡಿನ ಪ್ರಸಿದ್ಧ ಪ್ರವಾಸಿ ತಾಣಗಳ ಮಹತ್ವವನ್ನು ಸಾರುವಂತಾಗಲು ಕೆಎಸ್‍ಟಿಡಿಸಿ ನಿರಂತರವಾಗಿ ಹೊಸ ಹೊಸ ಯೋಜನೆಗಳನ್ನು ಹಮ್ಮಿಕೊಳ್ಳುವಲ್ಲಿ ನಿರತವಾಗಿದೆ. ಇದು ಕೇವಲ ಪ್ರವಾಸ ಮಾತ್ರವಲ್ಲ, ಇದರಿಂದಾಗಿ ಸ್ಥಳೀಯರಿಗೂ ಉದ್ಯೋಗ, ವ್ಯಾಪಾರ, ವಾಣಿಜ್ಯಕ್ಕೆ ಉತ್ತೇಜನ ದೊರೆತಂತಾಗುತ್ತದೆ” ಎಂದು ಹೇಳಿದರು.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular