ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್ಟಿಸಿ) ವೀಕೆಂಡ್ ಮತ್ತು ವಿಶೇಷ ದಿನದ ಟೂರ್ ಪ್ಯಾಕೇಜ್ ಘೋಷಣೆ ಮಾಡಿದೆ. ಬೆಂಗಳೂರು ನಗರದಿಂದ ರಾಜಹಂಸ & ಅಶ್ವಮೇಧ ಬಸ್ಗಳ ಮೂಲಕ ಈ ಪ್ಯಾಕೇಜ್ ಒದಗಿಸಲಾಗುತ್ತದೆ.
ಒಟ್ಟು ಟೂರ್ ಪ್ಯಾಕೇಜ್ಗಳನ್ನು ಘೋಷಣೆ ಮಾಡಲಾಗಿದ್ದು, ಯಾವ ಬಸ್ಗಳನ್ನು ಬಳಕೆ ಮಾಡಲಾಗುತ್ತದೆ ಎಂದು ಸಹ ಕೆಎಸ್ಆರ್ಟಿಸಿ ಮಾಹಿತಿ ನೀಡಿದೆ. ವಯಸ್ಕರಿಗೆ ಮತ್ತು ಮಕ್ಕಳಿಗೆ ಎಷ್ಟು? ದರ ಎಂದು ಸಹ ತಿಳಿಸಿದೆ.
ಆನ್ಲೈನ್ ಮೂಲಕ ಈ ಟೂರ್ ಪ್ಯಾಕೇಜ್ಗೆ ಟಿಕೆಟ್ ಬುಕ್ ಮಾಡಲು ಅವಕಾಶವಿದೆ. ಬೆಂಗಳೂರು ನಗರದಿಂದ ಐಷಾರಾಮಿ ಬಸ್ಗಳಲ್ಲಿ ಒಂದು ದಿನ ಪ್ರವಾಸ ಯೋಜನೆ ಮಾಡುತ್ತಿರುವವರು ಈ ಟೂರ್ ಪ್ಯಾಕೇಜ್ ಬಳಕೆ ಮಾಡಿಕೊಳ್ಳಬಹುದು.
ಶನಿವಾರ ಮತ್ತು ಭಾನುವಾರ ಹಾಗೂ ರಜಾ ದಿನಗಳಲ್ಲಿ ಈ ಟೂರ್ ಪ್ಯಾಕೇಜ್ ಲಭ್ಯವಿದೆ ಎಂದು ಕೆಎಸ್ಆರ್ಟಿಸಿ ಹೇಳಿದೆ. ಆದರೆ ಈ ಪ್ರವಾಸಿ ಪ್ಯಾಕೇಜ್ಗಳಲ್ಲಿ ಪ್ರವಾಸ ತೆರಳುವ ಪ್ರದೇಶದ ಪ್ರವೇಶ ಶುಲ್ಕ, ಊಟ ಮತ್ತು ಉಪಹಾರ ಸೇರಿಲ್ಲ. ಅದಕ್ಕೆ ಪ್ರವಾಸ ಹೋಗುವ ಜನರೇ ಹಣ ಪಾವತಿ ಮಾಡಬೇಕಿದೆ.
ಜನರಿಂದ ಈ ಪ್ರವಾಸಿ ಪ್ಯಾಕೇಜ್ಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಜನರು ಬೆಂಗಳೂರು ನಗರದಿಂದ ಪ್ರವಾಸ ಹೋಗುವ ಆಲೋಚನೆಯಲ್ಲಿದ್ದರೆ ಈ ಪ್ರವಾಸಿ ಪ್ಯಾಕೇಜ್ ಬುಕ್ ಮಾಡಿ ಎಂದು ಕೆಎಸ್ಆರ್ಟಿಸಿ ಮನವಿ ಮಾಡಿದೆ.
4 ಪ್ಯಾಕೇಜ್ ವಿವರಗಳು
- ಬೆಂಗಳೂರು-ಗಗನಚುಕ್ಕಿ. ಬೆಂಗಳೂರು, ಸೋಮನಾಥಪುರ, ತಲಕಾಡು, ಭರಚುಕ್ಕಿ, ಗಗನಚುಕ್ಕಿಯನ್ನು ನೋಡಬಹುದು. 340 ಕಿ.ಮೀ. ಪ್ರವಾಸಕ್ಕೆ ರಾಜಹಂಸ ಬಸ್ ಬಳಕೆ ಮಾಡಲಾಗುತ್ತದೆ. ವಯಸ್ಕರಿಗೆ 750 ರೂ. ಮತ್ತು ಮಕ್ಕಳಿಗೆ 600 ರೂ. ದರ ನಿಗದಿ ಮಾಡಲಾಗಿದೆ.
- ಬೆಂಗಳೂರು-ಗಗನಚುಕ್ಕಿ. ಬೆಂಗಳೂರು, ಸೋಮನಾಥಪುರ, ತಲಕಾಡು, ಭರಚುಕ್ಕಿ, ಗಗನಚುಕ್ಕಿ ವೀಕ್ಷಣೆ ಮಾಡಬಹುದು. ಅಶ್ವಮೇಧ ಬಸ್ಗಳನ್ನು ಈ 340 ಕಿ.ಮೀ. ಪ್ರವಾಸಕ್ಕೆ ಬಳಕೆ ಮಾಡಲಾಗುತ್ತದೆ. ವಯಸ್ಕರಿಗೆ ದರ 600 ಮತ್ತು ಮಕ್ಕಳಿಗೆ 450 ರೂ.ಗಳು.
- ಬೆಂಗಳೂರು-ಚಿಕ್ಕತಿರುಪತಿ. ಬೆಂಗಳೂರು, ಚಿಕ್ಕತಿರುಪತಿ, ಕೋಟಿ ಲಿಂಗೇಶ್ವರ, ಬಂಗಾರು ತಿರುಪತಿ, ಅವನಿ, ಮುಳುಬಾಗಿಲು, ಕುರುಡುಮಲೆ, ಕೋಲಾರ ವೀಕ್ಷಣೆ ಮಾಡಬಹುದು. 270 ಕಿ.ಮೀ. ಪ್ರವಾಸಕ್ಕೆ ಅಶ್ವಮೇಧ ಬಸ್ ಬಳಕೆ ಮಾಡಲಾಗುತ್ತದೆ. ವಯಸ್ಕರಿಗೆ 600 ಮತ್ತು ಮಕ್ಕಳಿಗೆ 450 ರೂ. ದರವನ್ನು ನಿಗದಿ ಮಾಡಲಾಗಿದೆ.
- ಬೆಂಗಳೂರು-ಮೇಲುಕೋಟೆ. ಬೆಂಗಳೂರು, ಶ್ರೀರಂಗಪಟ್ಟಣ, ಕಲ್ಲಹಳ್ಳಿ, ಮೇಲುಕೋಟೆ ವೀಕ್ಷಣೆ ಮಾಡಬಹುದು. 350 ಕಿ.ಮೀ. ಪ್ರವಾಸಕ್ಕೆ ಅಶ್ವಮೇಧ ಬಸ್ ಬಳಕೆ ಮಾಡಲಾಗುತ್ತದೆ. ವಯಸ್ಕರಿಗೆ 670 ಮತ್ತು ಮಕ್ಕಳಿಗೆ 500 ರೂ. ದರವನ್ನು ನಿಗದಿ ಮಾಡಲಾಗಿದೆ.
ಈ ಪ್ರವಾಸಿ ಪ್ಯಾಕೇಜ್ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆಎಸ್ಆರ್ಟಿಸಿ ವೆಬ್ಸೈಟ್ಗೆ ಭೇಟಿ ನೀಡಿ ಅಥವ 080-26252625, 7760990100 ಸಂಖ್ಯೆಗೆ ಕರೆ ಮಾಡಿ.

