HomeKarnatakaಇನ್ನು ರಾತ್ರಿ ಪಾಳಿ, ದೂರದ ಮಾರ್ಗಗಳ KSRTC ಚಾಲಕರಿಗೆ ಕನಿಷ್ಠ 9 ಗಂಟೆ ವಿಶ್ರಾಂತಿ

ಇನ್ನು ರಾತ್ರಿ ಪಾಳಿ, ದೂರದ ಮಾರ್ಗಗಳ KSRTC ಚಾಲಕರಿಗೆ ಕನಿಷ್ಠ 9 ಗಂಟೆ ವಿಶ್ರಾಂತಿ

ಬೆಂಗಳೂರು: ರಾತ್ರಿ ಸೇವೆ ಮತ್ತು ದೂರದ ಮಾರ್ಗಗಳಿಗೆ ಚಾಲಕರನ್ನು ಕರ್ತವ್ಯಕ್ಕೆ ಕಳುಹಿಸುವ ಮೊದಲು ಕನಿಷ್ಠ 9 ಗಂಟೆಗಳ ಕಾಲ ವಿಶ್ರಾಂತಿ ನೀಡುವಂತೆ ಕೆಎಸ್ಆರ್ಟಿಸಿ ವಿಭಾಗೀಯ ನಿಯಂತ್ರಣ ಅಧಿಕಾರಿಗಳಿಗೆ ಸೂಚನೆ ನೀಡಿದೆ.

ಕೆಎಸ್ಆರ್ಟಿಸಿ ಬಸ್ ಅಪಘಾತಕ್ಕೆ ಚಾಲಕರ ಮೇಲಿನ ಕಾರ್ಯದೊತ್ತಡವೂ ಕಾರಣ ಎನ್ನುವುದನ್ನು ಮನಗಂಡಿರುವ ನಿಗಮದ ಆಡಳಿತ ಮಂಡಳಿ ಈ ನಿಟ್ಟಿನಲ್ಲಿ ಚಾಲಕರಿಗೆ ವಿಶ್ರಾಂತಿಗೆ ಸೂಚನೆ ನೀಡಿದೆ. ಕೆಎಸ್ಆರ್ಟಿಸಿ ಬಸ್ ಗಳಿಂದ ಉಂಟಾಗಿರುವ ಅಪಘಾತ ಪ್ರಕರಣ ವಿಶ್ಲೇಷಣೆ ಸಭೆಯಲ್ಲಿ ಚಾಲಕರ ಮೇಲೆ ಆಗುತ್ತಿರುವ ಕಾರ್ಯದೊತ್ತಡ ಕುರಿತಾಗಿ ಚರ್ಚೆ ನಡೆಸಿದೆ.

ವಿಶ್ರಾಂತಿ ಇಲ್ಲದೆ ಮೇಲಿಂದ ಮೇಲೆ ಚಾಲಕರನ್ನು ಕರ್ತವ್ಯಕ್ಕೆ ನಿಯೋಜಿಸುವುದರಿಂದ ಸುಸ್ತಾಗುತ್ತಾರೆ. ಇದು ಅಪಘಾತಗಳಿಗೆ ಕಾರಣವಾಗುತ್ತಿದೆ. ಹೀಗಾಗಿ ಚಾಲಕರಿಗೆ ನಿಯಮಿತವಾಗಿ ವಿಶ್ರಾಂತಿ ನೀಡಲು ಎಲ್ಲಾ ವಿಭಾಗ ನಿಯಂತ್ರಣಾಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಹೇಳಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular