ಬೆಂಗಳೂರು: ರಾಜ್ಯ ಸರ್ಕಾರದಿಂದ ಸಾರಿಗೆ ನೌಕರರಿಗೆ ಸಿಹಿ ಸುದ್ದಿ ಸಿಕ್ಕಿದೆ. 170 ಕೋಟಿ ರೂಪಾಯಿ ವೇತನ ಹಿಂಬಾಕಿಯನ್ನು ಸರ್ಕಾರ ಬಿಡುಗಡೆ ಮಾಡಿದೆ.
26 ತಿಂಗಳ 1271 ಕೋಟಿ ರೂಪಾಯಿ ಬಾಕಿ ಇದ್ದು ಇದರಲ್ಲಿ ಹಿಂದೆ 450 ಕೋಟಿ ರೂಪಾಯಿಯನ್ನು ಸರ್ಕಾರ ಬಿಡುಗಡೆ ಮಾಡಿದ್ದು, ಇಂದು ಮತ್ತೆ 170 ಕೋಟಿ ರೂಪಾಯಿಯನ್ನು ಸರ್ಕಾರ ಬಿಡುಗಡೆ ಮಾಡಿದೆ. ಉಳಿದ 651 ಕೋಟಿ ರೂ.ಗಳನ್ನು ಹಂತ ಹಂತವಾಗಿ ಬಿಡುಗಡೆ ಮಾಡಲಾಗುವುದು.
ನಿವೃತ್ತ ಸಾರಿಗೆ ನೌಕರರಿಗೂ ಸರ್ಕಾರದಿಂದ ಸಿಹಿ ಸುದ್ದಿ ಸಿಕ್ಕಿದೆ. ನಿವೃತ್ತ ನೌಕರರಿಗೂ ಸಾರಿಗೆ ಇಲಾಖೆ ಉಚಿತ ಪಾಸ್ ನೀಡಲಿದೆ. ಸಾರಿಗೆ ಇಲಾಖೆಗೆ ಈ ಹಿಂದೆ ವಾರ್ಷಿಕ ಪಾಸ್ ಗೆ 500 ರೂ. ಪಾವತಿಸಬೇಕಿತ್ತು, ಇಂದಿನಿಂದ ಉಚಿತವಾಗಿ ಪಾಸ್ ಪಡೆದುಕೊಳ್ಳಬಹುದು ಎಂದು ಹೇಳಲಾಗಿದೆ.

