HomeKarnatakaಬಸ್ ಕಂಡೊಡನೆ ಘೀಳಿಡುತ್ತಾ ಬಂದು ಅಡ್ಡಗಟ್ಟಿದ ಒಂಟಿಸಲಗ: ಕೂದಲೆಳೆ ಅಂತರದಲ್ಲಿ ಪಾರಾದ ಪ್ರಯಾಣಿಕರು

ಬಸ್ ಕಂಡೊಡನೆ ಘೀಳಿಡುತ್ತಾ ಬಂದು ಅಡ್ಡಗಟ್ಟಿದ ಒಂಟಿಸಲಗ: ಕೂದಲೆಳೆ ಅಂತರದಲ್ಲಿ ಪಾರಾದ ಪ್ರಯಾಣಿಕರು

ಮಡಿಕೇರಿ: ದೇವರಪುರ ಗ್ರಾಮದ ಬಳಿ ಒಂಟಿ ಸಲಗ ಕೆಎಸ್ಆರ್ಟಿಸಿ ಬಸ್ ಅಡ್ಡಗಟ್ಟಿದೆ. ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ದೇವರಪುರ ಗ್ರಾಮದ ಸಮೀಪ ಘಟನೆ ನಡೆದಿದೆ.

ಇದ್ದಕ್ಕಿದ್ದಂತೆ ಸಾರಿಗೆ ಬಸ್ ಬಳಿ ಒಂಟಿಸಲಗ ಓಡಿ ಬಂದಿದೆ. ಕೆಲ ಸಮಯ ಬಸ್ ಅಡ್ಡಗಟ್ಟಿ ಸುತ್ತಲೂ ಓಡಾಡಿದೆ. ಸಲಗ ಬಸ್ ಬಳಿ ಬರುತ್ತಿದ್ದಂತೆ ಚಾಲಕ ಇಂಜಿನ್ ಆಫ್ ಮಾಡಿದ್ದಾರೆ. ಆನೆ ಹತ್ತಿರ ಬರುತ್ತಿದ್ದಂತೆ ಸೀಟ್ ನಿಂದ ಚಾಲಕ ಎದ್ದು ಬಂದಿದ್ದಾರೆ. ಬಸ್ ನಲ್ಲಿದ್ದವರೆಲ್ಲ ತಟಸ್ಥರಾಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೆಲ ಹೊತ್ತು ಓಡಾಡಿದ ಸಲಗ ನಂತರ ಕಾಫಿ ತೋಟದತ್ತ ಹೆಜ್ಜೆ ಹಾಕಿದ್ದು, ನಿಟ್ಟುಸಿರು ಬಿಟ್ಟ ಕೆಎಸ್ಆರ್ಟಿಸಿ ಬಸ್ ಸಿಬ್ಬಂದಿ ಮತ್ತು ಪ್ರಯಾಣಿಕರು ಅಲ್ಲಿಂದ ಪ್ರಯಾಣ ಮುಂದುವರೆಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular