ಉಡುಪಿ: ಕರ್ತವ್ಯದ ವೇಳೆಯಲ್ಲೇ ಕೆಎಸ್ಆರ್ಟಿಸಿ ಬಸ್ ನಿರ್ವಾಹಕ ಎದೆನೋವಿನಿಂದ ಮೃತಪಟ್ಟಿದ್ದಾರೆ. ಶಿವಲಿಂಗಪ್ಪ ಮೃತಪಟ್ಟ ನಿರ್ವಾಹಕರಾಗಿದ್ದಾರೆ.
20 ವರ್ಷಗಳಿಂದ ಕೆಎಸ್ಆರ್ಟಿಸಿಯಲ್ಲಿ ನಿರ್ವಾಹಕರಾಗಿ ಶಿವಲಿಂಗಪ್ಪ ಕಾರ್ಯನಿರ್ವಹಿಸುತ್ತಿದ್ದರು. ಪ್ರಸ್ತುತ ಕರ್ನಾಟಕ ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆ ಹುಬ್ಬಳ್ಳಿ -ಧರ್ಮಸ್ಥಳ ಮಾರ್ಗದ ಬಸ್ ನಲ್ಲಿ ನಿರ್ವಾಹಕರಾಗಿದ್ದರು. ಏಪ್ರಿಲ್ 20ರಂದು ಹುಬ್ಬಳ್ಳಿಯಿಂದ ಧರ್ಮಸ್ಥಳಕ್ಕೆ ಹೋಗಿ ಏಪ್ರಿಲ್ 21ರಂದು ಧರ್ಮಸ್ಥಳದಿಂದ ಹೊರಟು ಹುಬ್ಬಳ್ಳಿಗೆ ತೆರಳುತ್ತಿದ್ದರು. ರಾತ್ರಿ 10 ಗಂಟೆಗೆ ಬೈಂದೂರಿನ ಹೋಟೆಲ್ ನಲ್ಲಿ ಊಟ ಮುಗಿಸಿ ಬಸ್ ಹೊರಡುವಾಗ ಶಿವಲಿಂಗಪ್ಪ ಅವರಿಗೆ ಎದೆ ನೋವು ಕಾಣಿಸಿಕೊಂಡು ಅಸ್ವಸ್ಥರಾಗಿದ್ದಾರೆ. ಕೂಡಲೇ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

