HomeKarnatakaKSRTC ಬಸ್ ಗಳ ಮೇಲೆ ಪುಂಡರ ಅಟ್ಟಹಾಸ; ಏಕಾಏಕಿ ರಾಡ್, ದೊಣ್ಣೆಗಳಿಂದ ಹೊಡೆದು ಬಸ್ ಗಳ...

KSRTC ಬಸ್ ಗಳ ಮೇಲೆ ಪುಂಡರ ಅಟ್ಟಹಾಸ; ಏಕಾಏಕಿ ರಾಡ್, ದೊಣ್ಣೆಗಳಿಂದ ಹೊಡೆದು ಬಸ್ ಗಳ ಗಾಜು ಪುಡಿ ಪುಡಿಗೈದ ಕಿಡಿಗೇಡಿಗಳು

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಪುಂಡರ ಅಟ್ಟಹಾಸ ಮಿತಿ ಮೀರಿದ್ದು, ಕೆ.ಎಸ್.ಆರ್.ಟಿಸಿ ಬಸ್ ಗಳ ಮೇಲೆ ಕಲ್ಲು ತೂರಾಟ ನಡೆಸಿ, ದಾಳಿ ನಡೆಸಿರುವ ಘಟನೆ ಮೆಜೆಸ್ಟಿಕ್ ನ ಶಂತಲಾ ಸಿಗ್ನಲ್ ಬಳಿ ನಡೆದಿದೆ.

ಮೈಸೂರಿನಿಂದ ಬೆಂಗಳೂರಿಗೆ ಆಗಮಿಸಿದ್ದ 2 ಕೆ.ಎಸ್.ಆರ್.ಟಿ.ಸಿ ಬಸ್ ಗಳು ಶಾಂತಲಾ ಸಿಗ್ನಲ್ ಬಳಿ ನಿಂತಿದ್ದವು. ಈ ವೇಳೆ 1 ಆಟೋ, ಎರಡು ಬೈಕ್ ಗಳಲ್ಲಿ ಬಂದ ಐವರು ಪುಂಡರ ಗುಂಪು ಏಕಾಏಕಿ ರಾಡ್, ದೊಣ್ಣೆಯಿಂದ ಹೊಡೆದು ಬಸ್ ಗಾಜುಗಳನ್ನು ಪುಡಿ ಪುಡಿ ಮಾಡಿದ್ದಾರೆ.

ಅಲ್ಲದೇ ಬಸ್ ಗಳ ಮೇಲೆ ಮನಬಂದಂತೆ ಕಲ್ಲು ತೂರಾಟ ನಡೆಸಿದ್ದಾರೆ. ಎರಡೂ ಬಸ್ ಗಳ ಗಾಜುಗಳು ಸಂಪೂರ್ಣ ಪುಡಿ ಪುಡಿಯಾಗಿವೆ. ಮಧ್ಯರಾತ್ರಿ 1:45ರ ಸುಮಾರಿನಲ್ಲಿ ಈ ಘಟನೆ ನಡೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಬೈಕ್, ಕಾರು, ವಾಹನಗಳ ಮೇಲೆ ದಾಳಿ ನಡೆಸಿ ಅಟ್ಟಹಾಸ ಮೆರೆಯುತ್ತಿದ್ದ ಕಿಡಿಗೇಡಿಗಳು ಈಗ ಬಸ್ ಗಳ ಮೇಲೂ ದಾಳಿ ನಡೆಸುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.

 

For Latest News Updates, Join Our Whatsapp Community🚩
RELATED ARTICLES

Most Popular