HomeKarnatakaಬಿಜೆಪಿಯಲ್ಲಿ ಲಿಂಗಾಯತ ನಾಯಕರ ಮುಗಿಸಿದ್ದಾಯ್ತು, ಈಗ HDK ಟಾರ್ಗೆಟ್: ವಿಪಕ್ಷಗಳ ಪಾದಯಾತ್ರೆಗೆ ಸಚಿವ ಕೃಷ್ಣ ಬೈರೇಗೌಡ...

ಬಿಜೆಪಿಯಲ್ಲಿ ಲಿಂಗಾಯತ ನಾಯಕರ ಮುಗಿಸಿದ್ದಾಯ್ತು, ಈಗ HDK ಟಾರ್ಗೆಟ್: ವಿಪಕ್ಷಗಳ ಪಾದಯಾತ್ರೆಗೆ ಸಚಿವ ಕೃಷ್ಣ ಬೈರೇಗೌಡ ತಿರುಗೇಟು

ಚಾಮರಾಜನಗರ: ಮುಡಾ ಹಗರಣದ ವಿರುದ್ಧ ಬಿಜೆಪಿ-ಜೆಡಿಎಸ್ ಪಾದಯಾತ್ರೆಗೆ ಪ್ರತಿಕ್ರಿಯಿಸಿರುವ ಸಚಿವ ಕೃಷ್ಣ ಬೈರೇಗೌಡ, ಬಿಜೆಪಿಯಲ್ಲಿ ಲಿಂಗಾಯತ ನಾಯಕರ ಮುಗಿಸಿದ್ದಾಯ್ತು ಈಗ ಹೆಚ್.ಡಿ.ಕುಮಾರಸ್ವಾಮಿಯನ್ನು ಟಾರ್ಗೆಟ್ ಮಾಡಿದ್ದಾರೆ ಎಂದು ಟಾಂಗ್ ನೀಡಿದ್ದಾರೆ.

ಚಾಮರಾಜನಗರದಲ್ಲಿ ಮಾತನಾಡಿದ ಸಚಿವರು, ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ಯತ್ನವನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾಡುತ್ತಿದ್ದಾರೆ. ಜೆಡಿಎಸ್ ಕಾರ್ಯಕರ್ತರನ್ನು ಬಿಜೆಪಿಗೆ ಸೆಳೆದು ಹೆಚ್ ಡಿಕೆ ಸರ್ವನಾಶಕ್ಕೆ ಪ್ಲಾನ್ ಮಾಡಿದ್ದಾರೆ. ಇದೇ ಕಾರಣಕ್ಕೆ ಜೆಡಿಎಸ್ ಪ್ರಾಬಲ್ಯವಿರುವ ಕಡೆ ಪಾದಯಾತ್ರೆ ಮಡುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.

ಇದೇ ವೇಳೆ ಸಿಎಂ ಸಿದ್ದರಾಮಯ್ಯ ಅವರಿಗೆ ರಾಜ್ಯಪಾಲರ ಸೋಕಾಸ್ ನೋಟಿಸ್ ವಿಚಾರವಾಗಿ ಕಿಡಿಕಾರಿದ ಸಚಿವರು, ದೂರು ನೀಡಿದ ತಕ್ಷಣ ಪರಿಶೀಲಿಸದೇ ನೋಟಿಸ್ ನೀಡಿದ್ದಾರೆ. ಎಲ್ಲಿಂದಲೋ ಬಂದು ಇಲ್ಲಿ ದಬ್ಬಾಳಿಕೆ ಮಾದಿದರೆ ನಾವು ಒಪ್ಪಲ್ಲ. ರಾಜ್ಯಪಾಲರು ಸರ್ಕಾರವನ್ನು ಬೀಳಿಸುವ ಹಿನ್ನಾರ ಮಾಡಿದ್ದಾರೆ ಎಂದು ವಾಗ್ದಾಲಿ ನಡೆಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular