HomeKarnatakaBREAKING: ಬಿಜೆಪಿಗೆ ಬಿಗ್ ಶಾಕ್: ಜೆಡಿಎಸ್ ಗೆ ಸೇರ್ಪಡೆಯಾದ ಕೃಷ್ಣನಾಯಕ್

BREAKING: ಬಿಜೆಪಿಗೆ ಬಿಗ್ ಶಾಕ್: ಜೆಡಿಎಸ್ ಗೆ ಸೇರ್ಪಡೆಯಾದ ಕೃಷ್ಣನಾಯಕ್

ಬೆಂಗಳೂರು: ಮೈಸೂರು ಭಾಗದ ಬಿಜೆಪಿ ನಾಯಕ ಕೃಷ್ಣನಾಯಕ್ ಬಿಜೆಪಿಗೆ ಗುಡ್ ಬೈ ಹೇಳಿ ಇಂದು ಜೆಡಿಎಸ್ ಗೆ ಸೇರ್ಪಡೆಯಾಗಿದ್ದಾರೆ.

2023ರ ಚುನಾವಣೆಯಲ್ಲಿ ಹೆಚ್.ಡಿ.ಕೋಟೆ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದ ಕೃಷ್ಣನಾಯಕ್ ಇಂದು ಅಧಿಕೃತವಾಗಿ ಜೆಡಿಎಸ್ ಗೆ ಸೇರ್ಪಡೆಯಾಗಿದ್ದಾರೆ. ಈ ಮೂಲಕ ಮೈಸೂರು ಭಾಗದಲ್ಲಿ ಚಿಗುರೊಡೆದಿದ್ದ ಕಮಲವನ್ನು ಜೆಡಿಎಸ್ ಚಿವುಟಿ ಹಾಕಿದಂತಾಗಿದೆ.

ಬೆಂಗಳೂರಿನಲ್ಲಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಸಮ್ಮುಖದಲ್ಲಿ ಕೃಷ್ಣನಾಯಕ್ ಜೆಡಿಎಸ್ ಗೆ ಸೇರ್ಪಡೆಯಾಗಿದ್ದಾರೆ. ಇದೇ ವೇಳೆ ಕೃಷ್ಣನಾಯಕ್ ಬೆಂಬಲಿಗರು ಕೂಡ ಜೆಡಿಎಸ್ ಗೆ ಸೇರ್ಪಡೆಯಾಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular