HomeKarnatakaಚುನಾಯಿತ ಸರ್ಕಾರ ಬುಡಮೇಲು ಮಾಡಲು ಬಿಜೆಪಿ-ಜೆಡಿಎಸ್ ಪ್ರಯತ್ನ: ಇದಕ್ಕೆ ರಾಜ್ಯಪಾಲರೇ ಸಾಥ್ ನೀಡುತ್ತಿರುವುದು ದುರಂತ: ಸಚಿವ...

ಚುನಾಯಿತ ಸರ್ಕಾರ ಬುಡಮೇಲು ಮಾಡಲು ಬಿಜೆಪಿ-ಜೆಡಿಎಸ್ ಪ್ರಯತ್ನ: ಇದಕ್ಕೆ ರಾಜ್ಯಪಾಲರೇ ಸಾಥ್ ನೀಡುತ್ತಿರುವುದು ದುರಂತ: ಸಚಿವ ಕೃಷ್ಣಬೈರೇಗೌಡ ವಾಗ್ದಾಳಿ

ಬೆಂಗಳೂರು: ಕಾಂಗ್ರೆಸ್ ನಾಯಕರು ಪ್ರಜಾಪ್ರಭುತ್ವ ಉಳಿವಿಗಾಗಿ ಹೋರಾಟ ಮಾಡುತ್ತಿದ್ದೇವೆ. ಆದರೆ ಬಿಜೆಪಿ ಹಗೂ ಜೆಡಿಎಸ್ ನಾಯಕರು ಜನಮತ, ಬಹುಮತದಿಂದ ಆಯ್ಕೆಯಾಗಿರುವ ಚುನಾಯಿತ ಸರ್ಕಾರವನ್ನೇ ಬುಡಮೇಲು ಮಾಡಲು ಪ್ಯತ್ನ ಮಾಡುತ್ತಿದ್ದಾರೆ ಎಂದು ಸಚಿವ ಕೃಷ್ಣಬೈರೇಗೌಡ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕಾಂಗ್ರೆಸ್ ಸರ್ಕಾರವನ್ನು ಬುಡಮೇಲು ಮಾಡಲು ಬಿಜೆಪಿ-ಜೆಡಿಎಸ್ ನಾಯಕರು ಇನ್ನಿಲ್ಲದ ಪ್ರಯತ್ನ ಮಡುತ್ತಿದ್ದಾರೆ. ರಾಜ್ಯಪಾಲರಾದವರು ಅವರ ಜೊತೆಸೇರಿರುವುದು ದುರಂತ ಎಂದು ಕಿಡಿಕಾರಿದರು.

ರಾಜ್ಯಪಾಲರಾದವರು ಸಂವಿಧಾನಕ್ಕೆ ನಿಷ್ಠರಾಗಿರಬೇಕು. ಆದರೆ ಇಲ್ಲಿ ರಾಜ್ಯಪಾಲರು ಸಂವಿಧಾನದ ಬದಲು ಬಿಜೆಪಿಗೆ ನಿಷ್ಠರಾಗಿರುವುದನ್ನು ಪ್ರದರ್ಶಿಸುತ್ತಿದ್ದಾರೆ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದಾರಿಹೋಕನೊಬ್ಬ ನಿಡಿರುವ ದೂರಿಗೆ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡುತ್ತಾರೆ. ಆದರೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಲೋಕಾಯುಕ್ತ ನೀಡಿರುವ ದೂರನ್ನು ಕಸದ ಬುಟ್ಟಿಗೆ ಎಸೆಯುತ್ತಾರೆ ಎಂದು ಅಕ್ರೋಶ ವ್ಯಕ್ತಪಡಿಸಿದರು

For Latest News Updates, Join Our Whatsapp Community🚩
RELATED ARTICLES

Most Popular