HomeLatest Newsಅಪಚಾರವೇ ಪ್ರಚಾರವೇ? ಕೃಷ್ಣನ ಫೋಟೋ ಬಳಸಿ ಚಿಕನ್ ಬಿರಿಯಾನಿ ಜಾಹೀರಾತು ಭಕ್ತರ ಆಕ್ರೋಶ

ಅಪಚಾರವೇ ಪ್ರಚಾರವೇ? ಕೃಷ್ಣನ ಫೋಟೋ ಬಳಸಿ ಚಿಕನ್ ಬಿರಿಯಾನಿ ಜಾಹೀರಾತು ಭಕ್ತರ ಆಕ್ರೋಶ

ಕೇರಳ: ವ್ಯವಹಾರದಲ್ಲಿ ಗ್ರಾಹಕರನ್ನು ಸೆಳೆಯಲು ಹೊಸ ಹಾದಿ ತುಳಿಯುವುದು ಸಾಮಾನ್ಯ. ಆದರೆ ಕೇರಳದ ಹೋಟೆಲ್ ಒಂದು ಅತಿಬುದ್ಧಿವಂತಿಕೆ ಪ್ರದರ್ಶಿಸಲು ಹೋಗಿ ಈಗ ಕಾನೂನು ಮತ್ತು ಜನರ ಕೆಂಗಣ್ಣಿಗೆ ಗುರಿಯಾಗಿದೆ. ವಿಷು ಹಬ್ಬದ ಹೆಸರಿನಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ರೆಸ್ಟೋರೆಂಟ್ ವಿರುದ್ಧ ನೆಟ್ಟಿಗರು ಡಿಜಿಟಲ್ ವಾರ್ ಸಾರಿದ್ದಾರೆ.

ಏನಿದು ವಿವಾದ?


ಕೇರಳದ ಚೇರ್ತಲಾದಲ್ಲಿರುವ ಮೆಹರ್ ಮಂಡಿ ಅಂಡ್ ಗ್ರಿಲ್ಸ್ ಎಂಬ ರೆಸ್ಟೋರೆಂಟ್ ಇತ್ತೀಚೆಗೆ ವಿಷು ಹಬ್ಬದ ಶುಭಾಶಯ ಕೋರಲು ಸೋಶಿಯಲ್ ಮೀಡಿಯಾದಲ್ಲಿ ಒಂದು ಪೋಸ್ಟರ್ ಹಂಚಿಕೊಂಡಿತ್ತು. ಈ ಪೋಸ್ಟರ್‌ನಲ್ಲಿ ಹಿಂದೂಗಳ ಆರಾಧ್ಯ ದೈವ ಶ್ರೀಕೃಷ್ಣನ ಚಿತ್ರದ ಪಕ್ಕದಲ್ಲೇ ಮಾಂಸಾಹಾರಿ ಚಿಕನ್ ಖಾದ್ಯದ ಫೋಟೋವನ್ನು ಬಳಸಲಾಗಿತ್ತು. ವಿಷು ಹಬ್ಬದಂದು ಸಾಂಪ್ರದಾಯಿಕವಾಗಿ ಸಸ್ಯಾಹಾರಿ ಸದ್ಯ ಉಣ್ಣುವ ಸಂಪ್ರದಾಯವಿರುವಾಗ, ಕೃಷ್ಣನ ಪಕ್ಕದಲ್ಲಿ ಮಾಂಸ ಪ್ರದರ್ಶಿಸಿದ್ದು ಭಕ್ತರ ಆಕ್ರೋಶಕ್ಕೆ ತುಪ್ಪ ಸುರಿದಂತಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶದ ಅಲೆ

ಜಾಹೀರಾತು ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಹೋಟೆಲ್ ವಿರುದ್ಧ ಮುಗಿಬಿದ್ದಿದ್ದಾರೆ.

ಧಾರ್ಮಿಕ ಅಪಹಾಸ್ಯ: “ಇದು ಅಚಾತುರ್ಯವಲ್ಲ, ಹಿಂದೂ ನಂಬಿಕೆಗಳನ್ನು ಉದ್ದೇಶಪೂರ್ವಕವಾಗಿ ಅವಮಾನಿಸುವ ತಂತ್ರ” ಎಂದು ಅನೇಕರು ಕಿಡಿಕಾರಿದ್ದಾರೆ.

ಸಾಂಸ್ಕೃತಿಕ ಅರಿವಿನ ಕೊರತೆ: ಪವಿತ್ರ ಹಬ್ಬದ ಸಮಯದಲ್ಲಿ ಇಂತಹ ಅಸೂಕ್ಷ್ಮ ವರ್ತನೆ ತೋರಿದ್ದು ಯಾಕೆ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.

ಹೊಣೆಗಾರಿಕೆಯಿಂದ ನುಣುಚಿಕೊಂಡ ಹೋಟೆಲ್?

ವಿವಾದ ಕೈಮೀರುತ್ತಿರುವುದನ್ನು ಕಂಡ ರೆಸ್ಟೋರೆಂಟ್ ಮಾಲೀಕರು ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಮೂಲಕ ಕ್ಷಮೆಯಾಚಿಸಿದ್ದಾರೆ. ಆದರೆ ಅಲ್ಲಿಯೂ ಅವರು ತಪ್ಪನ್ನು ಡಿಸೈನರ್ 2 ತಲೆಗೆ ಕಟ್ಟಿದ್ದಾರೆ. “ನಾವು ಈ ಕೆಲಸವನ್ನು ಹೊರಗಿನವರಿಗೆ (External Designer) ನೀಡಿದ್ದೆವು. ಪರಿಶೀಲಿಸದೆ ಪೋಸ್ಟ್ ಮಾಡಿದ್ದಕ್ಕೆ ವಿಷಾದವಿದೆ” ಎಂದು ಹೇಳಿದ್ದಾರೆ.

ಸಾರ್ವಜನಿಕರ ಖಡಕ್ ಪ್ರತಿಕ್ರಿಯೆ:
ರೆಸ್ಟೋರೆಂಟ್ ನೀಡಿದ ಈ ಸಮಜಾಯಿಷಿಯನ್ನು ಜನರು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ. “ಡಿಸೈನರ್ ವಿನ್ಯಾಸ ಮಾಡಿರಬಹುದು, ಆದರೆ ಐಡಿಯಾ ಕೊಟ್ಟವರು ಯಾರು? ಕಂಪನಿಯ ಅನುಮತಿ ಇಲ್ಲದೆ ಪೋಸ್ಟ್ ಮಾಡಲು ಸಾಧ್ಯವೇ ಇಲ್ಲ” ಎಂದು ನೆಟ್ಟಿಗರು ತರ್ಕಬದ್ಧವಾಗಿ ಪ್ರಶ್ನಿಸುತ್ತಿದ್ದಾರೆ. ಕೆಲವರಂತೂ ಈ ಹೋಟೆಲ್ ಅನ್ನು ಬಹಿಷ್ಕರಿಸಬೇಕು ಎಂದು ಅಭಿಯಾನವನ್ನೂ ಶುರು ಮಾಡಿದ್ದಾರೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular