HomeLatest Newsಕೋಟೆನಾಯಕನಹಳ್ಳಿಯಲ್ಲಿ ಅದ್ದೂರಿ ಜಾತ್ರಾ ಸಂಭ್ರಮ: ಬನಶಂಕರಿ ಅಮ್ಮನವರ ರಥೋತ್ಸವ ಹಾಗೂ 5 ದಿನ ಭರ್ಜರಿ ದಾಸೋಹ

ಕೋಟೆನಾಯಕನಹಳ್ಳಿಯಲ್ಲಿ ಅದ್ದೂರಿ ಜಾತ್ರಾ ಸಂಭ್ರಮ: ಬನಶಂಕರಿ ಅಮ್ಮನವರ ರಥೋತ್ಸವ ಹಾಗೂ 5 ದಿನ ಭರ್ಜರಿ ದಾಸೋಹ

ಬೇಸಿಗೆಯ ಬಿಸಿಲಿನ ನಡುವೆಯೂ ಕೋಟೆ ನಾಡಿನಲ್ಲಿ ಈಗ ಹಬ್ಬದ ಕಳೆ ಮನೆಮಾಡಿದೆ. ಗ್ರಾಮದ ಆರಾಧ್ಯ ದೈವಗಳಾದ ಶ್ರೀ ಬನಶಂಕರಿ ಅಮ್ಮನವರು ಹಾಗೂ ಶ್ರೀ ಕೊಲ್ಲಾಪುರದಮ್ಮನವರ ಭವ್ಯ ಜಾತ್ರಾ ಮಹೋತ್ಸವಕ್ಕೆ ಮುಹೂರ್ತ ಫಿಕ್ಸ್ ಆಗಿದ್ದು, ಇಡೀ ಗ್ರಾಮವೇ ನವವಧುವಿನಂತೆ ಕಂಗೊಳಿಸುತ್ತಿದೆ. ಏಪ್ರಿಲ್ 23 ರಿಂದ ಆರಂಭವಾಗಲಿರುವ ಈ ಧಾರ್ಮಿಕ ಉತ್ಸವದ ಸಂಪೂರ್ಣ ಮಾಹಿತಿ ಇಲ್ಲಿದೆ

https://kpdarshan8a28c5a7778-vzxlm.wordpress.com

ಜಾತ್ರೆಯ ವೇಳಾಪಟ್ಟಿ

ಏಪ್ರಿಲ್ 23 (ಚಾಲನೆ): ಮಂಗಳವಾರ ಬೆಳಿಗ್ಗೆಯಿಂದಲೇ ದೇವತೆಗಳಿಗೆ ತೈಲಾಭಿಷೇಕದೊಂದಿಗೆ ಜಾತ್ರೆಗೆ ಅಧಿಕೃತ ಚಾಲನೆ ಸಿಗಲಿದೆ. ಅಂದು ರಾತ್ರಿ ದೇವತೆಗಳ ಮೊದಲ ಉತ್ಸವ ನೋಡುವುದೇ ಕಣ್ಣಿಗೆ ಹಬ್ಬ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಏಪ್ರಿಲ್ 24 (ಪ್ರತಿಷ್ಠಾಪನೆ): ಪುಣ್ಯ ನದಿಗಳಿಂದ ತಂದ ನೀರಿನಿಂದ ಗಂಗಾಪೂಜೆ ನೆರವೇರಲಿದ್ದು, ಹೂವಿನ ಅಲಂಕಾರದಲ್ಲಿ ಅಮ್ಮನವರ ದರ್ಶನ ಪಡೆಯಲು ಭಕ್ತ ಸಾಗರವೇ ಹರಿದುಬರುವ ಸಾಧ್ಯತೆಯಿದೆ.

ಏಪ್ರಿಲ್ 25 (ಮಹಾ ರಥೋತ್ಸವ): ಮಧ್ಯಾಹ್ನ 12:30 ರಿಂದ 1:30 ರ ಶುಭ ಮುಹೂರ್ತದಲ್ಲಿ ಅದ್ದೂರಿ ರಥೋತ್ಸವ ನಡೆಯಲಿದೆ. ಸಂಜೆ ಭಜನೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ರಸದೌತಣವೂ ಇರಲಿದೆ.

ಏಪ್ರಿಲ್ 26-27 (ಸಮಾರೋಪ): ಭಾನುವಾರ ಬಣ್ಣಗಳ ಹಬ್ಬ ಓಕುಳಿ ನಡೆದರೆ, ಸೋಮವಾರ ಮಹಾಮಂಗಳಾರತಿಯೊಂದಿಗೆ ಜಾತ್ರೆಗೆ ಸಮಾರೋಪ ಹಾಡಲಾಗುವುದು.

ಏಪ್ರಿಲ್ 28 (ಶಾಂತಿ ಪೂಜೆ): ಜಾತ್ರೆಯ ಮರುದಿನ ಶಾಂತಿ ಪೂಜೆ ಮತ್ತು ವಿಶೇಷ ಪ್ರಸಾದ ವಿನಿಯೋಗದೊಂದಿಗೆ ಉತ್ಸವ ಸಂಪೂರ್ಣಗೊಳ್ಳಲಿದೆ.

ಭಕ್ತರಿಗಾಗಿ 5 ದಿನಗಳ ಅನ್ನದಾಸೋಹ

ಜಾತ್ರೆಯ ಮತ್ತೊಂದು ವಿಶೇಷವೆಂದರೆ ಇಲ್ಲಿನ ದಾಸೋಹ. ಏಪ್ರಿಲ್ 23 ರಿಂದ 27 ರವರೆಗೆ ಭಕ್ತಾದಿಗಳಿಗಾಗಿ ನಿರಂತರವಾಗಿ ಅನ್ನಸಂತರ್ಪಣೆ ಇರಲಿದೆ. ಬೆಳಿಗ್ಗೆ ತಿಂಡಿಯಿಂದ ಹಿಡಿದು ಮಧ್ಯಾಹ್ನ ಮತ್ತು ರಾತ್ರಿ ಊಟದವರೆಗೆ ಅಚ್ಚುಕಟ್ಟಾದ ವ್ಯವಸ್ಥೆ ಮಾಡಲಾಗಿದೆ. “ಬಂದ ಭಕ್ತರು ಪ್ರಸಾದ ಸವಿಯದೆ ಹೋಗಬಾರದು” ಎನ್ನುವ ಸಂಕಲ್ಪ ಗ್ರಾಮಸ್ಥರದ್ದು.

ಸುರಕ್ಷತೆಗೆ ಆದ್ಯತೆ:

ಜಾತ್ರೆಯಲ್ಲಿ ಯಾವುದೇ ಗೊಂದಲ ಉಂಟಾಗದಂತೆ ತಡೆಯಲು ಉತ್ಸಾಹಿ ಯುವಕರ ‘ಸ್ವಯಂಸೇವಕ ತಂಡ’ ಸನ್ನದ್ಧವಾಗಿದೆ. ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಗ್ರಾಮಸ್ಥರು ಹಗಲಿರುಳು ಶ್ರಮಿಸುತ್ತಿದ್ದಾರೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular