HomeUncategorized10 ಕೋಟಿ ಅಕ್ರಮದಲ್ಲಿ ಸಸ್ಪೆಂಡ್ ಆಗಿದ್ದ ನಗರಸಭೆಯ ಜೂನಿಯರ್ ಇಂಜಿನಿಯರ್: ಕೇವಲ 10 ದಿನಗಳಲ್ಲಿ ಅಮಾನತು...

10 ಕೋಟಿ ಅಕ್ರಮದಲ್ಲಿ ಸಸ್ಪೆಂಡ್ ಆಗಿದ್ದ ನಗರಸಭೆಯ ಜೂನಿಯರ್ ಇಂಜಿನಿಯರ್: ಕೇವಲ 10 ದಿನಗಳಲ್ಲಿ ಅಮಾನತು ಆದೇಶ ವಾಪಸ್: ಅನುಮಾನಕ್ಕೆ ಕಾರಣವಾದ ಇಲಾಖೆ ನಡೆ

ಕೊಪ್ಪಳ: ಬರೋಬ್ಬರಿ 10 ಕೋಟಿ ರೂಪಾಯಿ ಅಕ್ರಮ ವ್ಯವಹಾರ ನಡೆಸಿದ ಆರೋಪದಲ್ಲಿ ಅಮಾನತುಗೊಂಡಿದ್ದ ಕೊಪ್ಪಳ ನಗರಸಭೆಯ ಜೂನಿಯರ್ ಇಂಜಿನಿಯರ್ ಸೋಮಲಿಂಗಪ್ಪ ಪ್ರಕರಣ ಹೊಸ ಟ್ವಿಸ್ಟ್ ಪಡೆದಿದೆ. ಅಮಾನತುಗೊಂಡಿದ್ದ ಹತ್ತೇ ದಿನಗಳಲ್ಲಿ ಪೌರಾಡಳಿತ ಇಲಾಖೆ ಸೋಮಲಿಂಗಪ್ಪ ಅವರ ಅಮಾನತು ಆದೇಶವನ್ನು ಹಿಂಪಡೆದಿದೆ.

ಪೌರಾಡಳಿತ ಇಲಾಖೆಯ ಈ ನಡೆ ಸಾಕಷ್ಟು ಅನುಮಾನಕ್ಕೆ ಕಾರಣವಗಿದೆ. ಸೋಮಲಿಂಗಪ್ಪ ವಿರುದ್ಧ ಸುಮಾರು 10 ಕೋಟಿ ರೂಪಾಯಿ ಅಕ್ರಮ ಆರೋಪ ಕೇಳಿಬಂದಿತ್ತು. 2023-24 ಹಾಗೂ 2024-25ನೇ ಸಾಲಿನ ಸುಮಾರು 336 ಕಾಮಗಾರಿಗಳಲ್ಲಿ ಅವ್ಯವಹಾರ ನಡೆದಿರುವುದು ಲೋಕಾಯುಕ್ತ ತನಿಖೆಯಲ್ಲಿ ಬಹಿರಂಗವಾಗಿತ್ತು. ಈ ಹಿನ್ನೆಲೆಯಲ್ಲಿ ಮಾರ್ಚ್ 16ರಂದು ಪೌರಾಡಳಿತ ಇಲಾಖೆ ಅವರನ್ನು ಅಮಾನತು ಮಾಡಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಮಾನತು ಆದೇಶದ ವಿರುದ್ಧ ಸೋಮಲಿಂಗಪ್ಪ ಧಾರವಾಡ ಹೈಕೋರ್ಟ್‌ನಲ್ಲಿ ತಡೆಯಾಜ್ಞೆ ಪಡೆದುಕೊಂಡಿದ್ದರು. ನ್ಯಾಯಾಲಯದಿಂದ ತಾತ್ಕಾಲಿಕ ತಡೆ ಸಿಕ್ಕ ಹಿನ್ನೆಲೆ, ವಿಚಾರಣೆ ಪೂರ್ಣಗೊಳ್ಳುವವರೆಗೆ ಅಮಾನತು ಆದೇಶವನ್ನು ಹಿಂಪಡೆಯಲಾಗಿದೆ ಎಂದು ಇಲಾಖೆ ತಿಳಿಸಿದೆ. ಇದರಿಂದ ಕೇವಲ 10 ದಿನಗಳೊಳಗೆ ಅಮಾನತು ವಾಪಸ್ ಪಡೆಯಲಾಗಿದ್ದು, ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಲೋಕಾಯುಕ್ತ ತನಿಖೆಯಲ್ಲಿ ಗಂಭೀರ ಅಕ್ರಮಗಳು ಬಹಿರಂಗವಾಗಿದ್ದರೂ, ತ್ವರಿತವಾಗಿ ಆದೇಶ ಹಿಂಪಡೆಯಲ್ಪಟ್ಟಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular