HomeEntertainmentಆಗಸ್ಟ್ 16ಕ್ಕೆ ಕೋಮಲ್ ನಟನೆಯ 'ಕೋಣ' ಟೀಸರ್

ಆಗಸ್ಟ್ 16ಕ್ಕೆ ಕೋಮಲ್ ನಟನೆಯ ‘ಕೋಣ’ ಟೀಸರ್

ತನ್ನ ಟೈಟಲ್ಲಿಂದಲೇ ಭರ್ಜರಿ ಸೌಂಡ್ ಮಾಡಿರುವ ಸೆನ್ಸೇಷನಲ್ ಸ್ಟಾರ್ ಕೋಮಲ್ ನಟನೆಯ ‘ಕೋಣ’ ಚಿತ್ರದ ಟೀಸರ್ ಇದೇ ಆಗಸ್ಟ್ 16ರಂದು ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಲಿದೆ. ಈ ಕುರಿತು ನಿರ್ಮಾಪಕಿ ಬಿಗ್ ಬಾಸ್ ಖ್ಯಾತಿಯ ತನೀಶಾ ಕುಪ್ಪಂಡ ತಮ್ಮ instagram ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ನೈಜ್ಯ ಘಟನಾಧಾರಿತ ಈ ಚಿತ್ರವನ್ನು ಎಂ ಹರಿಕೃಷ್ಣ ನಿರ್ದೇಶಿಸಿದ್ದು, ತನೀಶಾ ಕುಪ್ಪಂಡಾಸ್  ಪ್ರೊಡಕ್ಷನ್ ಹೌಸ್ ಬ್ಯಾನರ್ ನಲ್ಲಿ ತನೀಶಾ ಕುಪ್ಪಂಡ ಸೇರಿದಂತೆ ಕಾರ್ತಿಕ್ ಕಿರಣ್ ಸಂಕಪಾಲ್ ಹಾಗೂ ರವಿಕಿರಣ್ ನಿರ್ಮಾಣ ಮಾಡುತ್ತಿದ್ದಾರೆ. ಉಮೇಶ್ ಆರ್ ಬಿ ಸಂಕಲನ, ವಿನೋದ್ ಕುಮಾರ್ ಬಿ ಅವರ  ಛಾಯಾಗ್ರಹಣವಿದ್ದು, ಶಶಾಂಕ್ ಶೇಷಗಿರಿ ಸಂಗೀತ ಸಂಯೋಜನೆ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular