HomeLive Newsಕೋಲ್ಕತ್ತಾದಲ್ಲಿ ಭೀಕರ ಬೆಂಕಿ ಅವಘಡ: ಚುನಾವಣೆಯಲ್ಲಿ ಬಳಸಲಾಗಿದ್ದ 4,000 ಇವಿಎಂ ಗಳು ಸುಟ್ಟು ಕರಕಲು

ಕೋಲ್ಕತ್ತಾದಲ್ಲಿ ಭೀಕರ ಬೆಂಕಿ ಅವಘಡ: ಚುನಾವಣೆಯಲ್ಲಿ ಬಳಸಲಾಗಿದ್ದ 4,000 ಇವಿಎಂ ಗಳು ಸುಟ್ಟು ಕರಕಲು

ಕೊಲ್ಕತ್ತಾ: ಕೊಲ್ಕತ್ತಾದ ಸರ್ಕಾರಿ ಕಟ್ಟಡವೊಂದರಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಚುನಾವಣೆಯಲ್ಲಿ ಬಳಸಲಾಗಿದ್ದ ಸುಮಾರು 4,000 ಎಲೆಕ್ಟ್ರಾನಿಕ್ ವೋಟಿಂಗ್ ಯಂತ್ರಗಳು (EVM) ಸುಟ್ಟು ಕರಕಲಾಗಿವೆ.

ಈ ಬಗ್ಗೆ ಪಶ್ಚಿಮ ಬಂಗಾಳದ ಸಚಿವ ಕೌಶಿಕ್ ಚೌಧರಿ ಮಾಹಿತಿ ನೀಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ದಕ್ಷಿಣ ಕೊಲ್ಕತ್ತಾದ ಅಲಿಪೋರ್ ಪ್ರದೇಶದಲ್ಲಿರುವ 9 ಅಂತಸ್ತಿನ ಕಟ್ಟಡದಲ್ಲಿ ಭೀಕರ ಬೆಂಕಿ ಕಾಣಿಸಿಕೊಂಡಿತ್ತು. ಈ ಬೃಹತ್ ಕಟ್ಟಡದಲ್ಲಿ ದಕ್ಷಿಣ 24 ಪರಗಣ ಜಿಲ್ಲಾ ಪರಿಷತ್ ಕಚೇರಿ ಸೇರಿದಂತೆ ಇತರ ಇಲಾಖೆಗಳ ಕಚೇರಿಗಳೂ ಕಾರ್ಯನಿರ್ವಹಿಸುತ್ತಿದ್ದವು.

ಬೆಂಕಿಗೆ 4,000 ಇವಿಎಂ ಯಂತ್ರಗಳು ನಾಶವಾಗಿವೆ. ಈ ವರ್ಷ ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ 10 ಮತಕ್ಷೇತ್ರಗಳಲ್ಲಿ ಈ ಇವಿಎಂಗಳನ್ನು ಬಳಸಲಾಗಿತ್ತು ಎಂದು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ರಾಜ್ಯ ಸಚಿವರು ಮಾಹಿತಿ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಘಟನಾ ಸ್ಥಳಕ್ಕೆ ಭೇಟಿ ನೀಡಿದ ನಂತರ ಮಾತನಾಡಿದ ಸಚಿವ ಕೌಶಿಕ್ ಚೌಧರಿ, ಇದು ಸಾಮಾನ್ಯ ಅಗ್ನಿ ಆಕಸ್ಮಿಕದಂತೆ ಕಂಡುಬರುತ್ತಿಲ್ಲ. ಇದರ ಹಿಂದೆ ಏನಾದರೂ ಪಿತೂರಿ ಇದೆಯೇ ಎಂಬುದನ್ನು ನಾವು ಪರಿಶೀಲಿಸುತ್ತಿದ್ದೇವೆ. ಕಟ್ಟಡದ ಮೇಲಿನ ಅಂತಸ್ತುಗಳಿಗೆ ಬೆಂಕಿ ಹೇಗೆ ತಲುಪಿತು ಎಂಬುದು ಇನ್ನು ಸ್ಪಷ್ಟವಾಗಿಲ್ಲ ಎಂದಿದ್ದಾರೆ.

ಆರಂಭದಲ್ಲಿ ಕಟ್ಟಡದ ಎರಡನೇ ಮತ್ತು ಮೂರನೇ ಅಂತಸ್ತುಗಳಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. 4, 5 ಮತ್ತು 6ನೇ ಅಂತಸ್ತುಗಳಿಗೆ ಯಾವುದೇ ಹಾನಿಯಾಗಿಲ್ಲ. ವಿಚಿತ್ರವೆಂದರೆ ನೇರವಾಗಿ 7 ಮತ್ತು 8ನೇ ಅಂತಸ್ತುಗಳಿಗೆ ಬೆಂಕಿ ಹರಡಿದೆ. ಅದು ಹೇಗೆ ಹರಡಿತು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ಬೆಂಕಿ ಕಾಣಿಸಿಕೊಂಡ ಸುಮಾರು 24 ಗಂಟೆಗಳ ನಂತರವೂ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ನಿರತರಾಗಿದ್ದರು ಎಂದು ವಿವರಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular