HomeKarnatakaBIG NEWS: ಜಿಲ್ಲಾಸ್ಪತ್ರೆಯಿಂದ ನವಜಾತ ಶಿಶುವನ್ನೇ ಕದ್ದೊಯ್ದ ಕಳ್ಳಿಯರು; ಓರ್ವ ಮಹಿಳೆ ಅರೆಸ್ಟ್; ತಾಯಿ ಮಡಿಲು...

BIG NEWS: ಜಿಲ್ಲಾಸ್ಪತ್ರೆಯಿಂದ ನವಜಾತ ಶಿಶುವನ್ನೇ ಕದ್ದೊಯ್ದ ಕಳ್ಳಿಯರು; ಓರ್ವ ಮಹಿಳೆ ಅರೆಸ್ಟ್; ತಾಯಿ ಮಡಿಲು ಸೇರಿದ ಕಂದಮ್ಮ

ಕೋಲಾರ: ಜಿಲ್ಲಾಸ್ಪತ್ರೆಯ ಹೆರಿಗೆ ವಾರ್ಡ್ ನಿಂದಲೇ ನವಜಾತ ಶಿಶುವನ್ನು ಮೂವರು ಕಳ್ಳಿಯರು ಕದ್ದೊಯ್ದ ಘಟನೆ ಕೋಲಾರದಲ್ಲಿ ನಡೆದಿದೆ.

ಕೋಲಾರದ ಎಸ್.ಎನ್.ಜಿಲ್ಲಾಸ್ಪತ್ರೆಯ ಹೆರಿಗೆ ವಾರ್ಡ್ ನಿಂದ ಮೂವರು ಮಹಿಳೆಯರು ನಾಲ್ಕುದಿನದ ಕಂದಮ್ಮನನ್ನು ಕದ್ದು ಬ್ಯಾಗ್ ನಲ್ಲಿಟ್ಟುಕೊಂಡು ಎಸ್ಕೇಪ್ ಆಗಿದ್ದರು. ತಕ್ಷಣ ಕಾರ್ಯಾಚರಣೆ ನಡೆಸಿದ ಪೊಲೀಸರು ನವಜಾತ ಶಿಶುವನ್ನು ರಕ್ಷಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೆರಿಗೆ ವಾರ್ಡ್ ನಲ್ಲಿ ಮಗುವಿನ ತಾಯಿ ನಿದ್ದೆಗೆ ಜಾರಿದ್ದ ವೇಳೆ ಮೂವರು ಅಪರಿಚಿತ ಮಹಿಳೆಯರು ವಾರ್ಡ್ ಗೆ ಬಂದು ಮಗುವನ್ನು ಕದ್ದೊಯ್ದಿದ್ದಾರೆ. ಯಾರಿಗೂ ಗೊತ್ತಾಗದಂತೆ ಕಾಲೇಜು ಬ್ಯಾಗ್ ನಲ್ಲಿ ಮಗುವನ್ನಿಟ್ಟುಕೊಂಡು ಸ್ಥಳದಿಂದ ಜಾಗ ಖಾಲಿ ಮಾಡಿದ್ದಾರೆ. ಆಸ್ಪತ್ರೆಯಿಂದ ಹೊರ ಬಂದ ಮೂವರು ಆಟೋ ಹತ್ತಿ ಹೋಗಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಮಗು ಕಳ್ಳತನವಾದ ಬಗ್ಗೆ ಗೊತ್ತಾಗುತ್ತಿದ್ದಂತೆ ತಕ್ಷಣ ಎಚ್ಚೆತ್ತ ಪೊಲೀಸರು ಕ್ಷಿಪ್ರ ಕಾರ್ಯಾಚರನೆ ನಡೆಸಿದ್ದರೆ. ತಮಿಳುನಾಡಿನ ಬೇರಿಕೆ ಬಳಿ ಮಗುವನ್ನು ರಕ್ಷಣೆ ಮಾಡಿದ್ದಾರೆ. ಓರ್ವ ಮಹಿಳೆಯನ್ನು ಬಂಧಿಸಿದ್ದು, ಇನ್ನಿಬ್ಬರು ಎಸ್ಕೇಪ್ ಆಗಿದ್ದಾರೆ. ನವಜಾತ ಶಿಶುವನ್ನು ಮತ್ತೆ ತಾಯಿ ಮಡಿಲಿಗೆಸೇರಿಸಿದ್ದಾರೆ.

 

For Latest News Updates, Join Our Whatsapp Community🚩
RELATED ARTICLES

Most Popular