HomeKarnatakaSHOCKING NEWS: ಈಜಲು ತೆರಳಿದ್ದಾಗ ದುರಂತ: ತಂಗಿಯ ಕಣ್ಣೆದುರೇ ಕೃಷಿ ಹೊಂಡದಲ್ಲಿ ಮುಳುಗಿ ಅಣ್ಣ ಸಾವು

SHOCKING NEWS: ಈಜಲು ತೆರಳಿದ್ದಾಗ ದುರಂತ: ತಂಗಿಯ ಕಣ್ಣೆದುರೇ ಕೃಷಿ ಹೊಂಡದಲ್ಲಿ ಮುಳುಗಿ ಅಣ್ಣ ಸಾವು

ಕೋಲಾರ: ಕೃಷಿ ಹೊಂಡದಲ್ಲಿ ಈಜಲು ತೆರಳಿದ್ದ ವ್ಯಕ್ತಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಕೋಲಾರ ಜಿಲ್ಲೆಯ ನಾಗನಾಳ ಗ್ರಾಮದಲ್ಲಿ ನಡೆದಿದೆ.

ಗೌತಮ್ ಗೌಡ (26) ಮೃತ ವ್ಯಕ್ತಿ. ಮೈಸೂರು ಮೂಲದ ರಾಘವೇಂದ್ರ ಬಡಾವಣೆ ನಿವಾಸಿ. ಗೌತಮ್ ತನ್ನ ತಂದೆಯ ಊರಾದ ವೇಮಗಲ್ ಬಳಿಯ ನಾಗನಾಳ ಗ್ರಾಮಕ್ಕೆ ಬಂದಿದ್ದ. ಈ ವೇಳೆ ಸಹೋದರಿ ಜೊತೆ ಕೃಷಿ ಹೊಂಡಕ್ಕೆ ತೆರಳಿದ್ದ.

ಸರಿಯಾಗಿ ಈಜು ಬಾರದಿದ್ದರೂ ಈಜಲೆಂದು ಕೃಷಿ ಹೊಂಡಕ್ಕೆ ಇಳಿದಿದ್ದಾನೆ. ಅಣ್ಣ ಈಜುವುದನ್ನು ತಂಗಿ ತನ್ನ ಮೊಬೈಲ್ ನಲ್ಲಿ ಸೆರೆಹಿಡಿಯುತ್ತಿದ್ದಾಳೆ. ಆರಂಭದಲ್ಲಿ ಚನ್ನಾಗಿಯೇ ಈಜುತ್ತಿದ್ದ ಗೌತಮ್ ಕೆಲ ಸಮಯದಲ್ಲಿ ಈಜುತ್ತಲೇ ಕ್ರಮೇಣ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಅಣ್ಣ ನೀರಿನಲ್ಲಿ ಮುಳುಗುತ್ತಿದ್ದರೂ ವಿಡಿಯೋ ಮಾಡುತ್ತಿದ್ದ ತಂಗಿಗೆ ಅಣ್ಣನ ಸಾವಿನ ದವಡೆಗೆ ಸಿಲುಕಿರುವ ಅರಿವಾಗಿಲ್ಲ. ತಂಗಿಯ ಕಣ್ಣೆದೆರೇ ಅಣ್ಣ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular