HomeKarnatakaSHOCKING NEWS: ಅಪ್ರಾಪ್ತ ಮಗಳನ್ನು ಕೊಂದು ಸುಟ್ಟು ಹಾಕಿದ ದುಷ್ಕರ್ಮಿಗಳು; ತಂದೆ, ಅಳಿಯನಿಂದಲೇ ಘೋರ ಕೃತ್ಯ

SHOCKING NEWS: ಅಪ್ರಾಪ್ತ ಮಗಳನ್ನು ಕೊಂದು ಸುಟ್ಟು ಹಾಕಿದ ದುಷ್ಕರ್ಮಿಗಳು; ತಂದೆ, ಅಳಿಯನಿಂದಲೇ ಘೋರ ಕೃತ್ಯ

ಕೋಲಾರ: ಅಪ್ರಾಪ್ತ ಮಗಳನ್ನು ಕೊಂದು ಶವ ಸುಟ್ಟು ಹಾಕಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ತಂದೆ ಹಾಗೂ ಅಳಿಯನೇ ಕೃತ್ಯವೆಸಗಿರುವುದು ಬಯಲಾಗಿದೆ.

ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಮುಸ್ಟೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೇ21ರಂದು ಅರ್ಚಿತಾ ಎಂಬ ಅಪ್ರಾಪ್ತ ಮಗಳನ್ನು ತಂದೆ ರವಿ ಹಾಗೂ ಅಳಿಯ ಕೊಲೆ ಮಾಡಿ ಬಳಿಕ ಮೃತದೇಹವನ್ನು ಸುಟ್ಟು ಹಾಕಿದ್ದರು ಎಂಬುದು ತನಿಖೆಯಿಂದ ಬಯಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅರ್ಚಿತಾಳ ಪ್ರೇಮ ವಿವಾಹಕ್ಕೆ ವಿರೋಧ ವ್ಯಕ್ತಪಡಿಸಿದ್ದ ತಂದೆ, ಬೇರೊಬ್ಬರ ಜೊತೆ ವಿವಾಹ ಮಾಡಿದ್ದ. ಆದರೆ ಅರ್ಚಿತಾ ಆತನೊಂದಿಗೆ ಸಂಸಾರ ನಡೆಸಲು ನಿರಾಕರಿಸಿದ್ದಳು. ಇದರಿಂದ ತಂದೆ ಹಾಗೂ ಅಳಿಯ ಇಬ್ಬರು ಸೇರಿ ಅರ್ಚಿತಾಳನ್ನು ಕೊಲೆಗೈದು ಬಳಿಕ ಶವವನ್ನು ಸುಟ್ಟು ಹಾಕಿದ್ದಾರೆ ಎಂದು ತಿಳಿದುಬಂದಿದೆ.

For Latest News Updates, Join Our Whatsapp Community🚩
RELATED ARTICLES

Most Popular